ವಿಜಯಪುರ: ಉತ್ತರಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ಛತ್ತೀಸಗಢ ರಾಜ್ಯಗಳಲ್ಲಿ ಜನರು ಕಾಂಗ್ರೆಸ್ ನಾಯಕರ ಚಡ್ಡಿ ಕಳಚಿ ಕಳುಹಿಸಿದ್ದು, ದೇಶದಲ್ಲೇ ಕಾಂಗ್ರೆಸ್ ಚಡ್ಡಿ ಕಳಚಿದೆ. ಚಾಮುಂ ಡೇಶ್ವರಿ ಕ್ಷೇತ್ರದಲ್ಲಿ ಮತದಾರರು ಸಿದ್ದರಾಮಯ್ಯ ಚಡ್ಡಿ ಮಾತ್ರವಲ್ಲ, ಪಂಚೆಯನ್ನೂ ಕಳಚಿ ಕಳುಹಿಸಿ ದ್ದಾರೆ. ಇದರಿಂದ ಹರಿದ ಚಡ್ಡಿ ಸಡಿಲವಾಗಿರುವ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ಬೇರೆಯವರ ಚಡ್ಡಿ ಸುಡಲು ಮುಂದಾಗಿ ದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಹೇಳಿಕೆ ನೀಡುವ ಕ್ರಮದ ಯತ್ನದಿಂದ ಈ ಹಿಂದೆ ನೆಹರು, ಇಂದಿರಾ ಗಾಂಧಿಯಂತಹವರೇ ಕೈ ಸುಟ್ಟುಕೊಂಡಿದ್ದಾರೆ. ಇದೀಗ ಸಿದ್ದರಾಮಯ್ಯ ಅಂತಹದ್ದೇ ಕೆಲಸಕ್ಕೆ ಮುಂದಾಗಿದ್ದು, ಸಿದ್ದರಾಮಯ್ಯ ಬೆಂದು ಹೋಗಲಿದ್ದು, ಕಾಂಗ್ರೆಸ್ ನಿರ್ನಾಮ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದರು.![]() ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ರಾಷ್ಟ್ರಭಕ್ತಿ ಕಾರ್ಯ, ರಾಷ್ಟ್ರಭದ್ರತೆಗೆ ಆದ್ಯತೆ ನೀಡುವ ಸಂಘಟನೆ ಆಗಿದೆಯೇ ವಿನಃ ರಾಜಕೀಯ ಪಕ್ಷ ಅಲ್ಲ ಆದರೆ, ಸಿದ್ದರಾಮಯ್ಯನಂತಹವರು ಇಲ್ಲಸಲ್ಲದ ಹೇಳಿಕೆ ನೀಡುವ ಮೂಲಕ ತಮ್ಮ ವ್ಯಕ್ತಿತ್ವ ತಾವೇ ಕಳೆದುಕೊಳ್ಳುತ್ತಿದ್ದಾರೆ. ಜೆಡಿಎಸ್ನೊಂದಿಗೆ ಇರುವ ಅಲ್ಪಸಂಖ್ಯಾತ ಮತಬ್ಯಾಂಕ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಮತ ತುಷೀಕರಣಕ್ಕಾಗಿ ಸಂಘ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗಳು ಅವರಿಗೆ ಮುಳುವಾಗಲಿವೆ ಎಂದರು. |
ಸೋಮವಾರ ವಾಯವ್ಯ ಶಿಕ್ಷಕರ- ಪದವೀ ಧರರ ಮೇಲ್ಮನೆ ಕ್ಷೇತ್ರದ ಚುನಾವಣೆ ಪ್ರಚಾರಕ್ಕಾಗಿ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು, ಹರುಕ ಚಡ್ಡಿ ಹಾಕಿದ್ದರಿಂದ ಬೇರೆಯವರ ಚಡ್ಡಿ ಸುಡಲು ಹೊರಟಿದ್ದಾರೆ. ಜನರು ಕಾಂಗ್ರೆಸ್ ನಾಯಕರ ಚಡ್ಡಿ ಸುಟ್ಟಿರುವ ಸಿಟ್ಟಿನಿಂದ ನಮ್ಮ ವಿರುದ್ಧ ಸಿಟ್ಟು ತೀರಿಸಿಕೊಳ್ಳುತ್ತಿದ್ದಾರೆ. ಎಲ್ಲೆಡೆ ಚಡ್ಡಿ ಕಳೆದುಕೊಂಡಿರುವ ನೀವು, ನಿಮ್ಮ ಚಡ್ಡಿ ಕಳೆದು ಕೊಂಡಿರುವ ಆತಂಕದಲ್ಲಿ ಆರ್ ಎಸ್ಎಸ್ ಚಡ್ಡಿ ಸುಡಲು ಮುಂದಾಗಿದ್ದೀರಿ. ಭವಿಷ್ಯದಲ್ಲಿ ದೇಶದ ಜನರು ಅಳಿದುಳಿದ ನಿಮ್ಮ ಚಡ್ಡಿಯನ್ನು ಕಸಿದು ಬೆತ್ತಲೆ ಮಾಡುತ್ತಾರೆ. ಹೀಗಾಗಿ ತಕ್ಷಣ ಕಾಂಗ್ರೆಸ್ ನಾಯಕರು ಇಂಥ ಹುಚ್ಚು ಚಟುವಟಿಕೆ ನಿಲ್ಲಿಸಬೇಕು ಎಂದರು.