ಸ್ಥಿರಾಸ್ತಿ ಖರೀದಿದಾರರ ಗಮನಕ್ಕೆ; ಎಚ್ಎಸ್ ಲಿಂಗದಹಳ್ಳಿ

 

ಈ ಹಿಂದೆ ದಿನಾಂಕ:22.02.2022ರಂದು ನಾನು ನನ್ನ ಮುಖಪುಟದಲ್ಲಿ ಒಂದು ವಿಷಯವನ್ನು ಹೆಳಿಕೊಂಡಿದ್ದೆ(ಮೊದಲೆರಡು ಪೊಟೊಗಳನ್ನು ಗಮನಿಸಿ), ನಗರ ಸ್ಥಳಿಯ ಸಂಸ್ಥೆಗಳಿಂದ ನಾಗರೀಕರ ಮೇಲೆ ಕಾನೂನುಬಾಹಿರವಾಗಿ ಮತ್ತು ಅನಧಿಕೃತವಾಗಿ ಸರ್ಕಾರದ ನಿಯಮಾವಳಿಗಳನ್ನು ದಿಕ್ಕರಿಸಿ ಹೆಚ್ಚುವರಿಯಾಗಿ ಹೊರೆ ಹೆರುತ್ತಿರುವ ಕುರಿತು ಹಾಗೂ ಸದರಿ ವಿಷಯದ ಕುರಿತು ನಿಡಲಾದ ಮನವಿ/ದೂರಿಗೆ ಸ್ಪಂದನೆ ನೀಡದಿರುವ ಕುರಿತು ಸಾರ್ವಜನಿಕವಾಗಿ ಮುಖಪುಟದಲ್ಲಿ ದಾಖಲಿಸಿದ್ದೆ ಆದರೆ ಅದರಲ್ಲಿ ಯಾವ ಶುಲ್ಕವನ್ನು ಹೆಚ್ಚುವರಿಯಾಗಿ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಿಲ್ಲ.

ಅದಕ್ಕೆ ಮುಂದುವರೆದೂ ಹೆಳುವುದಾದರೆ ಯಾವುದೆ ಸ್ಥಿರಾಸ್ತಿ(ಖಾಲಿ ನಿವೇಶನ/ಕಟ್ಟಡಗಳು)ಗಳನ್ನು ನೊಂದಣಿ ಇಲಾಖೆಯಲ್ಲಿ ನೊಂದಣಿ ಮಾಡಿಸಿದ ನಂತರದಲ್ಲಿ ಸಂಬಂದಿಸಿದ ಸ್ಥಳಿಯ(ನಗರ/ಪಟ್ಟಣ) ಸಂಸ್ಥೆಗಳಲ್ಲಿ ಹಿಂದಿನ ಮಾಲಿಕರ ಹೆಸರಿನಲ್ಲಿರುವ ಖಾತೆಯನ್ನು ಹೊಸದಾಗಿ ಖರಿದಿಸಿದ ನಾಗರೀಕನ ಹೆಸರಿಗೆ ಬದಲಾಯಿಸಬೇಕಾಗುತ್ತೆ. ಅದಕ್ಕಾಗಿ ಸರ್ಕಾರದ ನಿಯಮಾವಳಿಗಳನುಸಾರ ಶುಲ್ಕವನ್ನು “ಖಾತಾ ವರ್ಗಾವಣೆ ಶುಲ್ಕ” / “ಆಸ್ತಿ ಹಕ್ಕು ವರ್ಗಾವಣೆ ಶುಲ್ಕ”ವನ್ನು ಭರಿಸ ಬೇಕಾಗುತ್ತದೆ. ಇದೆ ವಿಷಯದಲ್ಲಿ ಕೊಪ್ಪಳದ ನಗರಸಭೆ ಮತ್ತು ಬಾಗ್ಯನಗರದ ಪಟ್ಟಣ ಪಂಚಾಯತಿಯಲ್ಲಿನ ದಾಖಲೆಗಳನ್ನು ಪರಿಶಿಲಿಸಲಾಗಿ ಮನಸೊ ಇಚ್ಚೆ, ಕಾನೂನುಬಾಹಿರವಾಗಿ ತಮ್ಮ ಅಧಿಕಾರವನ್ನು ದುರ್ಭಳಕೆ ಮಾಡಿಕೊಂಡು ಕೊಪ್ಪಳ ನಗರಭೆಯಲ್ಲಿ ಖರಿದಿ ಬೇಲೆಯ ಮೇಲೆ ಶೆಕಡಾ 1.5% ರಷ್ಟೂ ಮತ್ತು ಬಾಗ್ಯನಗರದ ಪಟ್ಟಣ ಪಂಚಾಯತಿಯಲ್ಲಿ ಖರಿದಿ ಬೇಲೆಯ ಮೇಲೆ ಶೇಕಡಾ 2% ರಷ್ಟೂ ಶುಲ್ಕವನ್ನು ನಿಗದಿಪಡಿಸಲಾಗುತಿತ್ತು. ಅದು ತಪ್ಪು ಎಂದು ಅಲ್ಲಿನ ಮುಖ್ಯಸ್ಥರರಿಗೆ ಹಾಗೂ ಸಿಬ್ಬಂದಿಗಳಿಗೆ ತಿಳಿಸದರೂ ಯಾವುದೆ ಪ್ರಯೋಜನೆಯಾಗಲಿಲ್ಲ. ಆದರೆ ವಾಸ್ತವವಾಗಿ ಸದರಿ ಶುಲ್ಕವನ್ನು ಯಾವುದೆ ನಗರಸಭೆಯಲ್ಲಿ ಖರಿದಿ ಸಮಯದಲ್ಲಿ ಭರಿಸಲಾದ ಮುದ್ರಾಂಕ ಶುಲ್ಕದ(ಛಾಪಾ ಕಾಗದದ ಬೇಲೆಯ) ಮೇಲೆ ಶೆಕಡಾ 1.5% ಮತ್ತು ಯಾವುದೆ ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಶೇಕಡಾ 1% ರಷ್ಟೂ ಶುಲ್ಕವನ್ನು ವಿದಿಸಬೇಕಾಗುತ್ತೆ.

