ಗಂಗಾವತಿ ಗ್ರಾಮೀಣ ಘಟಕದ ಅಧ್ಯಕ್ಷ ಸ್ತಾನ ಓಲಿಯುವದು ಸೇವೆಗೋ ಅಥವಾ ಲಾಬಿಗೊ

ಗಂಗಾವತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಘಟಕಗಳಿಗೆ ಬಿಜೆಪಿ ತನ್ನ ಪದಾಧಿಕಾರಿಗಳನ್ನು ಆಯ್ಕೆ ಮಾಡುತ್ತಿದೆ ಗ್ರಾಮೀಣ ಘಟಕ ಮತ್ತು ನಗರ ಘಟಕಗಳ ಅಧ್ಯಕ್ಷರುಗಳ ನೇಮಕಾತಿಗೆ ವಿವಿಧ ಮಾನದಂಡಗಳನ್ನು ವಿಧಿಸಿ ಅರ್ಜಿಗಳನ್ನು ಕರೆಯಲಾಗಿತ್ತು. ಈ ಎರಡೂ ಘಟಕಗಳಲ್ಲಿ ಗ್ರಾಮೀಣ ಘಟಕಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದಿದೆ ಏಕೆಂದರೆ ಘಟಾನುಘಟಿಗಳು ಗ್ರಾಮೀಣ ಘಟಕದ ಅಧ್ಯಕ್ಷರಾಗಲು ಅರ್ಜಿ ಸಲ್ಲಿಸಿದ್ದಾರೆ ಸುಮಾರು ಮೂವತ್ತು ಜನ ಗ್ರಾಮೀಣ ಘಟಕದಿಂದ ಅರ್ಜಿ ಸಲ್ಲಿಸಿದ್ದಾರೆ. ಆದರೆ ಜಿಲ್ಲಾ ಬಿಜೆಪಿ ಘಟಕ ಅರ್ಜಿಗಳನ್ನು ಪರಿಶೀಲನೆ ಮಾಡಿ ಈಗ ಮೂರು ಜನರ ಅರ್ಜಿಯನ್ನು ಪುರಸ್ಕರಿಸಿದೆ ಮತ್ತು ಮೂರು ಜನರಲ್ಲಿ ಯಾರನ್ನೂ ಗ್ರಾಮೀಣ ಘಟಕಕ್ಕೆ ಆಯ್ಕೆ ಮಾಡಬೇಕು ಅನ್ನುವ ಗೊಂದಲದಲ್ಲಿದೆ.

ರಾಘವೇಂದ್ರ ಪಾನಗಂಟಿ ನೇತೃತ್ವದಲ್ಲಿ ಆಯ್ಕೆ ಸಮಿತಿಯನ್ನು ಆಯ್ಕೆ ಮಾಡಲು ರಚನೆ ಮಾಡಲಾಗಿದೆ. ಈಗ ಆ ಸಮಿತಿ ಹೆಗಲಿಗೆ ಗ್ರಾಮೀಣ ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡುವ ಜವಾಬ್ದಾರಿ ಕೂಡ ಇದೆ ಈ ನಿಟ್ಟಿನಲ್ಲಿ ಮೂರು ಜನ ಆಯ್ಕೆಯಾಗಿರುವ ಅಭ್ಯರ್ಥಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು ಮತ್ತು ಈ ಸದ್ಯಕ್ಕೆ ಮುಂಚೂಣಿಯಲ್ಲಿರುವ ಮೂರು ಜನ ಯಾರೆಂದರೆ

ವಿರೂಪಾಕ್ಷಿ ಆಗೋಲಿ ಸಾಕಿನ ದನಕನದೊಡ್ಡಿ, ದೇವಾನಂದ ಬಸವಪಟ್ಟಣ, ವಿಜಯ ರೆಡ್ಡಿ ಹಾಲಹಳ್ಳಿ, ಈಗ ಈ ಮೂರು ಹೆಸರುಗಳು ಗಂಗಾವತಿ ಗ್ರಾಮೀಣ ಕ್ಷೇತ್ರದಾದ್ಯಂತ ಬಹಿರಂಗವಾಗಿವೆ ಮತ್ತು ಗ್ರಾಮೀಣ ಭಾಗದಲ್ಲಿ ಯಾರು ಅಧ್ಯಕ್ಷರಾಗಬೇಕು ಅನ್ನುವ ವಿಷಯವಾಗಿ ಬಿಸಿ ಬಿಸಿ ಚರ್ಚೆಗಳು ಕೂಡ ನಡೆಯುತ್ತಿವೆ ಕೆಲವರ ಹೆಸರುಗಳ ಬಗ್ಗೆ ಆಕ್ಷೇಪವನ್ನು ಕೂಡ ವ್ಯಕ್ತಪಡಿಸಿದ್ದಾರೆ.

ವಿರೂಪಾಕ್ಷಿ ಆಗೋಲಿ

ಸದ್ಯದ ಮಟ್ಟಿಗೆ ವಿಜಯ ರೆಡ್ಡಿ ಮತ್ತು ದೇವಾನಂದ್ ಅವರ ಬದಲಾಗಿ ವಿರೂಪಾಕ್ಷಿ ಆಗೋಲಿ ಅವರೇ ಗ್ರಾಮೀಣ ಅಧ್ಯಕ್ಷರಾಗಲು ಸೂಕ್ತ ಅನ್ನುವ ಮಾತು ಗ್ರಾಮೀಣ ಬಿಜೆಪಿ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ.
ಇದಕ್ಕೆ ಕಾರಣ ವಿರೂಪಾಕ್ಷಿ ಆಗೋಲಿ ಅವರು ಸುಮಾರು ವರ್ಷಗಳಿಂದ ಸಂಘ ಪರಿವಾರದೊಂದಿಗೆ ಏಕಲ್ ವಿದ್ಯಾಲಯವನ್ನು ಸಂಘಟಿಸಿದ್ದಾರೆ ಮತ್ತು ಗ್ರಾಮೀಣ ಜನರ ಒಡನಾಟವಿದೆ ಮತ್ತು ಜಾತಿಯ ವಿಷಯಕ್ಕೆ ಬಂದರೆ ಕುರುಬ ಸಮುದಾಯದ ವಿರೂಪಾಕ್ಷಿ ಅವರಿಗೆ ಸಂಬಂಧಗಳ ವಲಯ ಗ್ರಾಮೀಣ ಭಾಗದಲ್ಲಿ ಸಾಕಷ್ಟಿದೆ ಮತ್ತು ಸಂಘ ಪರಿವಾರದ ಕೆಲಸ ಮಾಡಿರುವುದರಿಂದ ಸಂಘಟನೆ ಮಾಡುವಂತಹ ಚಾಣಾಕ್ಷತೆ ಕೂಡ ವಿರೂಪಾಕ್ಷಿ ಆಗೋಲಿ ಅವರಿಗೆ ಇದೇ ಅವರಿಗೆ ಗ್ರಾಮೀಣ ಭಾಗದ ಜವಾಬ್ದಾರಿ ಕೊಟ್ಟರೆ ಸೂಕ್ತ ಎನ್ನುವ ಅಭಿಪ್ರಾಯವನ್ನು ಗ್ರಾಮೀಣ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.

ಆದರೆ ಕೆಲ ಬಿಜೆಪಿಗರು ರಾತ್ರೋರಾತ್ರಿ ಶಾಸಕರನ್ನು ಸಂಸದರನ್ನು ಭೇಟಿಯಾಗಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದಾರೆ ಮತ್ತು ಇಂಥವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಎಂದು ಕೆಲ ಬಿಜೆಪಿ ಯುವ ನಾಯಕರು ಮುಖಂಡರಿಗೆ ಒತ್ತಡವನ್ನು ಏರುತ್ತಿದ್ದಾರೆ ವಿಜಯ ರೆಡ್ಡಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಎಂದು ಜಬಲ ಗುಡ್ಡದ ವೆಂಕಟೇಶ್ ಇಳಿಗೇರ್ ಮತ್ತು ಕೂಕನಪಳ್ಳಿ ಯ ಶಂಭು ಕಿನ್ನಾಳ್ ಮತ್ತು ಇತರರು ವಿಜಯ ರೆಡ್ಡಿ ಪರವಾಗಿ ಬಿಜೆಪಿ ನಾಯಕರಲ್ಲಿ ಲಾಬಿ ನಡೆಸುತ್ತಿದ್ದಾರೆ.

