ಎಂ ತಿರುಮಲ ಅಮಾನತ್ತು ಹಿಂಪಡೆಯಬೇಕು. ಜಿಲ್ಲೆಯಲ್ಲಿ ಹಿಂದಿನ ಅಧಿಕಾರಿಗಳ ಅಮಾನತ್ತುಗಳು ಪುನರ್ ಪರಿಶೀಲನೆಯಾಗಬೇಕು.

ವರದಿ: ಸುಂದರರಾಜ್ ಕಾರಟಗಿ

GBnewskannada :ಕನಕಗಿರಿಯ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎಂ. ತಿರುಮಲ ರವರ ಅಮಾನತ್ತಿನ ಆದೇಶ ಹಿಂಪಡೆಯಬೇಕೆಂದು ವಿವಿಧ ಸಂಘಟನೆಗಳು ಈಗಾಗಲೇ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರಿಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮುಂದುವರೆದು ಎಂ. ತಿರುಮಲ ಅವರ ಪರವಾಗಿ ಇದೀಗ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ಸಂಘ (ರಿ) ಇಂದು ಕೊಪ್ಪಳ ಜಿಲ್ಲಾ ಆಡಳಿತ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದೆ.  ಜಿಬಿ ನ್ಯೂಸ್ ಕನ್ನಡ ವಾಹಿನಿಜೊತೆ ಮಾತನಾಡಿದ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ಸಂಘ ರಾಜ್ಯ ಉಪಾಧ್ಯಕ್ಷರಾದ ಶರಣಪ್ಪ ಕೊತ್ವಾಲ್ ಎಂ.ತಿರುಮಲ ಅವರ ಆಡಳಿತಾತ್ಮಕ ಕಾರ್ಯನಿರ್ವಹಿಸುವುದರ ಬಗ್ಗೆ ಪೂರಕ ದಾಖಲೆಗಳಿದ್ದರೂ ಅವರ ವಿರುದ್ಧವಾಗಿ ಕೊಪ್ಪಳ ಜಿಲ್ಲಾ ಅಧಿಕಾರಿಗಳು ಅಮಾನತ್ತುಗಾಗಿ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಇವರಿಗೆ ಪ್ರಸ್ತಾವನೆಗಳನ್ನು ಸಲ್ಲಿಸಿರುವುದು ಖಂಡನೀಯವಾಗಿದೆ ಆಡಳಿತಾತ್ಮಕವಾಗಿ ಎಲ್ಲಾ ರೀತಿಯಲ್ಲೂ ಕಾರ್ಯನಿರ್ವಹಿಸುವುದರ ಬಗ್ಗೆ ಪೂರ್ವಕ ದಾಖಲೆಗಳಿದ್ದರೂ ಕೂಡ ಯಾವುದೇ ರೀತಿಯ ಸೂಚನೆ ನೀಡದೆ ನೋಟಿಸ್ ನೀಡದೆ ಏಕಾಏಕಿ ಜಿಲ್ಲೆಯ ಪ್ರಾಮಾಣಿಕ ಅಧಿಕಾರಿಗಳ ಅಮಾನತು ಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಿರುವುದರ ಹಿಂದೆ ರಾಜಕೀಯ ಪಿತೂರಿ ರಾಜಕೀಯ ಒತ್ತಡ ಅಡಗಿದೆ ಈ ರೀತಿಯಾಗಿ ಪ್ರಾಮಾಣಿಕ ಅಧಿಕಾರಿಗಳನ್ನು ಅಮಾನತುಗೊಳಿಸುವುದು ರಿಂದ ಸಾರ್ವಜನಿಕ ವಲಯದಲ್ಲಿ ಅಧಿಕಾರಿಗಳ ಮೇಲೆ ಹಾಗೂ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಪ್ರಾಮಾಣಿಕ ಅಧಿಕಾರಿಗಳ ಪರವಾಗಿ ಸಾರ್ವಜನಿಕರ ಪರವಾಗಿ ಹೋರಾಟವನ್ನು ಮಾಡುತ್ತದೆ ಕೂಡಲೇ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಎಂ ತಿರುಮಲ ರವರ ಅಮಾನತ್ತು ಗಾಗಿ ಸಲ್ಲಿಸಿದ ಪ್ರಸ್ತಾವನೆಗಳನ್ನು ಪುನರ್ ಪರಿಶೀಲನೆ ಮಾಡಿ ಕೂಡಲೇ ಅಮಾನತು ಆದೇಶವನ್ನು ರದ್ದುಪಡಿಸಿ ಎಂ.ತಿರುಮಲ ಅವರನ್ನು ಕನಕಗಿರಿ ಪಟ್ಟಣ ಪಂಚಾಯಿತಿಗೆ ಪುನರ್ ನಿಯೋಜನೆ ಗೊಳಿಸಬೇಕೆಂದುಒತ್ತಾಯಿಸುತ್ತೇವೆ. ಇಲ್ಲವಾದಲ್ಲಿ ಜಿಲ್ಲಾದ್ಯಂತ ಪ್ರಾಮಾಣಿಕ ಅಧಿಕಾರಿಗಳ ಪರವಾಗಿ ಹಾಗೂ ಈ ಹಿಂದೆ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿರುವಂತಹ ವಿವಿಧ ಅಧಿಕಾರಿಗಳ ಅಮಾನತುಗಳ ಎಲ್ಲಾ ಪ್ರಕರಣಗಳ ತನಿಖೆಗೆ ಒಳಪಡಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತವೆ ಎಂದು ಹೇಳಿದರು.

ತಾಜಾ ವಿಶ್ವಾಸನೀಯ ಸುದ್ದಿಗಳಿಗಾಗಿ ನಿತ್ಯ ಹೋದಿ ಮತ್ತುು ವೀಕ್ಷಿಸಿ GBnewskannada.com

=1

follow me

Leave a Reply

Your email address will not be published.

error: Content is protected !!
×