ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಣ್ಣಲ್ಲಿ ಒಂದು ಹನಿ ನೀರು ಇಲ್ಲ. ಕಾರಟಗಿ ನವಲಿ ಸರ್ಕಲ್ ನಲ್ಲಿ ಸಾಹಿತಿ ಪೀರ್ ಬಾಷಾ ಆಕ್ರೋಶ.

ವರದಿ: ಸುಂದರರಾಜ್ ಕಾರಟಗಿ

GBNewskannada: ಉತ್ತರಪ್ರದೇಶದಲ್ಲಿ ರೈತರ ಮೇಲೆ ನಡೆದ ಹತ್ಯೆಯನ್ನು ಖಂಡಿಸಿ ಹಾಗೂ ಹುತಾತ್ಮರಾದ ರೈತರಿಗೆ ಪಂಜಿನ ಮೆರವಣಿಗೆ ಮೂಲಕ ಕಾರಟಗಿ ಜನಶಕ್ತಿ ಅಂಗಸಂಸ್ಥೆ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಹಾಗೂ ಪ್ರಗತಿಪರ ಚಿಂತಕರು ರೈತ ಸಂಘಟನೆಗಳು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನವಲಿ ಸರ್ಕಲ್ ನಲ್ಲಿ ಅಶ್ರುತರ್ಪಣ ಅರ್ಪಿಸಿದರು. ಈ ಸಂದರ್ಭದಲ್ಲಿ ರೈತ ಪರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನವಲಿ ಸರ್ಕಲ್ ನಲ್ಲಿ ಎರಡು ನಿಮಿಷಗಳ ಕಾಲ ಹುತಾತ್ಮರಾದ ರೈತರಿಗೆ ಮೌನಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಸಾಹಿತಿಗಳು ಪ್ರಗತಿಪರ ಚಿಂತಕರಾದ ಪೀರ್ ಬಾಷಾ ಅವರು ಮಾತನಾಡಿ………” ಇವತ್ತು ನಾವಿಲ್ಲಿ ಸೇರಿರುವುದು ದೇಶದಲ್ಲಿ ರೈತರ ಮೇಲೆ ಆಗಿರುವ ಹತ್ಯೆಗಳ ಸೂತಕದ ಸನ್ನಿವೇಶಕ್ಕಾಗಿ ನಮ್ಮ ನಮ್ಮ ಮನೆಯಲ್ಲಿ ಮನೆ ಯಜಮಾನ ಸತ್ಯರೆ ಯಾವ ರೀತಿಯಾಗಿ  ನೋವು ತುಂಬಿಕೊ ತುಂಬಿಕೊಳ್ಳುತ್ತೆ ಅಂತಹ ನೋವು ನಮ್ಮ ಎದೆಯಲ್ಲಿ ತುಂಬಿಕೊಂಡಿದೆ. ಮಕ್ಕಳು ಹಾಡು ಹೇಳ್ತಾರೆ….. “ಉಳುವ ಯೋಗಿಯ ನೋಡಲ್ಲಿ” ಅಂತೇಳಿ. ರೆಕಾರ್ಡ ಗಳಲ್ಲಿ ಹಾಡುಗಳನ್ನು ಕೇಳುತ್ತೇವೆ ಮಜಾ ಮಾಡೋಕೆ ಮಾತ್ರ ಇವೆ. ಆದರೆ ದೇಶದಲ್ಲಿ ರೈತರು ಹೋರಾಟ ಮಾಡಿದರೆ………? ಸೊಕ್ಕಿದ ರಾಜಕಾರಣಿಗಳು ಜೀಪುಗಳಲ್ಲಿ ಕಾರುಗಳಲ್ಲಿ ಕೂತ್ಕೊಂಡು ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕಾರು ಹತ್ತಿಸಿಕೊಂಡು ಹೋಗಿ ಅವರನ್ನು ಕೊಲ್ಲುವಷ್ಟು ಏನ್ ಅಹಂಕಾರ ತೋರಿಸುತ್ತಿದ್ದಾರೆ……?  