ವರ್ಷಗಳ ಹಿಂದೆ ಕಾಂಗ್ರೆಸ್ನಲ್ಲಿದ್ದ ವಿಜಯ ರೆಡ್ಡಿ

ಆದರೆ ವಿಜಯ ರೆಡ್ಡಿ ಅವರು ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರು ಅವರಿಗೆ ಅಧ್ಯಕ್ಷ ಸ್ಥಾನ ಕೊಡಬಾರದು ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

ವೆಂಕಟೇಶ್ ಜಬ್ಬಲಗುಡ್ಡ ಮತ್ತು ಶಂಭು ಕಿನ್ನಾಳ

ಇತ್ತ ದೇವಾನಂದ್ ಅವರು ಕೂಡ ಮೊದಲಿನಿಂದಲೂ ಬಿಜೆಪಿಯಲ್ಲಿ ಬೆಳೆದವರು ಮತ್ತು ಬಿಜೆಪಿಯನ್ನು ಸಂಘಟನೆ ಮಾಡಿದಂಥವರು ದೇವಾನಂದ ಅವರು ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಂತಹ ವ್ಯಕ್ತಿ ಅವರು ಸಂಘಟನೆ ಮಾಡಲು ಅಧ್ಯಕ್ಷಗಿರಿ ಬೇಕಾಗಿಲ್ಲ ಅವರು ಅಧ್ಯಕ್ಷರು ಆಗದೆ ಕೂಡ ಸಂಘಟನೆ ಮಾಡುವಂಥ ಶಕ್ತಿ ಇರುವಂತಹವರು ಮತ್ತು ಅವರು ಅನೇಕ ಸಂಸ್ಥೆಗಳನ್ನು ಕೂಡ ನಡೆಸುತ್ತಿದ್ದಾರೆ ಇದರ ನಡುವೆ ದೇವಾನಂದ್ ಅವರಿಗೆ ಗ್ರಾಮೀಣ ಅಧ್ಯಕ್ಷ ಸ್ಥಾನವನ್ನು ಕೊಟ್ಟರೆ ತುಂಬಾ ಒತ್ತಡವಾಗುತ್ತದೆ ಇದರಿಂದ ಸಂಘಟನೆ ಮಾಡಲು ಅಡೆತಡೆಗಳು ಉಂಟಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ದೇವಾನಂದ್ ಬಸಾಪಟ್ಟಣ

