ಬಸವಣ್ಣ ಕ್ಯಾಂಪಿನಲ್ಲಿ ಅಕ್ರಮ ಮಧ್ಯಕ್ಕೆ ಕ್ರಮ ಕೈಗೊಳ್ಳಿ. ಯಾವುದೇ ಅಬಕಾರಿ ಸನ್ನದ್ದುಗಳಿಗೆ ಪರವಾನಿಗೆ ನೀಡಲೇಬಾರದು. ಹೋರಾಟಗಾರ ಜಮದಗ್ನಿ ಚೌಡಕಿ ಆಗ್ರಹ.

ವರದಿ :ಸುಂದರರಾಜ್ ಕಾರಟಗಿ

GBnewskannada :ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಬೇವಿನಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವಣ್ಣ ಕ್ಯಾಂಪ್ ನಲ್ಲಿ ಅಕ್ರಮ ಮದ್ಯ ಮಾರಾಟ ಯಥೇಚ್ಛವಾಗಿ ನಡೆಯುತ್ತಿದೆ ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯವರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದಲಿತ ಮುಖಂಡ ಸಾಮಾಜಿಕ ಹೋರಾಟಗಾರ ಜಮದಗ್ನಿ ಚೌಡಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರಟಗಿ ತಹಸಿಲ್ದಾರ್ ರವಿ.ಎಸ್.ಅಂಗಡಿ ರವರ ಮೂಲಕ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ದಿನಾಂಕ 24.8. 2020 ರಂದು ಕಾರಟಗಿ ತಹಸೀಲ್ದಾರರಾದ ಕವಿತಾ.ಆರ್. ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಜಿಲ್ಲಾಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಸುಮಾರು ವರ್ಷಗಳಿಂದ ನಡೆಯುತ್ತಲೇ ಬಂದಿದೆ ಈ ಹಿಂದೆ ಅಬಕಾರಿ ಇಲಾಖೆಯವರಿಗೆ ದಿನಾಂಕ06.03.2020. ಹಾಗೂ 27.05.2020 ರಂದು ಅಕ್ರಮ ಮದ್ಯ ಮಾರಾಟದ ವಿಡಿಯೋ ಚಿತ್ರೀಕರಣ ಮಾಡಿ ದೂರು ನೀಡಲಾಗಿತ್ತು ಆದರೂ ಅಬಕಾರಿ ಇಲಾಖೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಹಾಗಾಗಿ ಅಧಿಕಾರಿಗಳ ಮೇಲೆ ಅನುಮಾನ ವ್ಯಕ್ತವಾಗಿದೆ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟಕ್ಕೆ ಕುಮ್ಮಕ್ಕು  ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸವಣ್ಣ ಕ್ಯಾಂಪಿನಲ್ಲಿ ಅಧಿಕವಾಗಿ ಕೂಲಿಕಾರ್ಮಿಕರು ಕೃಷಿ ಕಾರ್ಮಿಕರು ದಲಿತರು ಕೂಲಿ ಮಾಡಿ ಜೀವನ ಸಾಗಿಸುವ ಸಾಗಿಸುತ್ತಿದ್ದಾರೆ ಒಂದು ಹೊತ್ತಿನ ಊಟಕ್ಕಾಗಿ ಹೊಲಗದ್ದೆಗಳಲ್ಲಿ ದುಡಿದು ಅದೇ ಹಣದಿಂದ ಅಕ್ರಮ ಮದ್ಯ ವ್ಯಸನಿಗಳಾಗಿ ಕುಟುಂಬಗಳ ಆರ್ಥಿಕ ಸಮತೋಲನ ಗ್ರಾಮದ ಸ್ವಾಸ್ಥ್ಯ ಹಾಳಾಗುತ್ತಿದೆ ಈಗಾಗಲೇ ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಹಲವಾರು ಪ್ರಕರಣಗಳು ದಾಖಲಾಗಿದ್ದು ಇಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂಬುದಕ್ಕೆ ಅಧಿಕೃತ ದಾಖಲೆ ಇದೆ. ಆದರೂ ಇಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ಕೊಟ್ಟು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕು ಈ ಗ್ರಾಮದಲ್ಲಿ ಯಾವುದೇ ರೀತಿಯ ಮದ್ಯ ಮಾರಾಟಗಳ ಸನ್ನದ್ದುಗಳಿಗೆ ಪರವಾನಿಗೆ ನೀಡಬಾರದು ಹಾಗೂ ಈ ಬಸವಣ್ಣ ಕ್ಯಾಂಪ್ ಗ್ರಾಮವನ್ನು ‘ಮದ್ಯ ಮುಕ್ತ ಗ್ರಾಮ’ವನ್ನಾಗಿ ಮಾಡಬೇಕು ಎಂದು ಜಿಬಿ ನ್ಯೂಸ್ ಕನ್ನಡ ವಾಹಿನಿ ಮೂಲಕ ಒತ್ತಾಯಿಸಿದ್ದಾರೆ.

ನೇರ ನಿಷ್ಠುರ ಸತ್ಯ ಹಾಗೂ ವಿಶ್ವಾಸನೀಯ ಸುದ್ದಿಗಳಿಗಾಗಿ ನಿತ್ಯ ಓದಿ ಮತ್ತು ವೀಕ್ಷಿಸಿರಿ.GBnewskannada.com

=2

follow me

Leave a Reply

Your email address will not be published.

error: Content is protected !!
×