ಇದೆ 27 ರ ಭಾರತ್ ಬಂದ್ ಗೆ ಬೆಂಬಲಿಸುವಂತೆ ಕುರುಬೂರು ಶಾಂತಕುಮಾರ್ ಅವರಿಂದ ಜಮಖಂಡಿಯಲ್ಲಿ ಕರೆ

ಬಾಗಲಕೋಟೆ ಜಿಲ್ಲೆಯ ವರದಿ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ರಮಾ ನಿವಾಸ ಸರ್ಕ್ಯೂಟ್ ಹೌಸ್ ನಲ್ಲಿ ರಾಜ್ಯ ರೈತ ಸಂಘಟನೆ ಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅದ್ಯಕ್ಷ ರಾದ ಕುರಬೂರ ಶಾಂತಕುಮಾರ ರವರಿಂದ ಭಾರತ ಬಂದ ಬೆಂಬಲಿಸಿ ಇದೆ ತಿಂಗಳು 27 ರಂದು ಕರ್ನಾಟಕ ಬಂದ ಆಚರಣೆ ನಿಮಿತ್ಯವಾಗಿ ಸುದ್ದಿಗೋಷ್ಟಿ.ಕರೆಯಲಾಗಿತ್ತು.

ಸಂಯುಕ್ತ ಕಿಸಾನ್ ಮೋರ್ಚಾ,ಕರ್ನಾಟಕ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಕಬ್ಬು ಬೆಳೆಗಾರರ ಸಂಘ ಕರ್ನಾಟಕ.

ಭಾರತ ಬಂದ ಬೆಂಬಲಿಸಿ*ಸಪ್ಟೆಂಬರ್ 27 ರಂದು ಕರ್ನಾಟಕ ಬಂದಗೋಸ್ಕರ ಸುದ್ದಿ ಗೋಷ್ಟಿ ನಡೆಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರೂ.

ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಗದ ಅದ್ಯಕ್ಷ ರಾದ ಕುರಬೂರು ಶಾಂತ ಕುಮಾರ ಕಬ್ಬು ಬೆಳೆದ ರೈತ ಕಾರ್ಖಾನೆಗೆ ಸರಬುರಾಜ ಮಾಡಿದಾಗ ತೂಕದಲ್ಲಿ ಮೋಸಾ, ಸಕ್ಕರೆ ಇಳುವರಿ ಯಲ್ಲಿ ಮೋಸಾ ,ಕಬ್ಬಿನ ಹಣ ಕೊಡುವುದರಲ್ಲಿ ವಿಳಂಬ ರೀತಿ ಈ ರೀತಿಯ ಹಲವಾರು ಶೋಷಣೆ ಗಳು ನಡಿತಾಇದ್ದರೂ ಕೂಡಾ ಸರ್ಕಾರ ಗಳು ಬಿಗಿ ಕ್ರಮ ಕೈ ಗೊಳ್ಳದೆ ವಿಫಲ ರಾಗತಾ ಇದಾರೆ.ಕಾರಣ ಎನೆಂದರೆ ಕಾರ್ಖಾನೆ ಮಾಲಿಕರೇ ಮಂತ್ರಿಗಳು ಶಾಸಕರು ಆಗಿರುವುದರಿಂದ ಕಬ್ಬು ಬೆಳೆಗಾರರನ್ನು ಕುತಂತ್ರದ ಮೂಲಕ ವಾಮ ಮಾರ್ಗದಿಂದ ಹಾಯುವಂತಾ ಕೆಲಸ ಮಾಡತಾಇದಾರೆ ಇದು ಕಬ್ಬು ಬೆಳೆಗಾರರಿಗೆ ದೊಡ್ಡ ಸಂಕಷ್ಟ ಉಂಟು ಮಾಡತಾ ಇದೆ. ಸರ್ಕಾರ ಗಳು ರೈತರನ್ನು ರಕ್ಷಣೆ ಮಾಡತಿವಿ ಅಂತಾ ಹೇಳಿ ಅಸ್ವಾಸನೆ ಕೊಡತಾರೆ ಅಧಿಕಾರಕ್ಕೆ ಬಂದ ನಂತರ ರೈತರಿಗೆ ನ್ಯಾಯಯುತ ವಾದ ಬಲೆ ನಿಗದಿ ಮಾಡದೆ ಅನ್ಯಾಯ ಮಾಡುವಂತಾ ಕೆಲಸ ಮಾಡತಾಇದಾರೆ ಕಳೆದ ಎರಡು ವರ್ಷಗಳಿಂದ ಕಬ್ಬಿನ FRP ಬೆಲೆಯನ್ನು ಎರಿಕೆ ಮಾಡದೆ ಈಗ ಕ್ವಿಂಟಾಲಗೆ ಕೇವಲ ಐದು ರೂಪಾಯಿ ಎರಿಕೆ ಮಾಡಿ ರೈತರಿಗೆ ದ್ರೋಹ ಬಗೆದ ಸರ್ಕಾರ. ಟನ್ನಿಗೆ ಕೇವಲ 50 ರೂಪಾಯಿ ಎರಿಕೆ ಮಾಡಿದ್ದು ಸರಿಯಾದ ಕ್ರಮ ಅಲ್ಲಾ ತಕ್ಷಣವೇ ಕೇಂದ್ರ ಸರ್ಕಾರ ಪುನರ ಪರಿಸಿಲಿನೆ ಮಾಡಬೇಕು ಎಂದು ನಮ್ಮ ಒತ್ತಾಯ. ಈ ತಿಂಗಳು ಅಂತ್ಯದೊಳಗೆ ಪರಿಶೀಲನೆ ಮಾಡದಿದ್ದರೆ ಅಕ್ಟೋಬರ್ ಐದನೇ ತಾರಿಕು ಬೆಂಗಳೂರು ವಿಧಾನ ಸಭೆಗೆ ಮುತ್ತಿಗೆ ಹಾಕತಿವಿ ಅನ್ನುವ ಎಚ್ಚರಿಕೆ ಸರ್ಕಾರಕ್ಕೆ ಕೊಡತಾಇದಿವಿ. ಎಲ್ಲಾ ವಿಚಾರಗಳ ಬಗ್ಗೆ ಕಳೆದ 10 ತಿಂಗಳಿಂದ ದೇಶದ 500 ಕ್ಕೂ ಹೆಚ್ಚು ರೈತ ಸಂಘಟನೆಗಳು ಒಂದಾಗಿ ಸಂಯುಕ್ತ ಕಿಸಾನ ಮೋರ್ಚಾ ಹೆಸರಿನಲ್ಲಿ 10 ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಾ 600 ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದರು. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದ್ದರಿಂದ ದೇಶದ ಎಲ್ಲಾ ಸಂಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಲ್ಲಿ ಭಾರತ ಬಂದಗೆ ಕರೆ ನೀಡಿದ್ದಾರೆ ಅದನ್ನು ಬೆಂಬಲಿಸಿ ಕರ್ನಾಟಕದ ಎಲ್ಲಾ ರೈತ ಸಂಘಟನೆಗಳು ಜನಪರ ಸಂಘಟನೆಗಳು ವಿದ್ಯಾರ್ಥಿ ಸಂಘಟನೆಗಳು ಕಾರ್ಮಿಕ ಸಂಘಗಳು ಕರ್ನಾಟಕದ ಬಂದಗೆ ಬೆಂಬಲಿಸಿ ಸಹಕರಿಸಲು ಮನವಿ ಮಾಡುತ್ತಿದ್ದೆವೆ.

ಇವತ್ತು ಜಮಖಂಡಿಯ ನಗರದ ರಮಾ ನಿವಾಸ ಸರ್ಕಿಟ ಹೌಸ್ ನಲ್ಲಿ ಕಬ್ಬು ಬೆಳೆಗಾರರ ಸಭೆಯನ್ನು ಮಾಡಿ ಹೆಚ್ಚು ಸಂಖ್ಯೆಯಲ್ಲಿ ರೈತರು ಭಾಗ ವಹಿಸಬೇಕೆಂದು ಅಂತಾ ಮನವಿ ಮಾಡತಾ ಇದಿವಿ.

=1

follow me

Leave a Reply

Your email address will not be published.

error: Content is protected !!
×