GBnewskannada ಕಾರಟಗಿ : ಹಳ್ಳಿ ಜನರ ಬದುಕು ಬೀದಿಗೆ ತಳ್ಳುತ್ತಿರುವ ಗಂಗಾವತಿ ಅಬಕಾರಿ ವಲಯ ನಿರೀಕ್ಷಕರು, ಗಂಗಾವತಿ ಕಾರಟಗಿ ತಾಲೂಕಿನಾದ್ಯಂತ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ನೆಪಮಾತ್ರಕ್ಕೆ ಅಲ್ಲೊಂದು-ಇಲ್ಲೊಂದು ದಾಳಿ ನಡೆಸಿ ನಾಮಕೆವಾಸ್ತೆ ಪ್ರಕರಣಗಳನ್ನು ದಾಖಲಿಸಿ ಪರದೆ ಕೆ ಪೀಛೆ ಎನ್ನುವಂತೆ ರಾಜಾರೋಷವಾಗಿ ಅನಧಿಕೃತ ಮದ್ಯದಂಗಡಿಗಳು ಹಳ್ಳಿಗಳಲ್ಲಿ ತಲೆಯೆತ್ತಿದರು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ, ಸಾರ್ವಜನಿಕರ ತೆರಿಗೆ ಹಣದಲ್ಲಿ ತಿಂಗಳ ನೌಕರಿಯ ಸಂಬಳ ಪಡೆಯುವ ಗಂಗಾವತಿ ಅಬಕಾರಿ ವಲಯ ಅಧಿಕಾರಿಗಳು ಸಾರ್ವಜನಿಕರ ಹಿತಾಸಕ್ತಿ ಬದಿಗೊತ್ತಿ ಅನಧಿಕೃತ ಮದ್ಯದ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಎರಡು ವರ್ಷಗಳಿಂದ ನೀಡುತ್ತಿರುವ ದೂರುಗಳಿಗೆ ಪ್ರತ್ಯುತ್ತರಿಸದೆ ಮೌನವಹಿಸಿದ್ದು ವಿಪರ್ಯಾಸ ಸಂಗತಿಯಾಗಿದೆ, ಹೌದು ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪಿನಲ್ಲಿ ನಿತ್ಯ ರಾಜಾರೋಷವಾಗಿ ಹಗಲು-ರಾತ್ರಿಯೆನ್ನದೆ ಹಲವು ಅನಧಿಕೃತ ಮದ್ಯದಂಗಡಿಗಳ ತಲೆಯೆತ್ತಿ ಹಳ್ಳಿ ಜನರ ಬದುಕು ಬೀದಿಗೆ ಬಂದು ಗ್ರಾಮದ ಸ್ವಾಸ್ಥ್ಯ ಹಾಳಾಗುತ್ತಿದ್ದರೆ ಅಬಕಾರಿ ನಿರೀಕ್ಷಕರು ಯಾವುದೇ ಕ್ರಮ ಕೈಗೊಳ್ಳದೇ ‘ಮೌನಂ ಸಮ್ಮತಿ ಲಕ್ಷಣಂ.! ಎನ್ನುವಂತೆ, ಕೊಟ್ಟ ದೂರುಗಳಿಗೆ ಪ್ರತ್ಯುತ್ತರಿಸದೆ ಕರ್ತವ್ಯ ನಿರ್ಲಕ್ಷ್ಯವಹಿಸಿದ್ದಾರೆ, 2020ರಲ್ಲಿ ಹಾಗೂ 2021ರಲ್ಲಿ ಹಲವು ಬಾರಿ ಬಸವಣ್ಣ ಕ್ಯಾಂಪ್ ನಲ್ಲಿ ಅನಧಿಕೃತ ಮದ್ಯದಂಗಡಿಗಳನ್ನು
ತೆರವುಗೊಳಿಸಲು ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಗ್ರಾಮದ ಸ್ವಾಸ್ಥ್ಯ ಕಾಪಾಡಲು ಅನಧಿಕೃತ ಮದ್ಯ ಮಾರಾಟವನ್ನು ಚಿತ್ರೀಕರಣ ಮಾಡಿ ದೂರು ಸಲ್ಲಿಸಿದರೂ ಅನಧಿಕೃತ ಮದ್ಯದಂಗಡಿಗಳ ನಿಯಂತ್ರಿಸುವಲ್ಲಿ ಗಂಗಾವತಿ ಅಬಕಾರಿ ವಲಯ ನಿರೀಕ್ಷಕರು ಸಂಪೂರ್ಣ ವಿಫಲರಾಗಿದ್ದಾರೆ, ಅಬಕಾರಿ ಡಿಸಿ ಸೆಲಿನಾ ಇವರಿಗೂ ಬಸವಣ್ಣ ಕ್ಯಾಂಪಿನಲ್ಲಿ ಅನಧಿಕೃತ ಮದ್ಯದಂಗಡಿಗಳನ್ನು ನಿಯಂತ್ರಿಸಲು ದೂರು ನೀಡಿದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಸಾರ್ವಜನಿಕರ ಹಿತಾಸಕ್ತಿಯನ್ನು ಬದಿಗೊತ್ತಿದ ಅವರ ಇನ್ನೊಂದು ಮುಖ ಎಸಿಬಿ ರೈಡ್ ನಲ್ಲಿ ಗೊತ್ತಾಗಿದೆ ‘ಯಥಾ ರಾಜ ತಥಾ ಪ್ರಜಾ.! ಎನ್ನುವಂತೆ ಸಾರ್ವಜನಿಕ ಹಿತಾಸಕ್ತಿ ಬದಿಗೊತ್ತಿದ ಹಿರಿಯ ಅಧಿಕಾರಿಗಳ ಮಾರ್ಗವನ್ನೇ ಕಿರಿಯ ಅಬಕಾರಿ ಅಧಿಕಾರಿಗಳು ಅನುಸರಿಸುತ್ತಿರಬಹುದೆ..? ಎನ್ನುವ ಅನುಮಾನ ಮೂಡುತ್ತಿದೆ, ಒಟ್ಟಾರೆ ಹೇಳುವುದಾದರೆ ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪಿನಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ ಕೂಲಿಕಾರ್ಮಿಕರು ಅಧಿಕವಾಗಿರುವ ಈ ಗ್ರಾಮದ ಹಳ್ಳಿಯ ಜನರ ಬದುಕು ಬೀದಿಗೆ ತಳ್ಳುವ ಅನಧಿಕೃತ ಮದ್ಯದಂಗಡಿಗಳ ಹಾವಳಿ ನಿಲ್ಲಿಸಬೇಕು ಇಲ್ಲದಿದ್ದರೆ ಜೀಬಿ ನ್ಯೂಸ್ ಕನ್ನಡ ವಾಹಿನಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುತ್ತದೆ ಹಾಗೂ ಈ ಕ್ಯಾಂಪಿನಲ್ಲಿ ಯಾವುದೇ ರೀತಿಯ ಅಬಕಾರಿ ಸನ್ನದ್ದು ಗಳಿಗೆ ಜಿಲ್ಲಾ ಅಬಕಾರಿ ಇಲಾಖೆ ಪರವಾನಿಗೆ ನೀಡಬಾರದು ಎಂದು ಈ ಮೂಲಕ ಒತ್ತಾಯಿಸುತ್ತಿದೆ