ಶ್ರೀನಾಥ್ ಅತಿ ಶೀಘ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ?; ಇಕ್ಬಾಲ್ ಅನ್ಸಾರಿ ದಾರಿ ಯಾವುದು?

ಗಂಗಾವತಿ ಕಾಂಗ್ರೆಸ್ ಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ, ಎಚ್ ಆರ್ ಶ್ರೀನಾಥ್ ಮತ್ತು ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಟಿಕೆಟ್ ಗಾಗಿ ಜುಗಲ್ ಬಂದಿಗೆ ಬಿದ್ದಿದ್ದಾರೆ ಡಿಕೆ ಶಿವಕುಮಾರ್ ಗೆ ಆಪ್ತರಾದ ಶ್ರೀನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ

ಬೆಂಗಳೂರು ನಗರದ ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು ರವರ ನಿವಾಸದಲ್ಲಿ ಇಂದು ಎಚ್ ಆರ್ ಶ್ರೀನಾಥ್ ಮಾಜಿ ವಿಧಾನ ಪರಿಷತ್ ಸದಸ್ಯರು ಭೇಟಿಯಾಗಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು, ಮುಂದಿನ ವಿಧಾನಸಭಾ ಚುನಾವಣೆಯ ರೂಪರೇಷೆಗಳ ಬಗ್ಗೆ ಚರ್ಚೆ ಮಾಡಿದರು ಅನ್ನುವ ಸುದ್ದಿ ಹೊರಟಿದೆ ಮತ್ತು ಎತ್ತರ ಶ್ರೀನಾಥ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ವೇದಿಕೆ ರಡಿ ಮಾಡಿಕೊಳ್ಳಲು ಇಂದಿನ ಭೇಟಿ ಉದ್ದೇಶ ಎನ್ನಲಾಗುತ್ತಿದೆ.

