ಹಳ್ಳಿಯ ವರದಿಗಾರನಿಗೆ ‘ಕನ್ನಡ ಮಾಣಿಕ್ಯ’ ರಾಜ್ಯಪ್ರಶಸ್ತಿ.ರಮೇಶ್ ತೊಂಡಿಹಾಳ ಇವರ ಬಗ್ಗೆ ಒಂದು ನೋಟ.

 

ವರದಿ: ಸುಂದರರಾಜ್ ಕಾರಟಗಿ

GBnewskannada : ‘ಒಂದು ತೊಟ್ಟು ನೀರು ಸಹ ಕಾಲಿಗೆ ಸೋಕದೆ ಸಮುದ್ರ ದಾಟಬಹುದು. ಆದರೆ ಒಂದು ತೊಟ್ಟು ಕಣ್ಣೀರು ಹಾಕದೆ ಜೀವನದ ಸಾಗರ ದಾಟುವುದು ಕಷ್ಟ’ ಎನ್ನುವ ದಾರಾ ಬೇಂದ್ರೆ ಅವರ ಮಾತಿನಂತೆ ಜೀವನದ ಏಳುಬೀಳುಗಳ ನಡುವೆ ಬಡತನದ ಬವಣೆಗಳ ನಡುವೆ ಸಾಧನೆ ಮಾಡಿ ತೋರಿಸುವುದು ಎಂದರೆ ಅದು ಸಾಮಾನ್ಯವಾದ ಮಾತಲ್ಲ  ಈ ದೇಶದಲ್ಲಿ ಸಾಧನ ಮಾಡಿದ ಪ್ರತಿಯೊಬ್ಬರ ಹಿಂದಿನ ಸತ್ಯ ಹುಡುಕುವುದಾದರೆ ಅದು ಹೂವಿನ ದಾರಿ ಆಗಿರುವುದಿಲ್ಲ ಮುಳ್ಳಿನ ದಾರಿ ದಾಟಿ ಬಂದ ಅದೆಷ್ಟು ಸದ್ದುಮಾಡುವ ಹೆಜ್ಜೆಗುರುತುಗಳು ಕಾಣಸಿಗುತ್ತವೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಒಂದು ಪುಟ್ಟ ಗ್ರಾಮ ತೊಂಡಿಹಾಳ ಈ ಗ್ರಾಮದ ಪದವೀಧರ ಯುವಕ ದಲಿತ-ದಮನಿತರ  ಚಿಂತಕ ಶ್ರೀ ರಮೇಶ್ ತಂದೆ ಹನುಮಂತಪ್ಪ.ತೊಂಡಿಹಾಳ ಇವರಿಗೆ ‘ಕನ್ನಡ ಮಾಣಿಕ್ಯ ಪ್ರಶಸ್ತಿ’ ತನ್ನಷ್ಟಕ್ಕೆ ತಾನೇ ಒಲಿದುಬಂದಿದೆ. ಕತ್ತಿಗಿಂತ ಹರಿತವಾದ ಶಬ್ದಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಸಾರ್ವಜನಿಕ ಹಿತಾಸಕ್ತಿಗೆ ಸ್ವಾರ್ಥವಿಲ್ಲದೆ ಅಕ್ಷರಗಳ ಮೂಲಕ ನಿಸ್ವಾರ್ಥವಾಗಿ ಪತ್ರಿಕಾ ಮಾಧ್ಯಮದಲ್ಲಿ ಹೆಸರುಮಾಡಿರುವ ರಮೇಶ್ ತೊಂಡಿಹಾಳ ಇವರಿಗೆ ಕನ್ನಡ ಮಾಣಿಕ್ಯ ಪ್ರಶಸ್ತಿ ದೊರೆತದ್ದು ಜಿಲ್ಲೆಯ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ರಮೇಶ್ ತೊಂಡಿಹಾಳ ಇವರು ಪ್ರಾಥಮಿಕ ಶಿಕ್ಷಣವನ್ನು’ ಸರಕಾರಿ ಪ್ರಾಥಮಿಕ ಶಾಲೆ ತೊಂಡಿಹಾಳ’ ಗ್ರಾಮದಲ್ಲಿ, ಪ್ರೌಢಶಾಲೆಯನ್ನು ‘ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಿದ್ಧಾಪುರ’ ದಲ್ಲಿ, ಪಿಯುಸಿ ಶಿಕ್ಷಣವನ್ನು ‘ಶ್ರೀಗವಿಸಿದ್ದೇಶ್ವರ ಸಂಸ್ಥಾನ ಮಠ ಕೊಪ್ಪಳ’ದಲ್ಲಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ‘ಎಚ್ ಆರ್ ಜಿ ರಾಮುಲು ಸ್ಮಾರಕ ಮಹಾವಿದ್ಯಾಲಯ ಗಂಗಾವತಿ’ಯಲ್ಲಿ ‘ಎಂಎ ಪದವಿಯನ್ನು ಕೊಲ್ಲಿ ನಾಗೇಶ್ವರ ಮಹಾವಿದ್ಯಾಲಯ ಗಂಗಾವತಿ’ಯಲ್ಲಿ ಮತ್ತು ಬಿ.