ಕೂಲಿ ಕೆಲಸಕ್ಕೆ ಹೋಗಿದ್ದ ವ್ಯಕ್ತಿ ನದಿಯಲ್ಲಿ ಶವವಾಗಿ ಪತ್ತೆ

ಕಾರವಾರ :ಕೂಲಿ ಕೆಲಸಕ್ಕೆಂದು ಹೋಗಿದ್ದ ವ್ಯಕ್ತಿಯೋರ್ವ ಮನೆಯ ಹತ್ತಿರದಲ್ಲಿಯೇ ಇರುವ ವೆಂಕಟಾಪುರ ನದಿಯಲ್ಲಿ ಶವವಾಗಿ ಪತ್ತೆ ಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಾಪುರದಲ್ಲಿ ನಡೆದಿದೆ ಕೈಕಾಲು ತೊಳೆಯಲು ನೀರಿಗೆ ಇಳಿದಾಗ ಆಕಸ್ಮಿಕ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

https://www.facebook.com/113347752636340/posts/881449062492868/

https://www.facebook.com/113347752636340/posts/881449062492868/

ಮೃತನನ್ನು ವೆಂಕಟಾಪುರದ ವೆಂಕಟ್ರಮಣ ನಾಗಪ್ಪ ಗೊಂಡ ಎಂದು ಗುರುತಿಸಲಾಗಿದೆ. ಈತ ಮನೆಯಿಂದ ಗದ್ದೆ ಕೆಲಸಕ್ಕೆಂದು ಶನಿವಾರ ಬೆಳಿಗ್ಗೆ ಹೋಗಿದ್ದು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಮನೆಯವರು ಎಲ್ಲ ಕಡೆಗಳಲ್ಲಿಯೂ ಹುಡುಕಾಟ ನಡೆಸಿದ್ದರೂ ಸಹ ಈತನ ಸುಳಿವು ಪತ್ತೆಯಾಗಿಲ್ಲ.
ರವಿವಾರ ಸಂಜೆ 4 ಗಂಟೆಯ ಸುಮಾರಿಗೆ ವೆಂಕಟಾಪುರ ನದಿಯಲ್ಲಿ ಶವವೊಂದು ತೇಲುತ್ತಿರುವುದನ್ನು ಯಾರೋ ನೋಡಿ ತಿಳಿಸಿದ್ದು ಶವ ಈತನದ್ದೇ ಎಂದು ಖಚಿತಪಡಿಸಿಕೊಳ್ಳಲಾಗಿದೆ. ಶನಿವಾರ ಗದ್ದೆ ಕೆಲಸವನ್ನು ಮುಗಿಸಿ ಕೈಕಾಲು ತೊಳೆಯಲು ನದಿಗೆ ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದೆಂದು ಆತನ ಕುಟುಂಬಸ್ಥರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

=1

follow me

Leave a Reply

Your email address will not be published.

error: Content is protected !!
×