ಕೊಪ್ಪಳ ತಾಲೂಕಿನ ಯಲಮಗೇರಿ ಯಲ್ಲಿ ಜವರಾಯನ ಅಟ್ಟಹಾಸ ಮನೆ ಕುಸಿತಕ್ಕೆ ಮೂರು ಮಕ್ಕಳ ಬಲಿ

ಕೊಪ್ಪಳ ತಾಲೂಕಿನ ಯಲಮಗೇರಿ ಯಲ್ಲಿ ಬೆಳ್ಳಂಬೆಳಗ್ಗೆಯೇ ಜವರಾಯನ ಅಟ್ಟಹಾಸ ಮೂವರು ಮಕ್ಕಳು ಮನೆ ಕುಸಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಹಿಂದೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಹಳೆಯ ಮನೆ ತೀರಾ ಶಿಥಿಲವಾಗಿತ್ತು ಮತ್ತು ಬಿರುಕು ಬಿಟ್ಟಿತ್ತು ಇದು ಮನೆಯವರ ಗಮನಕ್ಕೆ ಬಂದಿಲ್ಲ ಕಾರಣ ನಿನ್ನೆ ರಾತ್ರಿ ಮಲಗಿದ್ದ ಮಕ್ಕಳು ಶಿಥಿಲಗೊಂಡಿದ್ದ ಮನೆಯ ಕುಸಿತಗೊಂಡು ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಸುಮಾರು 10 ರಿಂದ 12 ವರ್ಷ ವಯಸ್ಸಿನ ಸುಜಾತಾ ಅಮರೇಶ್ ಗವಿಸಿದ್ದಪ್ಪ ಅನ್ನುವ ದುರ್ದೈವಿಗಳು ಸಾವಿಗೀಡಾಗಿದ್ದಾರೆ.


ಕೊಪ್ಪಳ ತಾಲ್ಲೂಕಿನ ಇರಕಲ್ಗಡದ ಬಳಿ ಬರುವ ಯಲಮಗೇರಿ ಊರು ಅಲ್ಲಿರುವ ಮನೆಗಳು ತುಂಬಾ ಹಳೆಯ ಮಣ್ಣಿನ ಮನೆಗಳಾಗಿವೆ ಈಗಲೂ ಕೂಡ ಹಾಗೆಯೇ ಇವೆ ಅದರಲ್ಲಿಯೇ ವಾಸ ಮಾಡುತ್ತಾರೆ ಆದರೆ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಅವು ತುಂಬಾ ಶಿಥಿಲಗೊಂಡಿದ್ದು ಕುಸಿಯುವ ಹಂತಕ್ಕೆ ತಲುಪಿವೆ ಈ ಪರಿಣಾಮವಾಗಿ ಇಂದು ಮುಂಜಾನೆ ಎರಡರಿಂದ ಮೂರು ಗಂಟೆ ಸುಮಾರಿಗೆ ಸುಜಾತಾ ಗವಿಸಿದ್ದಪ್ಪ ಅಮರೇಶ್ ಮಲಗಿರುವ ಮನೆ ಕುಸಿತಗೊಂಡಿದೆ ಮಣ್ಣಿನ ಅಡಿಗೆ ಸಿಲುಕಿದ ಮೂರು ಮಕ್ಕಳು ಉಸಿರುಗಟ್ಟಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಬಾಳಿ ಬದುಕಬೇಕಾಗಿದ್ದ ಮಕ್ಕಳು ಈ ರೀತಿ ಸಾವನ್ನಪ್ಪ ಬಾರದಾಗಿತ್ತು ಎಂದು ಯಲಮಗೇರಿಯ ಜನ ಮಮ್ಮಲ ಮರಗುತ್ತಿದ್ದಾರೆ. ಸರಕಾರ ಶೀಘ್ರವಾಗಿ ಮೂರು ಮಕ್ಕಳಿಗೆ ಪರಿಹಾರ ನೀಡಬೇಕು ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ.

=4

follow me

6 Replies to “ಕೊಪ್ಪಳ ತಾಲೂಕಿನ ಯಲಮಗೇರಿ ಯಲ್ಲಿ ಜವರಾಯನ ಅಟ್ಟಹಾಸ ಮನೆ ಕುಸಿತಕ್ಕೆ ಮೂರು ಮಕ್ಕಳ ಬಲಿ”

  1. ನಿರ್ದಯಿ ದೇವರು
    ಆ ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲಿ

  2. ರಾಜ್ಯ ಸರಕಾರ ಕಣ್ಣನ್ನು ತೆರೆದು ನಮ್ಮ ಊರಿನ ಬಗ್ಗೆ ಗಮನ ಹರಿಸಲಿ

Leave a Reply

Your email address will not be published.

error: Content is protected !!
×