ರಾಜ್ಯದ ಪ್ರಭಲ ಹೋರಾಟ ಸಂಘಟನೆ “ಕರ್ನಾಟಕ ಜನಶಕ್ತಿ” ಅಂಗ ಸಂಘಟನೆ ‘ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಪ್ರಾರಂಭ.

ವರದಿ:ಸುಂದರರಾಜ್ ಕಾರಟಗಿ

GBnewskannada : ಕರ್ನಾಟಕ ರಾಜ್ಯದ ಪ್ರಭಲ ಹೋರಾಟ ಸಂಘಟನೆಯಾದ ‘ಕರ್ನಾಟಕ ಜನಶಕ್ತಿ ‘ಅಂಗ ಸಂಘಟನೆಯಾದ ‘ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ’ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಪ್ರಾರಂಭವಾಗಯಿತು. “ಜೈ ಭೀಮ್” ಲಾಲ್ ಸಲಾಂ” ಘೋಷವಾಕ್ಯದೊಂದಿಗೆ ಕರ್ನಾಟಕ ಜನಶಕ್ತಿ ಹಿರಿಯ ಹೋರಾಟಗಾರ ‘ಕರಿಯಪ್ಪ ಗುಡಿಮನಿ’ ಅವರಿಂದ ಪ್ರಾರಂಭವಾಯಿತು. ಇತ್ತೀಚಿಗೆ ರಾಜ್ಯಾದ್ಯಂತ ಸುದ್ದಿಯಾಗಿರುವ ಕೊಪ್ಪಳ  ಜಿಲ್ಲೆಯ ಹಲವು ಪ್ರಕರಣಗಳು ದಲಿತರ ಮೇಲೆ ಹಲ್ಲೆ ಹಾಗೂ ಅಸ್ಪೃಶ್ಯತೆ ಆಚರಣೆಗೆ ಸಂಬಂಧಿಸಿದಂತೆ ಕರ್ನಾಟಕದಾದ್ಯಂತ ಸುದ್ದಿಯಾಗಿದೆ. ಇದನ್ನು ಅರಿತ ‘ಕರ್ನಾಟಕ ಜನಶಕ್ತಿ’ ಕೊಪ್ಪಳ ಜಿಲ್ಲೆಯ ನಡೆಯುತ್ತಿರುವ ಅಸ್ಪೃಶ್ಯತೆ ಹಾಗೂ ದಲಿತರ ಮೇಲೆ ಹಲ್ಲೆ ಗಳನ್ನು ಖಂಡಿಸಿ ಇಲ್ಲಿ ತನ್ನದೇ ಆದ ತತ್ವ ಸಿದ್ಧಾಂತಗಳ, ಕಾನೂನಾತ್ಮಕ ಹೋರಾಟಗಳ, ಸಂಘಟನೆ ಮೂಲಕ ಸಾಮಾಜಿಕ ನ್ಯಾಯ, ಸಾಮಾಜಿಕ ಹೋರಾಟಕ್ಕೆ, ಸಿದ್ಧವಾಗಿದೆ. ಕಾರಟಗಿ ತಾಲೂಕಿನ ವಿದ್ಯಾವಂತ ಯುವಕರು ಸಾಮಾಜಿಕ ಹೋರಾಟಗಾರರು ‘ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ’ಯ ತತ್ವಸಿದ್ಧಾಂತಗಳನ್ನು ಒಪ್ಪಿ ಸಂಘಟನೆಯ ತಾಲೂಕ ಪದಾಧಿಕಾರಿಗಳಾಗಿ ಆಯ್ಕೆಗೊಂಡಿದ್ದಾರೆ. ಕಾರಟಗಿ ತಾಲೂಕಿನ ಪರಿವೀಕ್ಷಣಾ ಮಂದಿರದಲ್ಲಿ ಸಭೆ ಸೇರಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಜನಶಕ್ತಿ ಸಂಘಟನೆಗಳ ಪ್ರಾರಂಭ ಹಾಗೂ ಅದರ ಹೋರಾಟ ಸಂಘಟನೆಯ ಹೋರಾಟ ಸಂಘಟನೆ ರಾಜ್ಯಾದ್ಯಂತ  ವ್ಯಾಪಿಸಿದ ಬಗ್ಗೆ ಹಾಗೂ ಸಾಮಾಜಿಕ ಪರವಾಗಿ ನಡೆಸಿದಂತಹ ಹೋರಾಟಗಳ ಬಗ್ಗೆ ಸವಿಸ್ತಾರವಾಗಿ ಕರಿಯಪ್ಪ ಗುಡಿಮನಿ ಮಾತನಾಡಿದರು…..” ತಳಹದಿ ಗಟ್ಟಿ ಇಲ್ಲ ಅಂದರೆ ಯಾವುದೇ ಕಟ್ಟಡ ನಿಲ್ಲುವುದಿಲ್ಲ ಸಂಘಟನೆ ಗಟ್ಟಿಯಾಗಬೇಕಾದರೆ ತಳಹದಿ ಗಟ್ಟಿ ಇರಬೇಕು. ಹೀಗಾಗಿ ಕರ್ನಾಟಕ ಜನಶಕ್ತಿ ಸಂಘಟನೆಯನ್ನು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ತಳಹದಿ ಎಂದು ಹೇಳಬಹುದು. ಕೋಲಾರ’ ಬೆಂಗಳೂರು’ ಶಿವಮೊಗ್ಗ’ ಚಿಕ್ಕಮಂಗಳೂರು’ ಮಂಗಳೂರು’ ಉಡುಪಿ’ ಹೈದರಾಬಾದ್-ಕರ್ನಾಟಕ, ಬಾಂಬೆ ಕರ್ನಾಟಕ ಭಾಗಗಳಲ್ಲಿ ‘ಕರ್ನಾಟಕ ಜನಶಕ್ತಿ’ ಹಲವಾರು ಹೋರಾಟಗಳ ಮೂಲಕ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟದ ಜೊತೆಗೆ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿ ತನ್ನದೇ ಆದ ಸಂಘಟನೆಯನ್ನು ವಿಸ್ತರಿಸಿದೆ ಪ್ರಾಮಾಣಿಕತೆಯಿಂದ ಎಲ್ಲಾ ಗ್ರಾಮಗಳಲ್ಲಿ ಧ್ವನಿಯೆತ್ತಬೇಕು. ಸಾಮಾಜಿಕವಾಗಿ ಎಲ್ಲರ ಜೊತೆ ಎಲ್ಲಾ ಜಾತಿ ಜನಗಳ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಸಂಘಟನೆ ಮುನ್ನಡೆಸಬೇಕು, ‘ಎತ್ತುಗೆ ಮೂಗುದಾಣ ಇರುವಂತೆ ‘ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ’ಗೆ ತನ್ನದೇ ಆದ ಅಜೆಂಡಾ ಇದೆ, ಪ್ರಾಮಾಣಿಕತೆ ಇದೆ, ಕರ್ನಾಟಕ ಜನಶಕ್ತಿಗಿರುವ ಅಜಾಂಡಾ” ಸ್ವಾಭಿಮಾನ ಸ್ವಾತಂತ್ರ….. ಸಮಾನತೆ”  ನಮ್ಮ ಸಿದ್ಧಾಂತ.