ಅಸ್ಪೃಶ್ಯತಾ ನಿವಾರಣೆಗಾಗಿ ಕೊಪ್ಪಳ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ.ನಾಳೆ ಮುಸಲಾಪುರ,ಹಣವಾಳ,ಬೆನ್ನೂರು,ಗ್ರಾಮಗಳಲ್ಲಿ ಅರಿವು ಕಾರ್ಯಕ್ರಮ

ವರದಿ :ಸುಂದರರಾಜ್ ಕಾರಟಗಿ

GBnewskannada : ಕೊಪ್ಪಳ ಜಿಲ್ಲೆಯಾದ್ಯಂತ ಅಸ್ಪೃಶ್ಯತಾ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಕೊಪ್ಪಳ ಜಿಲ್ಲಾಡಳಿತ ಜಿಲ್ಲೆಯಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ಜನರಲ್ಲಿ ಜಾಗೃತಿ ಹಾಗೂ ಅಸ್ಪೃಶ್ಯತಾ ಅರಿವು ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ 24.09.2021 ರಂದು ನಡೆದ ಸಭೆಯಲ್ಲಿ ಅಸ್ಪೃಶ್ಯತಾ ನಿವಾರಣ ಜಾಗೃತಿ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯಾದ್ಯಂತ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ನಿರ್ದೇಶನವೂ ಕೂಡ ನೀಡಲಾಗಿದೆ ಅದರಂತೆ ಸಹಾಯಕ ನಿರ್ದೇಶಕರು ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ ಗಂಗಾವತಿ ಇವರು ಕನಕಗಿರಿ ಹೋಬಳಿಯ ಮುಸಲಾಪುರ, ಸಿದ್ದಾಪುರ ಹೋಬಳಿಯ ಬೆನ್ನೂರು, ಕಾರಟಗಿ ಹೋಬಳಿಯ ಹಣವಾಳ ಗ್ರಾಮಗಳಲ್ಲಿ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ದೌರ್ಜನ್ಯ ಪ್ರತಿಬಂಧ 1989ರಡಿ ಹಾಗೂ 2015 ಮತ್ತು ನಿಯಮಗಳು 1995 ಮತ್ತು ಪರಿಷ್ಕೃತ ನಿಯಮಗಳು 2016ರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಾಳೆ ದಿನ ಅಂದರೆ 01.10.2021 ರಂದು ಅಸ್ಪೃಶ್ಯತಾ ನಿವಾರಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಆಯಾಭಾಗದ ತಹಸಿಲ್ದಾರರು (ಕನಕಗಿರಿ ,ಕಾರಟಗಿ)
ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯಿತಿ (ಕನಕಗಿರಿ, ಕಾರಟಗಿ) ವೃತ್ತ ಆರಕ್ಷಕ ಉಪ ನಿರೀಕ್ಷಕರು ಸಿಪಿಐ ಗಂಗಾವತಿ, ಆರಕ್ಷಕ ಉಪ ನಿರೀಕ್ಷಕರು (ಕನಕಗಿರಿ, ಕಾರಟಗಿ) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಗಂಗಾವತಿ, ಶಿಶು ಅಭಿವೃದ್ಧಿ ಅಧಿಕಾರಿಗಳು (ಕನಕಗಿರಿ, ಕಾರಟಗಿ) ಸಹಾಯಕ ನಿರ್ದೇಶಕರು ಪಶುಪಾಲನಾ ಇಲಾಖೆ ಗಂಗಾವತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಗಂಗಾವತಿ, ಇವರುಗಳ ತಂಡ ಅಸ್ಪೃಶ್ಯತಾ ನಿವಾರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಸುವ ಆಯ್ಕೆಯಾದ ಗ್ರಾಮಗಳ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಅಸ್ಪೃಶ್ಯತಾ ನಿವಾರಣೆ ಬಗ್ಗೆ ಅರಿವು ಮೂಡಿಸಲು ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ದೂರುಗಳಿಗೆ ಸ್ಪಂದಿಸಲು ಅಧಿಕಾರಿಗಳ ತಂಡ ಹಾಜರಿರುತ್ತದೆ. ಕಾರಣ ಕನಕಗಿರಿ ಮುಸಲಾಪುರ ಗ್ರಾಮ ಕಾರಟಗಿ ಹಣವಾಳ ಗ್ರಾಮ ಸಿದ್ದಾಪುರ ಬೆನ್ನೂರು ಗ್ರಾಮಗಳ ಸಾರ್ವಜನಿಕರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋರಲಾಗಿದೆ.

ತಾಜಾ ಮತ್ತು ವಿಶ್ವಾಸನೀಯ ಸುದ್ದಿಗಳಿಗಾಗಿ ನಿತ್ಯ ಓದಿ ಮತ್ತು ವೀಕ್ಷಿಸಿರಿ

GBnewskannada.com

=0

follow me

Leave a Reply

Your email address will not be published.

error: Content is protected !!
×