ಮಹಿಳಾ ಶೌಚಾಲಯ ನಿರ್ವಹಣೆಯಲ್ಲಿ ಕಾರಟಗಿ ಪುರಸಭೆ ಸಂಪೂರ್ಣ ವಿಫಲ, ಅಧಿಕಾರಿ ಜನಪ್ರತಿನಿಧಿಗಳ ವಿರುದ್ಧ ಮಹಿಳೆಯರ ಆಕ್ರೋಶ

ವರದಿ :ಸುಂದರರಾಜ್ ಕಾರಟಗಿ

GBnewskannada :ಕಾರಟಗಿ ಪುರಸಭೆ ವಾರ್ಡ್ ನಂಬರ್ ಎರಡರಲ್ಲಿ ನಗರಾಭಿವೃದ್ಧಿ ಕೋಶ ಯೋಜನೆಯಕಾರಟಗಿ ಪುರಸಭೆ ಲೆಕ್ಕ ಶೀರ್ಷಿಕೆ 2017.2018 ಸಾಲಿನ 14ನೇ ಹಣಕಾಸು ಅನುದಾನಧಡಿಯಲ್ಲಿ ನಿರ್ಮಾಣ ಮಾಡಿದ ಸುಮಾರು 07 ಲಕ್ಷ ರೂಪಾಯಿ ವೆಚ್ಚದ ಮಹಿಳಾ ಶೌಚಾಲಯ ಮೂಲೆಗುಂಪಾಗಿದೆ.ಗುತ್ತಿಗೆದಾರರಿಗೆ ಪುರಸಭೆ ಅಧಿಕಾರಿಗಳು ಈಗಾಗಲೇ ಬಿಲ್ ಪಾವತಿಸಿದ್ದಾರೆ. ಆದರೆ ಗುತ್ತಿಗೆದಾರರು ಈ ಶೌಚಾಲಯ ಕ್ಕೆ ವಿದ್ಯುತ್ ಸೌಲಭ್ಯ ನೀರಿನ ಸೌಲಭ್ಯ ಒದಗಿಸಿ ಇಲ್ಲ ಶೌಚಾಲಯಕ್ಕಾಗಿ ಬೋರ್ವೆಲ್ ಹಾಕಿಸಲಾಗಿದೆ ಆದರೆ ಬೋರ್ವೆಲ್ ನಲ್ಲಿ ನೀರು ಬರದೇ ಇರುವುದರಿಂದ ಅದನ್ನು ಹಾಗೆಯೇ ಬಿಡಲಾಗಿದೆ ಅಧಿಕಾರಿಗಳ ನಿರ್ಲಕ್ಷಕ್ಕೆ ಕಾರಣವಾಗಿದೆ , ನಿರ್ವಹಣೆ ಮಾಡುವಲ್ಲಿ ಕಾರಟಗಿ ಪುರಸಭೆ ವಿಫಲವಾಗಿದೆ. ಇದು ಹೆಸರಿಗೆ ಮಾತ್ರ 7 ಲಕ್ಷ ವೆಚ್ಚದ ಕಾಮಗಾರಿ ಆದರೆ ಇಲ್ಲಿ 7 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿ ನಡೆದಿದೆಯೋ ಇಲ್ಲವೋ ಎಂಬುದು ಮೇಲ್ನೋಟಕ್ಕೆ ಅನುಮಾನ ಮೂಡುವಂತಾಗಿದೆ ಈ ವಾರ್ಡಿನ ಮಹಿಳೆಯರು ಶೌಚಾಲಯಕ್ಕೆ ವಿದ್ಯುತ್ ಸೌಲಭ್ಯ ನೀರಿನ ಸೌಲಭ್ಯ ಇಲ್ಲದೆ ಕಾರಣದಿಂದಾಗಿ ಪ್ರತಿ ದಿನವೂ ಪಕ್ಕದಲ್ಲಿ ಇರುವಂತಹ ಸುಮಾರು ಇಪ್ಪತ್ತು ವರ್ಷ ಹಳೆಯದಾದ ಶೌಚಾಲಯ ಕಟ್ಟಡ ಬಳಸುತ್ತಿದ್ದು ಅದು ಬೀಳುವ ಸ್ಥಿತಿಯಲ್ಲಿದೆ ಈಗಾಗಲೇ ಅದು ಗೋಡೆಗಳು ಜಖಂಗೊಂಡಿವೆ ವಯಸ್ಸಾದ ವೃದ್ಧರಿಗೆ ಮಹಿಳೆಯರಿಗೂ ಚಿಕ್ಕಮಕ್ಕಳಿಗೂ ಆಧಾರವಾಗಿದ್ದು ಯಾವುದೇ ಸಮಯದಲ್ಲಾದರೂ ಶೌಚಾಲಯ ಗೋಡೆಗಳು ಕುಸಿಯುವ ಆತಂಕದಲ್ಲಿದ್ದಾರೆ ಮಹಿಳೆಯರ ಪ್ರಾಣ ಕೈಯಲ್ಲಿ ಹಿಡುಕೊಂಡು ಪ್ರತಿದಿನ ಶೌಚಕ್ಕೆ ಹೋಗುವ ಅನಿವಾರ್ಯತೆ ಇದೆ ಯಾವುದೇ ರಾಜಕಾರಣಿಗಳು ಜನಪ್ರತಿನಿಧಿಗಳು ಪುರಸಭೆ ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಜಿಬಿ ನ್ಯೂಸ್ ಕನ್ನಡ ವಾಹಿನಿಯೊಂದಿಗೆ ಮಾತನಾಡಿದ ದಲಿತ ಮುಖಂಡ ಜಮದಗ್ನಿ ಚೌಡಕಿ ಈಗಾಗಲೇ ನಾವು ಪುರಸಭೆ ಮುಖ್ಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದು ಕೂಡಲೇ ಮನವಿಗೆ ಸ್ಪಂದಿಸಿ ಇಲ್ಲಿರುವ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ ಮಹಿಳೆಯರು ಮತ್ತು ಪುರುಷರು ಓಣಿಯ ಎಲ್ಲಾ ಜನರು ಪುರಸಭೆ ಹತ್ತಿರ ಚಂಬಿಗೆ ಹಿಡಿಕೊಂಡು ಬಂದು ಧರಣಿ ಮಾಡಬೇಕಾಗುತ್ತದೆ ಏನಾದರೂ ಅನಾಹುತ ಗಳಾದರೆ ಕಾರಟಗಿ ಪುರಸಭೆ ಇಲಾಖೆಯವರೆ ನೇರ ಹೊಣೆಗಾರರಾಗಬೇಕಾಗುತ್ತದೆ ಹಾಗೂ ಮಲವನ್ನು ಆವರಣದಲ್ಲಿ ಎಸೆಯುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ವಾರ್ಡಿನಲ್ಲಿ ಗೆದ್ದ ಮೇಲೆ ಜನಪ್ರತಿನಿಧಿಗಳು ಯಾರು ಕೂಡ ಈ ಕಡೆ ಬಂದಿಲ್ಲ ಬಡವರಿಗೆ ಮನೆ ಹತ್ತಿರ ಶೌಚಾಲಯ ಕಟ್ಟಿಸಿಕೊಳ್ಳುಳುವಂತಹ ಸ್ಥಿತಿಯಲ್ಲಿಲ್ಲ ಹಾಗೂ ಮನೆಗಳ ಹತ್ತಿರ ಕಟ್ಟಿಸಿಕೊಳ್ಳಲು ಸ್ಥಳವು ಇಲ್ಲದ ಕಾರಣ ಎಲ್ಲರೂ ಈ ಶೌಚಾಲಯವನ್ನೇ ಅವಲಂಬಿಸಿದ್ದೇವೆ ಆದರೆ ಶೌಚಾಲಯ ನಿರ್ಮಾಣವಾದ ಮೇಲೆ ಪುರಸಭೆ ಅಧಿಕಾರಿಗಳು ಒಮ್ಮೆಯೂ ಈ ಕಡೆ ಬಂದಿಲ್ಲ ಈ ಕೂಡಲೇ ಓಣಿಯ ಮಹಿಳೆಯರಿಗೆ ಶೌಚಾಲಯದ ಸದುಪಯೋಗ ಕಲ್ಪಿಸಬೇಕೆಂದು ಒತ್ತಾಯಿಸಿದರು.

ವಿಶ್ವಾಸನೀಯ ಸುದ್ದಿಗಳಿಗಾಗಿ ನಿತ್ಯವೂ ಓದಿ ಮತ್ತು ವೀಕ್ಷಿಸಿರಿGBnewskannada.com

Leave a Reply

Your email address will not be published.

ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ
error: Content is protected !!