ಈಡಿ ಪದವಿಯನ್ನು ‘ಶ್ರೀಶೈಲ ವಿದ್ಯಾಕೇಂದ್ರ ಸಂಡೂರಿನ’ಲ್ಲಿ ಅಭ್ಯಾಸ ಮಾಡಿದ್ದಾರೆ. ರಮೇಶ್ ತೊಂಡಿಹಾಳ್ ಇವರು ಚಿಕ್ಕವರಾಗಿದ್ದಾಗ ನಿಂದಲೂ ಶಿಕ್ಷಣದಲ್ಲಿ ಆಸಕ್ತಿಯಿಂದ ಪ್ರತಿಯೊಂದು ತರಗತಿಯಲ್ಲಿ ಕೂಡ ಉತ್ತಮ ಅಂಕಗಳನ್ನು ತೆಗೆದುಕೊಂಡು ಪದವೀಧರರಾಗಿ ಪತ್ರಿಕಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.  “ಹಚ್ಚುವುದಾದರೆ ದೀಪವನ್ನು ಹಚ್ಚು ಬೆಂಕಿಯನ್ನಲ್ಲ” ಹಾರಿಸುವುದಾದರೆ ನೋವನ್ನೇ ಆರಿಸು ನಗುವನಲ್ಲ ಎನ್ನುವ ದ.ರಾ ಬೇಂದ್ರೆ ಅವರ ನಾಣ್ಣುಡಿಯಂತೆ ರಮೇಶ್ ತೊಂಡಿಹಾಳ ಇವರು ಸಮಾಜದ ಪರವಾಗಿ ಹಾಗೂ ಸಾರ್ವಜನಿಕ ಹಿತಾಸಕ್ತಿ ಗಾಗಿ ಹಲವಾರು ಚಿಂತನೆಗಳನ್ನು ಮಾಡುವ ಚಿಂತಕರು ಎಂದು ಹೇಳಬಹುದು ಪತ್ರಿಕಾ ರಂಗದಲ್ಲಿ ಸಮಾಜ ಸೇವೆಯನ್ನು ಸಲ್ಲಿಸುತ್ತ, ಬಡವರ, ದೀನ ದಲಿತರ ಪರ ಧ್ವನಿಯನ್ನು ಎತ್ತಿ, ಅನ್ಯಾಯದ ವಿರುದ್ಧ ತಮ್ಮದೆಯಾದ ಬರವಣಿಗೆಯ ಮೂಲಕ ತಾಲೂಕಿನಾದ್ಯಂತ ಹೆಸರು ಗಳಿಸುತ್ತಿರುವ ತೊಂಡಿಹಾಳ ಗ್ರಾಮದ ಯುವ ಪತ್ರಕರ್ತರಾದ ರಮೇಶ ತೊಂಡಿಹಾಳ ಇವರಿಗೆ ಮಾಧ್ಯಮ ಕ್ಷೇತ್ರದಲ್ಲಿ ಕನ್ನಡ ಮಾಣಿಕ್ಯ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಿನಾಂಕ 03-10-2021ರ ಬೆಂಗಳೂರಿನ ಜಿ.ಎಮ್. ರಿಜಾಯ್ಸ ಮಲ್ಲೇಶ್ವರಂ’ನಲ್ಲಿ ನಡೆದ ಕವಿತಾ ಮೀಡಿಯಾ ಸೋರ್ಸ್ ಪ್ರೈವೆಟ್ ಲಿಮಿಟೆಡ್’ನ ಬಿ.ಎನ್ ಹೊರಪೇಟೆ ಸಾರಥ್ಯದಲ್ಲಿ ಕಲಾವಿದರ ಧ್ವನಿಯಾಗಿ ದುಡಿಯುತ್ತಿರುವ ಹೈಬ್ರೀಡ್ ನ್ಯೂಸ್ ವಾಹಿನಿ ಎರಡನೇ ವರ್ಷದ ಸಂಭ್ರಮದ ಸಾಧಕರಿಗೆ ಪ್ರಶಸ್ತಿ ಸಮಾರಂಭದಲ್ಲಿ ಯುವ ಪತ್ರಕರ್ತ ರಮೇಶ ತೊಂಡಿಹಾಳ ಇವರಿಗೆ ‘ಕನ್ನಡ ಮಾಣಿಕ್ಯ’ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಕಾರಟಗಿಯ ಪತ್ರಕರ್ತ ಮಿತ್ರರು, ಸ್ನೇಹಿತರು, ಹಿತೈಷಿಗಳು, ಕುಟುಂಬದ ಬಂಧು ಮಿತ್ರರು ಶುಭ ಹಾರೈಸಿದ್ದಾರೆ. ಇವರಿಗೆ ಇನ್ನಷ್ಟು ಪ್ರಶಸ್ತಿ ಪ್ರಧಾನಗಳು ಸಿಗಲಿ ಹಾಗೂ ನಾಡಿನಾದ್ಯಂತ ಇವರ ಹೆಸರು ಪಸರಿಸಲಿ ಎನ್ನುವುದು ಜಿಬಿ ನ್ಯೂಸ್ ಕನ್ನಡ ವಾಹಿನಿಯ  ಆಶಯವಾಗಿದೆ.

ತಾಜಾ ಮತ್ತು ವಿಶ್ವಾಸನೀಯ ಸುದ್ದಿಗಳಿಗಾಗಿ ನಿತ್ಯವೂೂ ಓದಿ ವೀಕ್ಷಿಸಿ GBnewskannada.com

=6

follow me

Leave a Reply

Your email address will not be published.

error: Content is protected !!
×