ದಲಿತ ಕುಟುಂಬದ ಹಸುಗೂಸು ದೇವಾಲಯ ಪ್ರವೇಶ 25 ಸಾವಿರ ದಂಡ; ಖಂಡನೆ

ವರದಿ: ಮಹೇಶ್ ಕಡೆಮನಿ

ಅಮಾಯಕ 2 ವರ್ಷದ ಹಸೂಗೂಸು ಮುದ್ದುಕಂದಮ್ಮನನ್ನು ಆತನ ತಂದೆ ತನ್ನ ಮಗನ 2 ನೇ ವರ್ಷದ ಹುಟ್ಟುಹಬ್ಬದ ನಿಮಿತ್ಯವಾಗಿ ದೇವಾಲಯಕ್ಕೆ ಪೂಜೆ ಸಲ್ಲಿಸದು ಹೋದ ಸಂದರ್ಬದಲ್ಲಿ ಆಟ ಆಡುತ್ತಾ ದೇವಾಲಯ ಪ್ರವೇಶ ಮಾಡಿದ್ದಕ್ಕೆ ಕುಷ್ಟಗಿ ತಾಲೂಕಿನ ಮೀಯಾಪೂರ ಗ್ರಾಮದ ಗ್ರಾಮಸ್ಥರು ಎಲ್ಲರೂ ಸೇರಿ ಆ ದಲಿತ ಕಂದಮ್ಮನ ಕುಟುಂಬಕ್ಕೆ ದೇವಸ್ಥಾನ ಶುದ್ದಿ ಮಾಡಲಿಕ್ಕೆ 25000 ಸಾವಿರ ದಂಡದ ಜೊತೆಗೆ ಗ್ರಾಮದಿಂದ ಬಹಿಸ್ಕಾರದಂತ ಘನಘೋರ ಕೃತ್ಯವನ್ನು ಎಸಗಿದ್ದಾರೆ,ಇದಲ್ಲದೇ ಜಾತಿನಿಂದನೆಯನ್ನು ಮಾಡಿ ಆ ಗ್ರಾಮದ ಸರ್ವರ್ಣಿಯರು ಅಶ್ಪುಶ್ರತೆಯನ್ನು ಆಚರಣೆ ಮಾಡಿದವರ ವಿರುದ್ದ ಪ್ರಕರಣ ದಾಖಲೂ ಮಾಡುವಂತೆ ಕೋರಿ ಮಾನ್ಯ ಸಂಬಂದಪಟ್ಟ ಮುಖ್ಯಮಂತ್ರಿಗಳಿಗೆ ಮತ್ತು ಸಮಾಜಕಲ್ಯಾಣ ಸಚಿವರಿಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಮುಖಾಂತರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಮೂಲಕ ಮನವಿಯನ್ನು ಕೊಡಲಾಯಿತು..
ಈ ಸಂದರ್ಬದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಪೂಜಾರ, ಯುವ ಮುಖಂಡ ಸಿದ್ದು ಮಣ್ಣಿನವರ,ಗುರುಮೂರ್ತಿ ನೆರೆಗಲ್, ಮಹಿಳಾ ಹೋರಾಟಗಾರ್ತಿ ಶ್ರೀಮತಿ ಸುಜಾತ ಗೊರ್ಲೆಕೊಪ್ಪ,ಮಂಜುನಾಥ ಕುಕನೂರ,ನಾಗರಾಜ ಗೊರವರ್,ಪರಶುರಾಮ್ ಬೂದಿಹಾಳ,ಶ್ರೀಕಾಂತ ಕಡೇಮನಿ,ನೀಲಪ್ಪ ಮೆಳ್ಳಿಕೇರಿ,ಹನುಮೇಶ ಹಾಲವರ್ತಿ ಇನ್ನಿತರಿ ಸೇರಿದಂತೆ ಈ ಸಂದರ್ಬದಲ್ಲಿ ಇದ್ದರು

=1

follow me

Leave a Reply

Your email address will not be published.

error: Content is protected !!
×