ಅಮಾನತ್ತುಆದೇಶ ಹಿಂಪಡೆಯಲು 09ಪುಟಗಳ ಪೂರಕ ದಾಖಲೆಗಳೊಂದಿಗೆ ಡಿಎಸ್ಎಸ್ ಹೋರಾಟ

ವರದಿ:ಸುಂದರರಾಜ್ ಕಾರಟಗಿ

GBnewskannada:ಕನಕಗಿರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ. ತಿರುಮಲ ರವರ ಮೇಲಿನ ಅಮಾನತ್ ಆದೇಶ ಹಿಂಪಡೆಯುವಂತೆ ದಲಿತ ಸಂಘರ್ಷ ಸಮಿತಿ ತಾಲೂಕ ಘಟಕದಿಂದ ಕಾರಟಗಿ ತಹಸೀಲ್ದಾರರ ಮೂಲಕ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯಬೆಂಗಳೂರು ಇವರಿಗೆ ಪತ್ರವನ್ನು ರವಾನಿಸಲಾಗಿದೆ. ಎಂ. ತಿರುಮಲ ಪರಿಶಿಷ್ಟಜಾತಿಯ ಪ್ರಾಮಾಣಿಕ ಮಹಿಳೆ ಅಧಿಕಾರಿ ಮೇಲಿರುವ ಆರೋಪಗಳು ಸುಳ್ಳು ಎಂಬುದು ಮೇಲ್ನೋಟಕ್ಕೆ  ಸ್ಪಷ್ಟವಾಗುತ್ತಿದ್ದು ಅದೇ ರೀತಿಯಾಗಿ ಜಿಲ್ಲಾಧಿಕಾರಿಗಳು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರಿಗೆ ಸಲ್ಲಿಸಿದ ಪ್ರಸ್ತಾವನೆಗಳು ಸ್ಪಷ್ಟನೆ ಇಲ್ಲದಿರುವುದರಿಂದ ಈ ಕೂಡಲೇ ದಾಖಲೆಗಳನ್ನು ಪರಿಶೀಲಿಸಿ ಕನಕಗಿರಿ ಪಟ್ಟಣ ಪಂಚಾಯಿತಿಗೆ ಭೇಟಿ ಕೊಟ್ಟು ಆಗಿರುವ ಕಾಮಗಾರಿಗಳ ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ. ಕೇವಲ ಜಿಲ್ಲಾಧಿಕಾರಿಗಳ ಪ್ರಸ್ತಾವನೆಗಳ ಆಧಾರದ ಮೇಲೆ ಎಂ ತಿರುಮಲ ಇವರನ್ನು ಅಮಾನತುಗೊಳಿಸಿದ್ದು ವಿಪರ್ಯಾಸವಾಗಿದೆ, ಎಂ.ತಿರುಮಲ ಇವರು ಕರ್ತವ್ಯಲೋಪ ಹಾಗೂ ಸರ್ಕಾರದ ಆದೇಶಗಳನ್ನು ಉಲ್ಲಂಘನೆ ಮಾಡಿಲ್ಲ ಎಂಬುದಕ್ಕೆ ಪೂರಕ ದಾಖಲೆಗಳೊಂದಿಗೆ ಮಾನ್ಯ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಇವರಿಗೆ ಅರ್ಜಿ ಸಲ್ಲಿಸಿದ್ದಾರೆ. ಜಿಬಿ ನ್ಯೂಸ್ ಕನ್ನಡ ವಾಹಿನಿಯೊಂದಿಗೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಕಾರಟಗಿ ತಾಲೂಕು ಅಧ್ಯಕ್ಷ ಜಮದಗ್ನಿ ಚೌಡಕಿ ರವರು ಈ ಕೂಡಲೇ ಪೌರಾಡಳಿತ ನಿರ್ದೇಶನಾಲಯ ಇವರು ಕ್ರಮ ಕೈಗೊಳ್ಳಬೇಕು ಮಹಿಳಾಅಧಿಕಾರಿಗೆ ಉದ್ದೇಶಪೂರಕವಾಗಿ ಪೂರ್ವನಿಯೋಜಿತವಾಗಿ ಅಧಿಕಾರಿಗಳಿಗೆ ದಾರಿತಪ್ಪಿಸು ಮೂಲಕ ಕೆಲವು ರಾಜಕೀಯ ಹಿತಾಸಕ್ತಿಗಳು ಮೊದಲಿಗೆ ಎಂ ತಿರುಮಲ ಅವರನ್ನು ವರ್ಗಾವಣೆಗೊಳಿಸಿದ್ದಾರೆ ವರ್ಗಾವಣೆ ನಂತರ ಧಾರವಾಡ ಹೈಕೋರ್ಟ್ ನಲ್ಲಿ ಸ್ಟೇ ತಂದು ಕರ್ತವ್ಯದಲ್ಲಿ ತೊಡಗಿದ ಮಹಿಳಾ ಅಧಿಕಾರಿಯ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅಮಾನತ್ ಗೊಳಿಸುವುದರ ಮೂಲಕ ಜಿಲ್ಲೆಯ ಮಹಿಳಾ ಅಧಿಕಾರಿಗಳ ಕರ್ತವ್ಯನಿಷ್ಠೆ ಆತ್ಮಸ್ಥೈರ್ಯ ಕುಗ್ಗಿಸುವಂತಹ ಕೆಲಸವನ್ನು ಮಾಡಿದ್ದು ಇದನ್ನು ದಲಿತ ಸಂಘರ್ಷ ಸಮಿತಿಯವರು ಖಂಡಿಸುತ್ತೇವೆ, ಎಂ.ತಿರುಮಲ ಮೇಲಿರುವ ಎಲ್ಲಾ ಆರೋಪಗಳು ಸುಳ್ಳು ಕೂಡಲೇ ಅವರ ಮೇಲಿನ ಆರೋಪಗಳನ್ನು ಪರಿಶೀಲನೆ ಮಾಡಿ ಕೂಡಲೇ ಅವರ ಮೇಲಿರುವ ಅಮಾನತು ಹಿಂಪಡೆಯಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ದಲಿತ ಸಂಘರ್ಷ ಸಮಿತಿವತಿಯಿಂದ ಕಾನೂನಾತ್ಮಕ ಹೋರಾಟ ಮಾಡಬೇಕಾಗುತ್ತದೆ ಎಂದರು.

=1

follow me

Leave a Reply

Your email address will not be published.

error: Content is protected !!
×