ರೈತರ ಮೇಲೆ ಕಾರು ಹರಿಸಿದವರನ್ನು ಗಲ್ಲಿಗೇರಿಸಿ. ಹತ್ಯೆಯಾಗಿರುವ ರೈತರಿಗೆ ತಲಾ 50 ಲಕ್ಷ ಪರಿಹಾರ ನೀಡಿ AKRAS ರಾಜ್ಯಾಧ್ಯಕ್ಷ ಶರಣೇಗೌಡ ಆಗ್ರಹ

ವರದಿ: ಸುಂದರರಾಜ್ ಕಾರಟಗಿ

GBnewskannada :ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರುಗಳಿಗೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರ ತೆನಿ ಬಹಿರಂಗ ಬೆದರಿಕೆ ಹಾಕಿದ್ದರು ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಅಜಯ್ ಮಿಶ್ರ ಮಗ ಆಶಿಶ್ ಮಿಶ್ರಾ ರೈತರ ಗುಂಪಿನ ಮೇಲೆ ಉದ್ದೇಶಪೂರ್ವಕವಾಗಿ ಕಾರು ಹರಿಸಿ ನಾಲ್ವರ ರೈತರ ಹತ್ಯೆ ಮಾಡಿದ ಘಟನೆಯನ್ನು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ಸಂಘ (ರಿ)ತೀವ್ರವಾಗಿ ಖಂಡಿಸಿದೆ.ಉತ್ತರಪ್ರದೇಶದ ಕಾನೂನು-ಸುವ್ಯವಸ್ಥೆ ಹದೆಗೆಟ್ಟಿದೆ ನಿರಂತರವಾಗಿ ಇಲ್ಲಿ ಜನಗಳ ಮೇಲೆ ಕೊಲೆ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ, ಸರ್ಕಾರದ ವಿರುದ್ಧ ಕೂಗುವ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ, ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು ಉತ್ತರಪ್ರದೇಶದಲ್ಲಿ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ, ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಹಿನ್ನಡೆಯಾಗುತ್ತಿದೆ,  ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಹೋರಾಟ ಮಾಡುವ ದೇಶಾದ್ಯಂತ ಹೋರಾಟ ಮಾಡುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ  ಪ್ರಕರಣಗಳನ್ನು ದಾಖಲು ಮಾಡುತ್ತಿದೆ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ಎಂಬುದನ್ನು ಮರೆತು ಜನಗಳ ರಕ್ತ ಹರಿಸುವ ಹಿಟ್ಲರ್ ಮಾದರಿ ಅಧಿಕಾರವನ್ನು ಚಲಾವಣೆ ಮಾಡುತ್ತಿದೆ ರೈತರ ಮೇಲೆ ಕಾರು ಹರಿಸಿದ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನೆ ಮಗನಾದ  ಅಸಿಸ್ ಮಿಶ್ರಾನನ್ನು ಗಲ್ಲಿಗೇರಿಸಬೇಕು, ಹತ್ಯೆಯಾಗಿರುವ ಒಬ್ಬೊಬ್ಬ ರೈತರಿಗೆ 50 ಲಕ್ಷ ಪರಿಹಾರವನ್ನು ನೀಡಬೇಕೆಂದು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ಸಂಘ (ರಿ)ರಾಜ್ಯಾಧ್ಯಕ್ಷ ಶರಣೆಗೌಡ ಕೆಸರಹಟ್ಟಿ ಆಗ್ರಹಿಸಿದ್ದಾರೆ.

ತಾಜಾ ಮತ್ತು ವಿಶ್ವಾಸನೀಯ ಸುದ್ದಿಗಳಿಗಾಗಿ ನಿತ್ಯ ಓದಿ ಮತ್ತು ವೀಕ್ಷಿಸಿGBnewskannada.com

=2

follow me

Leave a Reply

Your email address will not be published.

error: Content is protected !!
×