ಇಕ್ಬಾಲ್ ಅನ್ಸಾರಿ ಅವರ ದಾರಿ ಯಾವುದು?
ಈಗಾಗಲೇ ಕಾಂಗ್ರೆಸ್ ನ ಮುಂದಿನ ವಿಧಾನಸಭಾ ಅಭ್ಯರ್ಥಿ ಎಂದೇ ಘೋಷಣೆಯಾಗಿರುವ ಇಕ್ಬಾಲ್ ಅನ್ಸಾರಿ ಅವರು ರಾಜಕೀಯ ಬೆಳವಣಿಗಳನ್ನು ಗಮನಿಸುತ್ತಿದ್ದಾರೆ, ಮುಂದೆ ಅವರು ಯಾವ ದಾರಿ ಹಿಡಿಯುತ್ತಾರೆ ಅನ್ನುವುದನ್ನು ಜನರು ಕಾತರದಿಂದ ನೋಡುತ್ತಿದ್ದಾರೆ.
ಒಂದು ವೇಳೆ ಎಚ್ ಆರ್ ಶ್ರೀನಾಥ್ ಕಾಂಗ್ರೆಸ್ ಸೇರ್ಪಡೆ ಆದರೆ ವಿಧಾನಸಭೆ ಟಿಕೆಟ್ ಎಚ್ ಆರ ಶ್ರೀನಾಥ್ ಅವರಿಗೆ ಸಿಗುತ್ತದೆ ಎನ್ನುವ ಬಲವಾದ ನಂಬಿಕೆ ಎಚ್ ಆರ್ ಶ್ರೀನಾಥ್ ಅಭಿಮಾನಿ ಬಳಗದಲ್ಲಿ ಇದೆ,
ಈಗಾಗಲೇ ಕಾಂಗ್ರೆಸ್ ಸೇರ್ಪಡೆಗಾಗಿ ಶ್ರೀನಾಥ್ ಅವರು ಎಲ್ಲ ಏರ್ಪಾಡುಗಳನ್ನು ಮಾಡಿಕೊಂಡಿದ್ದಾರೆ ಇನ್ನೇನು ಕಾಂಗ್ರೆಸ್ ಸೇರ್ಪಡೆಯಾಗುವುದು ಒಂದು ಬಾಕಿ ಉಳಿದಿದೆ ಶ್ರೀನಾಥ್ ಅವರ ತಂದೆ ಎಚ್ಡಿ ರಾಮುಲು ಅವರು ಕಾಂಗ್ರೆಸ್ ಹಳೆಯ ಮುತ್ಸದ್ದಿ ರಾಜಕಾರಣಿ ಮತ್ತು ಇಂದಿರಾಗಾಂಧಿ ಅವರ ನಿಕಟ ವರ್ತಿ ಅಂತಲೇ ಹೇಳಬಹುದು ಕುಟುಂಬದ ಹಿನ್ನೆಲೆ ನೋಡುವುದಾದರೆ ಡಿಕೆ ಶಿವಕುಮಾರ್ ಅವರು ಕೂಡ ಎಚ್ ಆರ್ ಜಿ ಕುಟುಂಬಕ್ಕೆ ತೀರಾ ಹತ್ತಿರದವರು, ರಾಮುಲು ಅವರಿಂದಲೇ ಡಿಕೆ ಶಿವಕುಮಾರ್ ಅವರು ರಾಜಕೀಯ ಬೆಳವಣಿಗೆ ಕಂಡವರು ಅನ್ನುವುದು ಕೂಡ ಜನಜನಿತ ಡಿಕೆ ಶಿವಕುಮಾರ್ ಅವರ ಕೃಪಾಕಟಾಕ್ಷದಿಂದ ಶ್ರೀನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕೇಸಿಗುತ್ತದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶ್ರೀನಾಥ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎನ್ನುವುದು ಗಂಗಾವತಿ ಕ್ಷೇತ್ರದ ಜನರ ಬಾಯಲ್ಲಿ ಹರಿದಾಡುತ್ತಿದೆ.
ಇದರಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ರಾಜಕೀಯ ಹಿನ್ನಡೆ ಉಂಟಾಗಬಹುದು ಮತ್ತು ಇಕ್ಬಾಲ್ ಅನ್ಸಾರಿ ಅವರು ಜನರ ಮಧ್ಯ ಬಂದು ರಾಜಕೀಯ ಮಾಡಲು ಶಕ್ತರಿಲ್ಲ ಅನ್ನುವುದು ಕೂಡ ಈಗಾಗಲೇ ಗಂಗಾವತಿ ಕ್ಷೇತ್ರದಲ್ಲಿ ಮನೆಮಾತಾಗಿದೆ.
ಒಂದು ವೇಳೆ ಶ್ರೀನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ಲಭಿಸಿದ್ದೇ ಆದರೆ ಇಕ್ಬಾಲ್ ಅನ್ಸಾರಿ ಮತ್ತು ಅವರ ಬಳಗಕ್ಕೆ ಹಿನ್ನಡೆಯಂತು ಕಾದಿಟ್ಟ ಬುತ್ತಿ,
ಮುಂದೆ ಆಗುವ ಅವಮಾನವನ್ನು ತಪ್ಪಿಸಿಕೊಳ್ಳಲು ಇಕ್ಬಾಲ್ ಅನ್ಸಾರಿ ಅವರು ಕೂಡ ಯೋಚನೆ ಮಾಡುವುದರಲ್ಲಿ ರಾಜಕೀಯ ತಂತ್ರ ಮಾಡುವುದರಲ್ಲಿ ಎತ್ತಿದ ಕೈ ಮುಂದೆ ನಡೆಯುವ ಬೆಳವಣಿಗೆಗಳನ್ನು ಇಕ್ಬಾಲ್ ಅನ್ಸಾರಿ ಅವರು ಯಾವ ರೀತಿ ಹೆದರಿಸುತ್ತಾರೆ ಅನ್ನುವುದನ್ನ ಕಾದುನೋಡಬೇಕಾಗಿದೆ

ಇಂದು ಶ್ರೀನಾಥ್ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಮುಖಂಡರಾದ ರಘು ಗುಜ್ಜಲ್ ಹಾಗೂ ಹೆಚ್ಎಸ್ ಭರತ್ ಉಪಸ್ಥಿತರಿದ್ದರು

Leave a Reply

Your email address will not be published.

ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ
error: Content is protected !!