ತಾಜ್‌ನ ರಹಸ್ಯ ಕೋಣೆಗಳ ಪೋಟೋ ಬಿಡುಗಡೆ; ಒಳಗೇನಿದೆ?

ನವದೆಹಲಿ (ಮೇ.17): ಜಗತ್ ಪ್ರಸಿದ್ಧ ತಾಜ್‌ಮಹಲ್‌ನ (Taj

Mahal) ನೆಲಮಹಡಿಯಲ್ಲಿ (Underground) 22 ರಹಸ್ಯ ಕೋಣೆಗಳಿವೆ. ಅವುಗಳಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಬೀಗ ತೆರೆಸಬೇಕು ಎಂಬ ವಿವಾದ ಕೋರ್ಟ್‌ಗೆ (Court) ಹೋಗುವುದಕ್ಕೂ ಮೊದಲೇ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್‌ಐ) ಆ ಕೋಣೆಗಳ ಒಳಗಿನ ಚಿತ್ರಗಳನ್ನು (Photos) ಸಾರ್ವಜನಿಕವಾಗಿ ಪ್ರಕಟಿಸಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಆ ಚಿತ್ರಗಳಲ್ಲಿ ವಿಗ್ರಹಗಳಾಗಲೀ ಅಥವಾ ಬೇರಾವುದೇ ವಿಶೇಷವಾಗಲೀ ಕಂಡುಬಂದಿಲ್ಲ.

‘ತಾಜ್‌ನ ರಹಸ್ಯ ಕೋಣೆಗಳ  ಬೀಗ ತೆರೆಸಬೇಕು. ತಾಜ್‌ಮಹಲ್ ಈ ಹಿಂದೆ ತೇಜೋ ಮಹಾಲಯ ಎಂಬ ಶಿವ ದೇವಸ್ಥಾನವಾಗಿತ್ತು ಎಂಬುದಕ್ಕೆ ಅಲ್ಲಿ ಪುರಾವೆ ಸಿಗಬಹುದು’ ಎಂದು ಬಿಜೆಪಿ (BJP) ಕಾರ್ಯಕರ್ತರೊಬ್ಬರು ಅಲಹಾಬಾದ್ ಹೈಕೋರ್ಟ್‌ಗೆ (Allahabad High Court) ಹೋಗಿದ್ದರು. ಆ ಅರ್ಜಿಯನ್ನು ಮೇ 12ರಂದು ಕೋರ್ಟ್‌ ವಜಾಗೊಳಿಸಿತ್ತು. ಎಎಸ್‌ಐ ಕೂಡ ಆ ಕೋಣೆಗಳಲ್ಲಿ ಏನೂ ಇಲ್ಲ ಎಂದು ಹೇಳಿತ್ತು. ಆದರೆ, ಮೇ 5ರ ಎಎಸ್‌ಐ ನಿಯತಕಾಲಿಕೆಯಲ್ಲಿ ಕೆಲ ತಿಂಗಳ ಹಿಂದೆ ಕೈಗೊಂಡ ಆ ಕೋಣೆಗಳ ಜೀರ್ಣೋದ್ಧಾರ ಕಾಮಗಾರಿಯ ನಾಲ್ಕು ಫೋಟೋಗಳು ಮೊದಲೇ ಪ್ರಕಟವಾಗಿದ್ದವು. ಅವುಗಳಲ್ಲಿ ‘ಮೊದಲು’ ಮತ್ತು ‘ಈಗ’ ಎಂಬ ಶೀರ್ಷಿಕೆಯಡಿ ಕೋಣೆಗಳ ಚಿತ್ರಗಳಿವೆ. ಚಿತ್ರದಲ್ಲಿ ಕೋಣೆಗಳು ಖಾಲಿಯಿವೆ.

ತಾಜ್ ಮಹಲ್‌ನ 22 ಕೋಣೆಗಳ ಬೀಗ ತೆಗೆಸಿ ಎಂಬ ಅರ್ಜಿ

ತಿರಸ್ಕಾರ: ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಸ್ಥಾನ ಪಡೆದಿರುವ ವಿಶ್ವವಿಖ್ಯಾತ ಪ್ರೇಮಸೌಧ ಆಗ್ರಾದ ತಾಜ್‌ಮಹಲ್‌ನಲ್ಲಿ 22 ಕೋಣೆಗಳಿಗೆ ಬೀಗ ಜಡಿಯಲಾಗಿದ್ದು, ಅದರೊಳಗೆ ಏನಿದೆ ಎಂಬುದನ್ನು ನೋಡಲು ಬೀಗ ತೆರೆಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ತಿರಸ್ಕರಿಸಿದೆ.