ಒಂದು ವೇಳೆ ದೇವಾನಂದ ಅವರು ಅಧ್ಯಕ್ಷರಾದರೆ ಸಂಘಟನೆ ಮಾಡುವುದು ಅನುಮಾನ ಎನ್ನುವ ಸಂಗತಿಯೂ ವ್ಯಕ್ತವಾಗುತ್ತಿದೆ.
ಆದ್ದರಿಂದ ವಿರೂಪಾಕ್ಷಿ ಆಗೋಲಿ ಅವರು ಕೇವಲ ನಿಸ್ವಾರ್ಥ ಸೇವೆಯನ್ನು ಇಲ್ಲಿಯವರೆಗೂ ಸಂಘ ಪರಿವಾರದ ಪರವಾಗಿ ಸಲ್ಲಿಸಿರುತ್ತಾರೆ ಮತ್ತು ಯಾವುದೇ ಒತ್ತಡಗಳು ಕೂಡ ವಿರೂಪಾಕ್ಷಿ ಅವರಿಗೆ ಇಲ್ಲ ಹಾಗೂ ಸ್ವಾರ್ಥ ಕೂಡ ಇಲ್ಲ ಮತ್ತು ಬಿಜೆಪಿ ಸಂಘಟನೆ ಮಾಡುವುದರಲ್ಲಿ ಗ್ರಾಮೀಣ ಭಾಗಕ್ಕೆ ಅವರೇ ಸೂಕ್ತ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ.
ಅವರಿಗೆ ಪಕ್ಷದ ಗ್ರಾಮೀಣ ಅಧ್ಯಕ್ಷ ಸ್ಥಾನವನ್ನು ಕೊಟ್ಟರೆ ಕೇವಲ ಪಕ್ಷ ಸಂಘಟನೆಯೆ ಅವರ ಗುರಿಯಾಗಿರುತ್ತದೆ ಮತ್ತು ಯಾವುದೇ ರೀತಿಯ ಹೊರಗಿನ ಒತ್ತಡಗಳು ಕೂಡ ಅವರಿಗೆ ಇಲ್ಲ ಅವರು ನಿಸ್ಸಂಶಯವಾಗಿ ಗ್ರಾಮೀಣ ಭಾಗದಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತಾರೆ ಮತ್ತು ಗ್ರಾಮೀಣ ಭಾಗದ ಜನರ ನಾಡಿ ಮಿಡಿತವನ್ನು ಅರಿತಿದ್ದಾರೆ ಹಾಗೂ ಗ್ರಾಮೀಣ ಜನರ ಜೊತೆ ಒಡನಾಟವನ್ನು ಚೆನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ಕೆಲ ಬಿಜೆಪಿ ಮುಖಂಡರು ಕೂಡ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ವಿರೂಪಾಕ್ಷಿ ಆಗೋಲಿ ಅವರಿಗೆ ಬಿಜೆಪಿ ಗ್ರಾಮೀಣ ಅಧ್ಯಕ್ಷ ಸ್ತಾನವನ್ನು ಕೊಡಬೇಕು ಒಂದು ವೇಳೆ ಕೊಡದೇ ಹೋದರೆ ಮುಂದಿನ ಪರಿಣಾಮಕ್ಕೆ ಜಿಲ್ಲಾ ಘಟಕದ ಬಿಜೆಪಿ ನಾಯಕರೇ ಕಾರಣೀಭೂತರಾಗುತ್ತಾರೆ ಎಂದು ಬಿಜೆಪಿಯ ಕೆಲ ನಿಷ್ಠಾವಂತ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ಅಂಶಗಳು ಆಯ್ಕೆ ಸಮಿತಿಯ ಗಮನಕ್ಕೆ ಬಂದಿದ್ದು ಕೊನೆಯದಾಗಿ ಗಂಗಾವತಿ ಗ್ರಾಮೀಣ ಘಟಕದ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಕಾರ್ಯಕರ್ತರ ಅಭಿಪ್ರಾಯವನ್ನು ಮುಂದಿಟ್ಟುಕೊಂಡು ಆಯ್ಕೆ ಮಾಡುತ್ತಾರೋ ಅಥವಾ ಲಾಬಿಯನ್ನ ಮುಂದಿಟ್ಟುಕೊಂಡು ಆಯ್ಕೆ ಮಾಡುತ್ತಾರೋ ಅನ್ನುವುದನ್ನು ಕಾದು ನೋಡಬೇಕಾಗಿದೆ. ಒಂದು ವೇಳೆ ಲಾಬಿಗೆ ಒಳಗಾಗಿ ಅಧ್ಯಕ್ಷ ಸ್ಥಾನವನ್ನು ನೀಡಿದ್ದೇ ಆದರೆ ಗಂಗಾವತಿ ಗ್ರಾಮೀಣ ಭಾಗದ ಬಿಜೆಪಿಯಲ್ಲಿ ಒಡಕುಂಟಾಗುವುದು ಖಚಿತ ಎನ್ನುವ ಸಂದೇಶವನ್ನು ಕಾರ್ಯಕರ್ತರು ರವಾನಿಸಿದ್ದಾರೆ.


