ಪ್ರಾಮಾಣಿಕ ಮುಖ್ಯಾಧಿಕಾರಿ ಎಂ ತಿರುಮಲರವರ ಅಮಾನತ್ತು ಆದೇಶದ ವಿರುದ್ಧ ದಲಿತ ದಮನಿತರ ಒಕ್ಕೂಟ ಹೋರಾಟ

ವರದಿ:ಸಂದರರಾಜ್ ಕಾರಟಗಿ

GBnewskannada :ಕನಕಗಿರಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ತಿರುಮಲ ರವರ ಅಮಾನತ್ ಆದೇಶದ ವಿರುದ್ಧ ಜಿಲ್ಲಾದ್ಯಂತ ದಲಿತ ಪರ ಸಂಘಟನೆಗಳ ಹೋರಾಟದ ಮುನ್ಸೂಚನೆ ಕಾಣುತ್ತಿದೆ. ದಲಿತ ದಮನಿತರ ಒಕ್ಕೂಟ ಕನಕಗಿರಿ  ತಹಸೀಲ್ದಾರರ ಮೂಲಕ ಮಾನ್ಯ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರಗೆ ಮನವಿ ಸಲ್ಲಿಸಿದರು. ಪ್ರಾಮಾಣಿಕವಾಗಿ ಕರ್ತವ್ಯ ಮಾಡುತ್ತಿರುವ ಎಂ.ತಿರುಮಲ ಕನಕಗಿರಿ ಪಟ್ಟಣ ಪಂಚಾಯತಿಯಲ್ಲಿ ಸೇವೆ ಸಲ್ಲಿಸಿರುವ 19 ತಿಂಗಳುಗಳ ಕಾಲಾವಧಿಯಲ್ಲಿ ಉತ್ತಮ ರೀತಿಯ ಆಡಳಿತ ನಡೆಸಿದ್ದು ಯಾವುದೇ ರೀತಿಯ ಕರ್ತವ್ಯ ಲೋಪವನ್ನು ಮಾಡದೆ ಸಾರ್ವಜನಿಕರ ಮೆಚ್ಚುವಂತಹ ಆಡಳಿತ ನೀಡಿದ್ದಾರೆ ಎಂಬುವುದು ಸಾರ್ವಜನಿಕರ ವಾದ. ಎಂ ತಿರುಮಲ ಅವರ ವರ್ಗಾವಣೆ ಹಾಗೂ ಅಮಾನತು ಆಗುವ ಆಗುವುದರಲ್ಲಿ ರಾಜಕಾರಣಿಗಳ ಪಿತೂರಿ ಇದೆಯೆಂದು ಸ್ಪಷ್ಟವಾಗಿ ಕಾಣುತ್ತಿದೆ.ಅದೇ ರೀತಿಯಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು ಎಂ.ತಿರುಮಲ ರವರ ವಿರುದ್ಧ ಉದ್ದೇಶಪೂರ್ವಕವಾಗಿಯೇ ಜಿಲ್ಲಾಧಿಕಾರಿಗಳಿಗೆ ತಪ್ಪು ತಿಳುವಳಿಕೆ ಬರುವಂತೆ ಸೂಚಿಸಿದ್ದಾರೆಯೆ.? ಎಂದು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ ಸಂಘಟನಾಕಾರರು  ಯಾಕೆಂದರೆ ಜಿಲ್ಲಾಧಿಕಾರಿಗಳೇ ನೇರವಾಗಿ ಪ್ರಸ್ತಾವನೆಗಳನ್ನು ಸಲ್ಲಿಸಲು ಸಾಧ್ಯವಿಲ್ಲ ಯಾಕೆಂದರೆ ಕೆಲ  ಹಂತದಅಧಿಕಾರಿಗಳ ವಿರುದ್ಧ ಆರೋಪಗಳನ್ನು ಪ್ರಸ್ತಾವನೆಗಳನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸುವಾಗ ಸಂಬಂಧಿಸಿದಂತೆ ಇಲಾಖೆಯ ಮುಖ್ಯಸ್ಥರ ಅವಗಾಹನೆಗೆ ತರಬೇಕಾಗುತ್ತದೆ ತದನಂತರ ಮೇಲಾಧಿಕಾರಿಗಳಿಗೆ ದೂರಿನ ಪ್ರಸ್ತಾವನೆಗಳನ್ನು ಸಲ್ಲಿಸಲಾಗುತ್ತದೆ ಹಾಗಾದರೆ ಜಿಲ್ಲಾಧಿಕಾರಿಗಳು ಎಂ.ತಿರುಮಲ ರವರ ವಿರುದ್ಧ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಅವರಿಗೆ ಪ್ರಸ್ತಾವನೆಗಳು ಸಲ್ಲಿಸುವಾಗ ಯೋಜನಾ ನಿರ್ದೇಶಕರು ಕೊಪ್ಪಳ ಇವರ ಅವಾಗಹನೆಗೆಇದ್ದರೂ ಸುಮ್ಮನಿದ್ದಿದ್ದು ಯಾಕೆ ದಾಖಲೆಗಳ ಅನುಗುಣವಾಗಿ ಎಂ.ತಿರುಮಲ ರವರ ಕರ್ತವ್ಯಲೋಪ ಮಾಡಿಲ್ಲ ಎಂಬುದನ್ನು ಜಿಲ್ಲಾಧಿಕಾರಿಗಳ ಅವಗಾಹನೆಗೆ ತರಬಹುದಾಗಿತ್ತು ಆದರೂ ಯೋಜನಾ ನಿರ್ದೇಶಕರು ಮೌನವಹಿಸಿದ್ದು ಹಾಗೂ ಎಂ.ತಿರುಮಲ ರವರು ತಾತ್ಕಾಲಿಕ ರಜೆಯ ನಂತರ ರೀಜಾಯಿನಿಂಗ್ ಗಾಗಿ ಅರ್ಜಿ ಕೊಟ್ಟರು ಒಂದು ವಾರ ರೀಜಾಯಿನಿಂಗ್ಅನುಮತಿ ನೀಡದಿರುವುದು ಯಾಕೆ ಎಂಬುದು ಅನುಮಾನ ವ್ಯಕ್ತವಾಗುತ್ತಿದೆ ಎಂದು ದಲಿತ ದಮನಿತ ಒಕ್ಕೂಟದ ಪದಾಧಿಕಾರಿಗಳ ಅಕ್ರೋಶವಾಗಿದೆ. ಆದ್ದರಿಂದ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಇವರು ಕನಕಗಿರಿ ಶೌಚಾಲಯ ಕಾಮಗಾರಿಗಳನ್ನು ಮತ್ತು ಕಚೇರಿ ಕಡತಗಳನ್ನು ಅದೇ ರೀತಿಯಾಗಿ ಎಂ.ತಿರುಮಲ ಅವರ ಮೇಲಿನ ಅಮಾನತ್ತು ಆದೇಶವನ್ನು ಮರುಪರಿಶೀಲನೆ ಮಾಡಬೇಕು ಎಂದು ದಲಿತ-ದಮನಿತರ ವೇದಿಕೆ ಒಕ್ಕೂಟ ಕನಕಗಿರಿ ಆಗ್ರಹಿಸಿದೆ.

ವಿಶ್ವಾಸನೀಯ ಸುದ್ದಿಗಳಿಗಾಗಿ ನಿತ್ಯವೂಓದಿ ಮತ್ತು ವೀಕ್ಷಿಸಿGBnewskannada.com

=2

follow me

Leave a Reply

Your email address will not be published.

error: Content is protected !!
×