ಕಂಪ್ಲೇಂಟ್ ಕೊಟ್ಟು ತಿರುಮಲಮ್ಮ ನನ್ನು ಸಸ್ಪೆಂಡ್ ಮಾಡಿಸಿದ್ದು ನಾವೇ ಎನ್ನುತ್ತಿರುವ ಕನಕಗಿರಿ ಭಾ.ಜ.ಪ. ಮುಖಂಡ; ಇದು ಆರೋಪ ಅಲ್ಲ ಷಡ್ಯಂತ್ರ?.

ವರದಿ :ಸುಂದರರಾಜ್ ಕಾರಟಗಿ

gbnewskannada:ಹಲವು ವರ್ಷಗಳಿಂದ ಜಿಬಿ ನ್ಯೂಸ್ ಕನ್ನಡ ವಾಹಿನಿ ಸತ್ಯಶೋಧನೆ ಮಾಡುವ ಮೂಲಕ ಪ್ರಕರಣ ಯಾವುದೇ ಆಗಿರಲಿ ವಾಸ್ತವಿಕ ಅಂಶಗಳನ್ನು ಜನಗಳ ಮುಂದೆ ಇಡುತ್ತಾ ಬರುತ್ತಿದೆ. ಅದು ದಾಖಲೆಗಳ ಮೂಲಕ. ಜನಪರ ಕಾಳಜಿ ತೋರಿಸುತ್ತಿದೆ. ಇತ್ತೀಚಿಗೆ ಕಾರಟಗಿಯ ಮುಖ್ಯಾಧಿಕಾರಿ ತಿರುಮಲಮ್ಮ ಅಮಾನತು  ವಿಷಯಕ್ಕೆ ಬಂದರೆ ಅಮಾನತುಗೊಂಡಿರುವ ಕನಕಗಿರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ. ಎಂ.ತಿರುಮಲ ಇವರು ರಾಜಕಾರಣಿಗಳ ಸುಳಿಯೊಳಗೆ ಸಿಲುಕಿ ಅಮಾನತ್ ಆಗಿದ್ದಾರೆ.ರಾಜಕಾರಣಿಗಳು ಪ್ರಭಾವ ಬಳಸಿ ಅಮಾನತುಗೊಳಿಸಿದ್ದಾರೆ. ಕಾರ್ಯಕರ್ತರ ಮುಖಂಡರ ಮಾತು ಕೇಳುತ್ತಿಲ್ಲ ವೆಂದು ಕಾಮಗಾರಿಗಳ ವಿಚಾರದಲ್ಲಿ ರಾಜಿ ಆಗುತ್ತಿಲ್ಲವೆಂದು ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡಿಸುತ್ತಾರೆ.ಆದರೆ ಮಹಿಳಾ ಅಧಿಕಾರಿ ಧಾರವಾಡ ಹೈಕೋರ್ಟ್ ನಲ್ಲಿ ಸ್ಟೇ ತಂದು ಡ್ಯೂಟಿಗೆ ಜಾಯಿನ್ ಆಗ್ತಾರೆ .
ಇದು ಕಾರ್ಯಕರ್ತರ ಮುಖಂಡರ ರಾಜಕಾರಣಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿ ಹೇಗಾದರೂ ಮಾಡಿ ಕನಕಗಿರಿಯಿಂದ ಅವರನ್ನುಕಾಲ್ಕಿತ್ತಿಸಬೇಕೆಂದುಪೂರ್ವಗ್ರಹಪೀಡಿತರಾಗಿ ಇಲ್ಲಸಲ್ಲದ ಆರೋಪ ಹೊರಿಸಿ ಅಮಾನತುಗೊಳಿಸಿದ್ದಾರೆ. ಅವಶ್ಯಕತೆ ಇಲ್ಲದಿದ್ದರೂ ತಾತ್ಕಾಲಿಕ ರಜೆ ಕೊಡಿಸಿದ್ದಾರೆ. ಡ್ಯೂಟಿಗೆ ಜಾಯಿನ್ ಆಗಲು ಅರ್ಜಿ ಕೊಟ್ಟರೆ ಸುಮಾರು ಒಂದು ವಾರ ಅಲೆದಾಡಿಸಿ.ಅಮಾನತು ಆದೇಶ ಪಕ್ಕ ಆದಮೇಲೆ ರೀಜಾಯಿನ್ ಕೊಡಿಸಿದ್ದಾರೆ ಡ್ಯೂಟಿಯಲ್ಲಿ ಜಾಯಿನ್ ಆದ 2ಗಂಟೆಯಲ್ಲಿ ಅಮಾನತ್ ಆದೇಶ ಬಂದಿದೆ.ಪ್ರಾಮಾಣಿಕವಾಗಿ ಕೆಲಸ ಮಾಡುವ ಪರಿಶಿಷ್ಟ ಜಾತಿಯ ಮಹಿಳಾ ಅಧಿಕಾರಿಯನ್ನು ಅಮಾನತುಗೊಳಿಸಿ ಹಬ್ಬ ಮಾಡಿಕೊಂಡ ಭಾರತೀಯ ಜನತಾ ಪಕ್ಷದ ಬೆಂಬಲಿಗ ತಿರುಮಲಮ್ಮ ನನ್ನು ನಾವೇ  ದೂರು ಕೊಟ್ಟು ಸಸ್ಪೆಂಡ್ ಮಾಡಿಸಿದ್ದೇವೆ. ಎಂದು ನಿರ್ಭಯವಾಗಿ ಸಾಧನೆ ಮಾಡಿದವರಂತೆ ಹೇಳಿಕೊಳ್ಳುತ್ತಿದ್ದಾರೆ. ಅದು ಸಾಧನೆ ಅಲ್ಲ ಷಡ್ಯಂತರ ಎಂಬುದು ಈಗ ಬಹಿರಂಗ.

ತಾಜಾ ಹಾಗೂ ವಿಶ್ವಸನೀಯ ಸುದ್ದಿಗಳಿಗಾಗಿ ನಿತ್ಯಯ ಓದಿ ಹಾಗೂ ವೀಕ್ಷಿಸಿರಿGBnewskannada.com

=1

follow me

Leave a Reply

Your email address will not be published.

error: Content is protected !!
×