ಈಗಾಗಲೇ ಕೆಲ ಯುವ ಮುಖಂಡರಿಂದ ಕೂಕನಪಳ್ಳಿ ಮತ್ತು ಇತರ ಭಾಗದಲ್ಲಿ ಕಾರ್ಯಕರ್ತರಲ್ಲಿ ಒಡಕುಂಟಾಗಿದೆ ಈಗ ಅದು ಗಂಗಾವತಿ ಗ್ರಾಮೀಣ ಭಾಗವನ್ನು ಆವರಿಸಿಕೊಳ್ಳಬಾರದು ಎನ್ನುವ ದೂರದೃಷ್ಟಿ ಬಿಜೆಪಿ ಜಿಲ್ಲಾ ನಾಯಕರಿಗಿದ್ದರೆ ನಿಸ್ವಾರ್ಥ ಸೇವೆಯನ್ನು ಮಾಡುವ ಹಾಗೂ ಪಕ್ಷಕ್ಕಾಗಿ ದುಡಿಯುತ್ತಿರುವ ವಿರೂಪಾಕ್ಷಿ ಅವರನ್ನು ಆಯ್ಕೆ ಮಾಡಬೇಕು ಎಂದು ತಮ್ಮ ಹಕ್ಕೊತ್ತಾಯವನ್ನು ಮಂಡನೆ ಮಾಡಿದ್ದಾರೆ ಗಂಗಾವತಿ ಗ್ರಾಮೀಣ ಭಾಗದ ಸಾಕಷ್ಟು ಬಿಜೆಪಿ ಕಾರ್ಯಕರ್ತರು.

=3

follow me

23 Replies to “ಗಂಗಾವತಿ ಗ್ರಾಮೀಣ ಘಟಕದ ಅಧ್ಯಕ್ಷ ಸ್ತಾನ ಓಲಿಯುವದು ಸೇವೆಗೋ ಅಥವಾ ಲಾಬಿಗೊ”

  1. ವಿರುಪಾಕ್ಷಿ ಆಗೋಲಿ ಸೂಕ್ತ ವ್ಯಕ್ತಿ.

  2. ದನಕನದೊಡ್ಡಿ ಗ್ರಾಮದ… ವಿರೂಪಾಕ್ಷಿ ಆಗೋಲಿ…… 👍👍👍

  3. ವಿರುಪಾಕ್ಷಿ ಅಣ್ಣಾ ಒಳ್ಳೆ ವ್ಯಕ್ತಿ, ನಿಷ್ಠಾವಂತ ಕಾರ್ಯಕರ್ತ ಸಮಾಜ ಸೇವಕ ಯುವ ಮುಖಂಡ.

  4. ವಿರುಪಾಕ್ಷಿ ಅಣ್ಣ ಒಳ್ಳೇ ವ್ಯಕ್ತಿ ನಿಷ್ಠಾವಂತ ಕಾರ್ಯಕರ್ತ ಸಮಾಜಸೇವಕ ಯುವ ಮುಖಂಡ ಪಕ್ಷವನ್ನುಸಂಘಟಿಸುವ ಶಕ್ತಿ ಅವರಲ್ಲಿದೆ.

  5. ವಿರೂಪಾಕ್ಷಿ ಆಗೋಲಿ ನಿಷ್ಠಾವಂತ ಕಾರ್ಯಕರ್ತ ಮತ್ತು ಸಂಘಟನೆ ಮಾಡುವ ಚತುರತೆ ಇದೆ ವಿರೂಪಾಕ್ಷಿ ಆಗೋಗೆ ಅಧ್ಯಕ್ಷ ಸ್ಥಾನ ನೀಡುವುದು ಸೂಕ್ತ

  6. ವಿರೂಪಾಕ್ಷಿ ಆಗೋಲಿ ಸೂಕ್ತವಾದ ವ್ಯಕ್ತಿ ದಯವಿಟ್ಟು ಗ್ರಾಮೀಣ ಘಟಕದ ಅಧ್ಯಕ್ಷ ಸ್ಥಾನವನ್ನು ವಿರೂಪಾಕ್ಷ ಆಗೋಲಿ ಅವರಿಗೆ ಕೊಡಬೇಕು ಏಕೆಂದರೆ ವಿರೂಪಾಕ್ಷಿ ಆಗೋಲಿ ಅವರಲ್ಲಿ ಗ್ರಾಮೀಣ ಭಾಗದಲ್ಲಿ ಸಂಘಟನೆ ಮಾಡುವ ಚಾಣಾಕ್ಷತೆ ಇದೇ

  7. ವಿರೂಪಾಕ್ಷ ದನಕನದೊಡ್ಡಿ ಅವರು ಸೊಕ್ತ ವ್ಯಕ್ತಿ.

  8. ವಿರೂಪಾಕ್ಷ ದನಕನದೊಡ್ಡಿ ಅವರು ಸೊಕ್ತ ವ್ಯಕ್ತಿ.

Leave a Reply

Your email address will not be published.

error: Content is protected !!
×