‘ತಾಜ್‌ಮಹಲ್‌ನ 22 ಕೋಣೆಗಳನ್ನು ನೋಡಲು ಬಯಸಿರುವ ನೀವು ನಾಳೆ ನ್ಯಾಯಮೂರ್ತಿಗಳ ಚೇಂಬರ್ ಅನ್ನೂ ವೀಕ್ಷಿಸಲು ಅನುಮತಿ ಕೇಳುತ್ತೀರಿ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವ್ಯವಸ್ಥೆಯ ಬಗ್ಗೆ ದಯಮಾಡಿ ಅಣಕ ಮಾಡಬೇಡಿ’ ಎಂದು ಅರ್ಜಿ ಸಲ್ಲಿಕೆ ಮಾಡಿದ್ದ ಬಿಜೆಪಿ ಯುವ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ರಜನೀಶ್ ಸಿಂಗ್‌ರನ್ನು ದ್ವಿಸದಸ್ಯ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ. ‘ಇದು ಕೋರ್ಟ್ ಕೆಲಸವಲ್ಲ. ನಿರ್ದಿಷ್ಟಮಾನದಂಡ ಅನುಸರಿಸಿ ಈ ಕೆಲಸ ನಡೆಯಬೇಕು. ಇದನ್ನು ಇತಿಹಾಸಕಾರರಿಗೆ ಬಿಡಬೇಕು’ ಎಂದು ಪೀಠ ಹೇಳಿದೆ.

‘ತಾಜ್‌ಮಹಲ್ ಕೋಣೆ ತೆರೆಸುವ ವಿಚಾರವಾಗಿ ನ್ಯಾಯಾಲಯ ಪರಮಾದೇಶ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದೀರಿ? ನಾವು ಯಾವ ತೀರ್ಪು ನೀಡಬೇಕು ಎಂದು ನೀವು ಬಯಸುತ್ತೀರಿ? ಪರಮಾದೇಶ ನೀಡುವುದು ಯಾವುದಾದರೂ ಹಕ್ಕು ಉಲ್ಲಂಘನೆಯಾದಾಗ, ನಿಮ್ಮ ಯಾವ ಹಕ್ಕು ಉಲ್ಲಂಘನೆಯಾಗಿದೆ?’ ಎಂದು ಕೋರ್ಟ್ ಹೇಳಿತು.
‘ಭದ್ರತಾ ಕಾರಣಗಳನ್ನು ಮುಂದೊಡ್ಡಿ 22 ಕೋಣೆಗಳಿಗೆ ಬೀಗ ಜಡಿಯಲಾಗಿದೆ. ಅದರ ಸತ್ಯ ಗೊತ್ತಾಗಬೇಕು’ ಎಂಬ ಅರ್ಜಿದಾರರ ಕೋರಿಕೆಗೆ ಚಾಟಿ ಬೀಸಿದ ನ್ಯಾಯಾಲಯ, ‘ಈ ಮಾಹಿತಿ ಕೇಳಲು ನೀವು ಯಾರು? ಭದ್ರತಾ ಕಾರಣಗಳಿಂದಾಗಿ ಕೋಣೆಗಳನ್ನು ಬಂದ್ ಮಾಡಲಾಗಿದೆ ಎಂಬ ಉತ್ತರದಿಂದ ನಿಮಗೆ ತೃಪ್ತಿಯಾಗದಿದ್ದರೆ, ಲಭ್ಯವಿರುವ ಕಾನೂನು ಅವಕಾಶಗಳನ್ನು ಬಳಸಿಕೊಳ್ಳಿ. ಅದಕ್ಕೂ ಮೊದಲು ಸಂಶೋಧನೆ ಮಾಡಿ, ಎಂಎ, ಪಿಎಚ್‌ಡಿ ಮಾಡಿ. ಅದಕ್ಕಾಗಿ ಎಲ್ಲಾದರೂ ನೋಂದಣಿ ಮಾಡಿಕೊಳ್ಳಿ. ಆದರೆ ಅಣಕ ಮಾತ್ರ ಮಾಡಬೇಡಿ’ ಎಂದು ಕಿಡಿಕಾರಿತು.ಹಾಸನ

Leave a Reply

Your email address will not be published. Required fields are marked *

ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ
error: Content is protected !!