GBnewskannada ರೋಣ: ದೇಶ ನಮಗೇನು ಕೊಟ್ಟಿದೆ..? ಎನ್ನುವುದಕ್ಕಿಂತ ದೇಶಕ್ಕೆ ನಾವೇನು ಕೊಟ್ಟಿದ್ದೇವೆ..? ಎನ್ನುವುದು ಒಂದು ವಾಡಿಕೆಯ ಮಾತಿದೆ. ಸತತ 26 ವರ್ಷಗಳ ಕಾಲ ಪ್ರಾಣವನ್ನು ಪಣಕ್ಕಿಟ್ಟು ಗಡಿಭಾಗದಲ್ಲಿ ಸೇವೆಸಲ್ಲಿಸಿದ ಸೈನಿಕನಿಗೆ ಸರ್ಕಾರವೇ ಕೊಟ್ಟ ಭೂಮಿ ಸೈನಿಕನ ಪಾಲಾಗಲಿಲ್ಲ. ಸರ್ಕಾರವೇ ಕಸಿದುಕೊಳ್ಳುವ ಹುನ್ನಾರ ನಡೆಸಿದೆ ಎಂದು ಹೇಳಬಹುದು ಅನಾರೋಗ್ಯದ ಪಾಲಾಗಿ ಭೂಮಿಯನ್ನು ಮಾರಿಕೊಳ್ಳಲು ಕೂಡ ಅವಕಾಶ ಕೊಡಲಿಲ್ಲ ಇಲ್ಲಿನ ವ್ಯವಸ್ಥೆ.! ಭೂಮಿ ಕಾಣದೆ ಮತ್ತು ರೋಗ ಗುಣವಾಗದೆ ಅದರ ಗುಂಗಿನಲ್ಲಿ ಪ್ರಾಣ ಬಿಟ್ಟ ರೋಣ ತಾಲೂಕಿನ ಮಾಜಿ ಸೈನಿಕ ಬಸಪ್ಪ ಅಬ್ಬಿಗೇರಿ.! ದೇಶದ ಇತಿಹಾಸ ಚರಿತ್ರೆ ದೊಳಗೆ ಒಬ್ಬ ಸೈನಿಕನಿಗೆ ಈ ರಾಜ್ಯದ ಸರ್ಕಾರ ಮತ್ತು ರಾಜಕಾರಣಿಗಳು ಹಾಗೂ ಆಡಳಿತವರ್ಗ ನ್ಯಾಯ ಕೊಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಮಾಜಿ ಸೈನಿಕನ ಚಿಕಿತ್ಸೆಗಾಗಿ ಭೂಮಿ ಮಾರಿಕೊಳ್ಳಲು ಮಾಜಿ ಸೈನಿಕರ ಸಂಘದ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ
ಹಾಗಾದರೆ ಈ ಸೈನಿಕನ ಸಾವಿಗೆ ಹೊಣೆ ಯಾರು..?
ಈ ಸಾವಿಗೆ ಹೊಣೆಯಾರು..? ವಿಶೇಷ ಸಂಚಿಕೆ ಜಿಬಿ ನ್ಯೂಸ್ ಕನ್ನಡ ವಾಹಿನಿಯಲ್ಲಿ ವೀಕ್ಷಿಸುತ್ತಿರಿ