HS. ಲಿಂಗದಹಳ್ಳಿ ಸಾಮಾಜಿಕ ಕಾರ್ಯಕರ್ತ

ಅದರಂತೆಯೇ ನಾನು ಹಲವಾರು ಲಿಖಿತ ಮನವಿ/ದೂರಗಳನ್ನು ಸಲ್ಲಿಸಿ ಕೊನೆಗೂ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುತ್ತಿರುವುದನ್ನು ನಿಲ್ಲಸಲಾಗಿದೆ(ಮೂರು ಮತ್ತು ನಾಲ್ಕನೇ ಪೋಟೊಗಳನ್ನ ಗಮನಿಸಿ). ಹಾಗೆಯೇ ಇದೂವರೆಗೂ ನಾಗರೀಕರಿಂದ ಕೇವಲ ಕೊಪ್ಪಳ ನಗರಸಭೆಯಲ್ಲಿ ಹೆಚ್ಚುವರಿಯಾಗಿ ವಸೂಲಿಯಾದ ಕನಿಷ್ಟ 10 ಕೋಟಿಗೂ ಅದೀಕ ಮೊತ್ತವನ್ನು ಯಾರಿಂದ ಪಡೆಯಲಾಗಿದೆಯೋ ಅವರಿಗೆ ಮರು ಪಾವತಿಸುವಂತೆ ಈಗಾಗಲೆ ಪೌರಾಯುಕ್ತರು, ನಗರಸಭೆ ಕೊಪ್ಪಳ ಮತ್ತು ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಕೊಪ್ಪಳರವರಿಗೆ ಮನವಿ/ದೂರನ್ನು ಸಲ್ಲಿಸಲಾಗಿದೆ. ಈ ಸಾರ್ವಜನಿಕರಲ್ಲಿ ವಿನಂತಿ ತಮ್ಮಲ್ಲಿ ಯಾರಾದರು ಹಳೆ ಚಾಳಿಯನ್ನು ಮುಂದುವರೆಸಿ ಹೆಚ್ಚುವರಿಯಾಗಿ ಖಾತಾ ಭದಲಾವಣೆ ಶುಲ್ಕವನ್ನು ಕೆಳಿದಲ್ಲಿ ದಯವಿಟ್ಟು ನೀಡದೆ ನಾನು ಈ ಕೇಳಗೆ ಹಾಕಿರುವ ಮೂರನೇ ಮತ್ತು ನಾಲ್ಕನೆ ಪೊಟೊ ಪ್ರತಿಗಳನ್ನು ಡೌನಲೋಡ್ ಮಾಡಿಕೊಂಡು ಅವರ ಮುಂದೆ ಇಡಿ ಅವರಾಗಿನೆ ದಾರಿಗೆ ಬರುತ್ತಾರೆ….. ಹಾಗೂ ಈ ಹಿಂದೆ ಹೆಚ್ಚುವರಿಯಾಗಿ ಶುಲ್ಕವನ್ನು ಭರಿಸಿ ಖಾತಾ ಭದಲಾವಣೆ ಮಾಡಿಕೊಂಡಿರುವವರು ನಿಯಮಾನುಸಾರ ಶುಲ್ಕವನ್ನು ಕಡಿತಗೋಳಿಸಿ ಹೆಚ್ಚುವರಿ ಶುಲ್ಕವನ್ನು ಮರು ಪಾವತಿಸಲು ತಮ್ಮ ಕಛೆರಿಗಳಿಗೆ ಮನವಿಯನ್ನು ಸಲ್ಲಿಸಿ ವಾಪಾಸ್ ಪಡೆದುಕೊಳ್ಳಲು ಈ ಮೂಲಕ ನಾನು ಸಾರ್ವಜನಿಕರ ಗಮನಕ್ಕೆ ತರುತ್ತಿದ್ದೆನೆ.

ಧನ್ಯವಾದಗಳೊಂದಿಗೆ,

ಎಚ್ಎಸ್ ಲಿಂಗದಳ್ಳಿ

Leave a Reply

Your email address will not be published.

ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ
error: Content is protected !!