ಜಿಬಿ ನ್ಯೂಸ್ ಕನ್ನಡ ವಾಹಿನಿ ಫಲಶ್ರುತಿ : ಮಹಿಳಾ ಶೌಚಾಲಯ ದುರಸ್ತಿಗೆ ಕ್ರಮ ಕೈಗೊಂಡ ಪುರಸಭೆ ಮುಖ್ಯಾಧಿಕಾರಿ.

ವರದಿ :ಸುಂದರರಾಜ್ ಕಾರಟಗಿ

GBnewskannada :ದಿನಾಂಕ 16.9.2021 ರಂದು ಕಾರಟಗಿ ನಗರದ ವಾರ್ಡ್ ನಂಬರ್ 2ರಲ್ಲಿ ಸುಮಾರು 07ಲಕ್ಷ ರೂಪಾಯಿ ವೆಚ್ಚದಲ್ಲಿ 14 ನೇ ಹಣಕಾಸು ಯೋಜನೆಯಡಿ ನಿರ್ಮಿಸಿರುವ ಶೌಚಾಲಯದ ನಿರ್ವಹಣೆಯಲ್ಲಿ ವಿಫಲರಾಗಿರುವ ಕಾರಟಗಿ ಪುರಸಭೆ ಎಂದು ಜಿಬಿ ನ್ಯೂಸ್ ಕನ್ನಡ ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು .ಕಾರಟಗಿ ಪುರಸಭೆ ವಾರ್ಡ್ ನಂಬರ್ 02ರಲ್ಲಿ ನಗರಾಭಿವೃದ್ಧಿ ಕೋಶ ಯೋಜನೆಯ ಕಾರಟಗಿ ಪುರಸಭೆ ಕಚೇರಿಗೆ 201718 ನೇ ಸಾಲಿನ 14ನೇ ಹಣಕಾಸು ಅನುದಾನದಡಿ ನಿರ್ಮಾಣ ಮಾಡಿರುವ 07ಲಕ್ಷ ರೂಪಾಯಿ ವೆಚ್ಚದ ಶೌಚಾಲಯ ಯಾವುದೇ ಉಪಯೋಗವಿಲ್ಲದೆ ಮಹಿಳೆಯರಿಗೆ ಉಪಯೋಗವಿಲ್ಲದೆ ನಿರ್ಮಾಣಗೊಂಡರೂ ಹೆಸರಿಗೆ ಮಾತ್ರ ಅದು ಮಹಿಳಾ ಶೌಚಾಲಯ. ಸುಮಾರು 7 ಲಕ್ಷ ರೂಪಾಯಿಗಳು ಖರ್ಚು ಮಾಡಲಾಗಿದೆ ಎಂದು 14ನೇ ಹಣಕಾಸು ಅನುದಾನದಲ್ಲಿ 07ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಅದು ನಾಮಕೆವಾಸ್ತೆ. ಮಹಿಳೆಯರ ಅದೇ ಮಹಿಳಾ ಶೌಚಾಲಯ ದ ಪಕ್ಕದಲ್ಲಿರುವ ಸುಮಾರು 20 ವರ್ಷಗಳ ಹಳೆಯದಾದ ಶಿಥಿಲಾವಸ್ಥೆಯಲ್ಲಿರುವ ಶೌಚಾಲಯವನ್ನು ಅವಲಂಬಿಸಿದ್ದು ಮಹಿಳೆಯರು ಭಯದ ಭೀತಿಯಲ್ಲಿ ಶೌಚಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಅಲ್ಲಿನ ಮಹಿಳೆಯರು ಸಮಸ್ಯೆಯನ್ನು ಜಿಬಿ ನ್ಯೂಸ್ ಕನ್ನಡ ವಾಹಿನಿಗೆ ವಿವರಿಸಿದ್ದರು. ಜನಪ್ರತಿನಿಧಿಗಳಿಗೆ ಛೀಮಾರಿ ಹಾಕಿದ್ದರು. ಸುದ್ದಿ ಪ್ರಸಾರವಾಗುತ್ತಿದ್ದಂತೆ ವಾರ್ಡಿನ ಮಹಿಳೆಯರ ಸಮಸ್ಯೆಗೆ ಸ್ಪಂದಿಸಿದ  ಕಾರಟಗಿ ಪುರಸಭೆ ಆಡಳಿತ ಅಧಿಕಾರಿ ರೆಡ್ಡಿ ರಾಯನಗೌಡ  ಸ್ಥಳಕ್ಕೆ ಭೇಟಿಕೊಟ್ಟು ವಸ್ತುಸ್ಥಿತಿ ಅವಲೋಕನ ಮಾಡಿದರು  ಪುರಸಭೆ ಸಿಬ್ಬಂದಿ ಜೊತೆ ಸ್ಯಾನಿಟೇಷನ್ ಮಾಡಿಸಿದರು ಮೂಲೆಗುಂಪಾಗಿರುವ ಮಹಿಳಾ ಶೌಚಾಲಯವನ್ನು ನೀರಿನಿಂದ ಸ್ವಚ್ಛ ಮಾಡಿಸಿದ್ದಾರೆ. ಮುಳ್ಳುಪೊದೆಗಳನ್ನು ತೆರವುಗೊಳಿಸಿ ರಸ್ತೆಯನ್ನು ಸ್ವಚ್ಛಗೊಳಿಸಿದ್ದಾರೆ. ಜಿಬಿ ನ್ಯೂಸ್ ಕನ್ನಡ ವಾಹಿನಿಯೊಂದಿಗೆ ಮಾತನಾಡಿದ ಕಾರಟಗಿ ಪುರಸಭೆಯ ಮುಖ್ಯ ಅಧಿಕಾರಿಯ ರೆಡ್ಡಿ ರಾಯನಗೌಡ 2017 ಮತ್ತು 2018 ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಲ್ಲಿ ನಿರ್ಮಿಸಲಾಗಿರುವ ಎಲ್ಲಾ ಶೌಚಾಲಯಗಳ ಮುತುವರ್ಜಿ ವಹಿಸಲಾಗುತ್ತಿದೆ ಹಾಗೂ ನಿರ್ವಹಣೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದೇವೆ ವಾರ್ಡ್ ನಂಬರ್ 2 ರಲ್ಲಿ ಮಹಿಳಾ ಶೌಚಾಲಯ ನಿರ್ವಹಣೆಯಲ್ಲಿ ಆಗಿರುವ ಲೋಪದೋಷವನ್ನು ಸರಿಪಡಿಸಲಾಗುತ್ತದೆ. ಅದೇ ರೀತಿಯಾಗಿ ಶೌಚಾಲಯಕ್ಕೆ 7ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾಗಿದೆ ಜೊತೆಗೆ ಇದೆ ಅನುದಾನದ ಅಡಿಯಲ್ಲಿ ಶೌಚಾಲಯ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯಾಗಿದ್ದು ಶೌಚಾಲಯಕ್ಕೆ ನೀರಿನ ವ್ಯವಸ್ಥೆಗಾಗಿ ದುರಸ್ತಿ ಯಲ್ಲಿರುವ ಅಂತಹ ಬೋರ್ವೆಲ್ ನಿಂದ ಬೋರ್ವೆಲ್ ಸರಿಪಡಿಸಿ ನೀರಿನ ಸಂಪರ್ಕ ಕೊಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ ವಿದ್ಯುತ್ತು ಸಂಪರ್ಕಕ್ಕಾಗಿ ಈಗಾಗಲೇ ಅವರ ಗಮನಕ್ಕೆ ತಂದಿದ್ದೇವೆ ಕೂಡಲೇ ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

=0

follow me

Leave a Reply

Your email address will not be published.

error: Content is protected !!
×