ಈ ಸಿದ್ಧಾಂತದ ಮೇಲೆ ನಿರ್ಮಾಣಗೊಂಡ ಸಂಘಟನೆ ಇದಾಗಿದೆ. ‘ಕತ್ತಲಿಂದ ಬೆಳಕಿನೆಡೆಗೆ ನಮ್ಮ ಹೋರಾಟ’ ‘ಸಮಾನತೆಗಾಗಿ ನಮ್ಮ ನಡೆ’ ಇದು ಸಂಘಟನೆಯ ನಿಲುವು ಅದರ ಸಿದ್ಧಾಂತ ಜವಾಬ್ದಾರಿ ಪದ್ಧತಿ ವೈಚಾರಿಕತೆ ವಿಚಾರದಲ್ಲಿ ಸೈದ್ಧಾಂತಿಕ ನೆಲೆಯಲ್ಲಿ ನಾವು ಕಟ್ಟುವಂತಹ ಸಂಘಟನೆ ‘ಕರ್ನಾಟಕ ಜನಶಕ್ತಿ’ “ಕರ್ನಾಟಕ ಮಾದಿಗರ ರಕ್ಷಣೆ ವೇದಿಕೆ”ಆ ನಿಟ್ಟಿನಲ್ಲಿ ನಾವೆಲ್ಲ  ಸಂಘಟನೆಯನ್ನು ಮುನ್ನಡೆಸಬೇಕು ಎಂದರು.ನಂತರ ಸಾಮಾಜಿಕ ಹೋರಾಟಗಾರರ ಪ್ರಗತಿಪರ ಚಿಂತಕರಾದ ಫೀರಭಾಷ ಇವರು ಮಾತನಾಡಿ  ಉತ್ತರಪ್ರದೇಶದಲ್ಲಿ ನಡೆಯುವಂತಹ ದಬ್ಬಾಳಿಕೆ ದೌರ್ಜನ್ಯಗಳು ಇಲ್ಲಿಯೂ ನಡೆಯುತ್ತಿವೆ,  ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ ಹೀಗಾಗಿ ಈ ಸಂಘಟನೆಯ ಮೂಲಕ ಸಾಮಾಜಿಕ ನ್ಯಾಯ ಮತ್ತು ದಲಿತ-ದಮನಿತರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧವಾಗಿ ಪ್ರಾಮಾಣಿಕವಾಗಿ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗಿ ಎಂದು ಹೇಳಿದರು. ತದನಂತರ ಕಾರಟಗಿ ತಾಲೂಕ ಸಂಘಟನೆಯ ಪದಾಧಿಕಾರಿಗಳನ್ನು ನೇಮಿಸಲಾಯಿತು ಗಾಳೇಶ ಮ್ಯಾಗಡಿ ಮನಿ ಗೌರವಾಧ್ಯಕ್ಷರು. ಹುಲಿಗೇಶ ಡೆಂಗೇರಿ ಅಧ್ಯಕ್ಷರು. ಜಮದಗ್ನಿ ಚೌಡಕಿ ಪ್ರಧಾನ ಕಾರ್ಯದರ್ಶಿ. ಯಮನೂರ್ ಗಿಣಿವಾರ ಉಪಾಧ್ಯಕ್ಷರು. ಮೌನೇಶ್ ಭಜರಂಗಿ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು. ಕಾರ್ಯಕಾರಿಣಿ ಮಂಡಳಿ ಸದಸ್ಯರಾಗಿ ಗುರುರಾಜ. ದುರ್ಗೇಶ್ ಬಂಡಿ. ನಾರಾಯಣಿ ಗೂಡೂರು. ಹನುಮೇಶ್ ಹಗೆದಾಳ. ಲಕ್ಷ್ಮಣ ಕೆಂಗೇರಿ. ಹನುಮಂತ. ಸುಂದರರಾಜ್ ಜಿಬಿ ನ್ಯೂಸ್. ಆನಂದ ಬಸವಣ್ಣ ಕ್ಯಾಂಪ್. ಇನ್ನು ಇತರರು ಆಯ್ಕೆಯಾದರು.

ತಾಜಾ ವಿಶ್ವಾಸನೀಯ ಸುದ್ದಿಗಳಿಗಾಗಿ ನಿತ್ಯವೂ ಓದಿ ಮತ್ತು ವೀಕ್ಷಿಸಿGBnewskannada.com

=0

follow me

Leave a Reply

Your email address will not be published.

error: Content is protected !!
×