ಆ ಅಹಂಕಾರದಿಂದ ಅನ್ನ ಬೆಳೆಯುವ ರೈತರು ಸತ್ತುಹೋಗಿದ್ದಾರೆ. ಆ ಸೂತಕದಲ್ಲಿ ನಾವಿದ್ದೇವೆ. ಆ ನೋವು ನಮ್ಮ ನೋವು. ಈ ದೇಶದ ರೈತರ ಶಾಪ, ನಮ್ಮ ದೇಶದ  ಗದ್ದುಗೆ ಮೇಲೆ ಕುಳಿತು ಮೆರೆಯುತ್ತಾದ್ದಿರಲ್ಲಾ ………! ಅವರಿಗೆ ತಟ್ಟುತ್ತೆ ಅಂತ ನಾವು ಭಾವಿಸಬೇಕು. ನಮ್ಮ ದೇಶದ ಪ್ರಧಾನಿಯಂತ ಯಾರನ್ನು ಕರಿತಾಯಿದ್ದೇವೆ ಈತ ಪ್ರಧಾನಿ ಅಂತ ಹೇಳೋದಕ್ಕೆ ನಮಗೆ ನಾಚಿಕೆ ಬಂದಿದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ರೈತರ ಮೇಲೆ ನುಗ್ಗಿಸಿಕೊಂಡು ಹೋಗಿ ನಾಲ್ಕು ಜನರನ್ನು ಹೆಣ ಹಾಕಿದ್ದಾರೆ. ಇವತ್ತು ಪ್ರಜಾಪ್ರಭುತ್ವ ಎಲ್ಲಿಗೆ ಬಂದಿದೆ. ಆ ವರದಿಯನ್ನು ಮಾಡುತ್ತಿದ್ದ ಒಬ್ಬ ಪತ್ರಕರ್ತನ ಮೇಲೆ  ಕಾರು ಹೋಗಿದೆ ಐದು ಜನ ಸತ್ತು ಹೋಗಿದ್ದಾರೆ. ಇಷ್ಟಾದರೂ ಕೂಡ ನಮ್ಮ” ಸೋಕಾಲ್ಡ್ ಮೋಡಲ್ ಪ್ರಧಾನ ಮಂತ್ರಿಗಳು ಸೈಲೆಂಟಾಗಿ ಕರಿಗಡುಬು ತಿನ್ಕಂತ ಕೂತಿದ್ದಾರೆ. ಅವರ ಕಣ್ಣೊಳಗೆ ಒಂದು ನೀರ ಹನಿ ರೈತರ ಪರವಾಗಿಲ್ಲ. ಆದರೆ ಈ ದೇಶದ ಯಾರಾದರೂ ಒಬ್ಬ ಕೋಟ್ಯಾಧೀಶ ನಮ್ಮನೆಗೆ ಚಹಾ ಕುಡಿಯೋಕೆ ಬನ್ನಿ ಅಂತೇಳಿ ಕರೆದರೆ ಅವರ ಮನೆಗೆ  ಹೋಗಿ ಸಪ್ಲೈ ಮಾಡುವಷ್ಟು ನಿಯತ್ತಿನ ಮನುಷ್ಯ ಆಗಿದ್ದಾನೆ, ಹೊರತು ರೈತರ  ಕ್ಯಾರೆ ಮಾಡದಂತಹ ಪ್ರಧಾನಮಂತ್ರಿಗಳುಈ ಸರ್ಕಾರ ರೈತ ವಿರೋಧಿಯಾಗಿದ್ದಾವೆ. ಯಾರು ಪ್ರಧಾನಿ ಬಗ್ಗೆ ವಿರುದ್ಧವಾಗಿ ಬರೆಯುತ್ತಾರೋ ಅವರ ಬಗ್ಗೆ ಪ್ರಚಾರ ಮಾಡಲ್ಲ, ಅವರ ವಿರುದ್ಧ ಛೂಬಿಟ್ಟ ನಾಯಿಗಳ ತರ ಸರ್ಕಾರ ವಿರುದ್ಧ ಟೀಕೆ ಮಾಡುವವರ ವಿರುದ್ಧ ನಾಯಿಗಳ ತರ ಎಗರುವ ಕೆಲವು ಮಾಧ್ಯಮಗಳು ರೈತರ ಮೇಲೆ ಕೂಡ ನಾಯಿಗಳ ತರಹ ಎಗರುತ್ತಿದ್ದಾವೆ. ನಮ್ಮ ದೇಶದ ರಾಜಧಾನಿಯಲ್ಲಿ ಕಳೆದ ಒಂದು ತಿಂಗಳಿನಿಂದ ಎರಡರಿಂದ ಮೂರು ಲಕ್ಷ ಜನ ಹೋರಾಟ ಮಾಡುತ್ತಿದ್ದಾರೆ. ರೈತರ ಶಾಂತಿಯಿಂದ ಹೋರಾಟ ಮಾಡುತ್ತಿದ್ದಾರೆ ಹೇಗಾದರೂ ಮಾಡಿ ರೈತರಿಗೆ ಸಿಟ್ಟೆಬ್ಭಿಸುವಂತೆ ಮಾಡಬೇಕು ರೈತರು ತಾವಾಗಿ ಕೈಯಾಗೆ ತಗೋಬೇಕು ಅಂತ ಹೇಳಿ ಇವರೇ ಸಿಟ್ಟೆ ಬೀಸುವಂತೆ ಮಾಡಿದರು ಕೂಡ ರೈತರು ಸಹನೆಯನ್ನು ಕಳೆದುಕೊಂಡಿಲ್ಲ ಶಾಂತಿಯಿಂದ ಹೋರಾಟ ಮಾಡುತ್ತಿದ್ದಾರೆ. ಉತ್ತರಪ್ರದೇಶದ ಲಖಿಂಪುರ ಎನ್ನುವಂತಹ ಊರಲ್ಲಿ ಹೋರಾಟಕ್ಕಾಗಿ ಲೈನ್  ಹಿಡಿದು ತಮ್ಮ ಪಾಡಿಗೆ ತಾವು ಗಾಂಧಿ ಮಾರ್ಗದಲ್ಲಿ ಶಾಂತಿಯಿಂದ ಹೋಗುತ್ತಾ ಇದ್ದ ರೈತರ ಮೇಲೆ ಅದೇನಾಗುತ್ತೋ ಆಗಲಿ ನೋಡೇಬಿಡೋಣ ಅಂತೇಳಿ ಈ ದೇಶದ ಗೃಹ ಇಲಾಖೆಯ ರಾಜ್ಯ ಸಚಿವ ಅಜಯ್ ಮಿಶ್ರ ಮಗ ಕಾರು ಹತ್ತಿಸಿ ರೈತರನ್ನು ನಿರ್ಧಾಕ್ಷಿಣ್ಯವಾಗಿ ಹತ್ಯೆಗೈದಿದ್ದಾನೆ ಇದೇನಾ ಪ್ರಜಾಪ್ರಭುತ್ವ ……?  ಇವರು ಸಬ್ಸಿಡಿ ಅಂದ್ರು ಸಿಲಿಂಡರ್ ಬೆಲೆ ಏರಿಸಿದರು. ಬೆಲೆ ಏರಿಕೆ ಕಡಿಮೆ ಮಾಡ್ತೀವಿ ಅಂದ್ರು ,ಬೆಲೆ ಏರಿಕೆ ಜಾಸ್ತಿ ಮಾಡಿದರು. ಪೆಟ್ರೋಲ್ ರೇಟ್ ಕಡಿಮೆ ಮಾಡ್ತೀವಿ ಅಂದರು , ಪೆಟ್ರೋಲ್ ರೇಟ್ ಜಾಸ್ತಿ ಮಾಡಿದರು. ಏನೇನು ಕಡಿಮೆ ಮಾಡ್ತೀವಿ ಅಂದ್ರು, ಅದೆಲ್ಲ ಜಾಸ್ತಿ ಮಾಡ್ತಾ ಬಂದಿದ್ದಾರೆ. ಮತ್ತು ಈ ಭಾರತ ದೇಶವನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿ ಹೋಗಬೇಕೆಂದು ಪಣತೊಟ್ಟು ಬಂದಿದ್ದಾರೆ. ಆದರೆ ಇದನ್ನೆಲ್ಲ ಕೊಳಕನ್ನು ಮುಚ್ಚಿಕೊಳ್ಳುವ ಸಲುವಾಗಿ ದೇಶಭಕ್ತಿ ಅಂತ ಮಾತನಾಡುತ್ತಾರೆ. ರಾಮಮಂದಿರ ಅಂತ ಮಾತಾಡ್ತಾರೆ. ಸಂಸ್ಕೃತಿ ಅಂತ ಮಾತಾಡ್ತಾರೆ. ಹಾಗಾಗಿ ಇವರು ತೊಲಗದೆ ಈ ದೇಶದ ಉಳಿಯಲ್ಲ ಅನ್ನುವಂತಹ ಕಾರಣಕ್ಕಾಗಿ ರೈತರು ಇವತ್ತೇನು ಹೋರಾಟ ಮಾಡುತ್ತಿದ್ದಾರೆ, ರೈತರ ಜೊತೆ ನಾವಿದ್ದೇವೆ ಎನ್ನುವ ಸಂದೇಶ ಸಾರುವದಕ್ಕಾಗಿ ನಾವು ಇಲ್ಲಿ ಸೇರಿದ್ದೇವೆ. ಮತ್ತು ಲಖಿಂಪುರದಲ್ಲಿ ಪ್ರಾಣಾರ್ಪಣೆ ಮಾಡಿದಂತಹ ರೈತರಿಗೆ ನಾವು ಈ ಬೆಳಕಿನ ಕಿರಣವನ್ನು ಕೈಯೊಳಗಿಟ್ಟುಕೊಂಡು  ಈ ದೀಪವನ್ನು ಇಟ್ಟುಕೊಂಡು ನಾವು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ  ಎಂದು  ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ತಾಜಾ ಮತ್ತು ವಿಶ್ವಾಸನೀಯ ಸುದ್ದಿಗಳಿಗಾಗಿ ವೀಕ್ಷಿಸಿರಿ. GBnewskannada.com

=2

follow me

Leave a Reply

Your email address will not be published.

error: Content is protected !!
×