ಮುಖ್ಯಾಧಿಕಾರಿ ಎಂ.ತಿರುಮಲ ಅಮಾನತು ಪ್ರಕರಣ; ಪಾಪದ ಕೈಗಳ ಷಡ್ಯಂತ್ರ ಅಡಗಿದೆಯೇ?.

ವರದಿ : ಸುಂದರರಾಜ್ ಕಾರಟಗಿ

ಮೊದಲಿಗೆ ವರ್ಗಾವಣೆ, ನಂತರ ಸ್ಟೇ ತಂದರು ರೀಜಾಯಿನ್ ಆರ್ಡರ್ ಗಾಗಿ ಅಲೆದಾಟ……

ಕರ್ತವ್ಯಕ್ಕೆ ಸೇರಿದ 02 ಗಂಟೆಯಲ್ಲೆ ಅಮಾನತು ಆದೇಶ ರವಾನೆ,

 

GBnewskannada :ಕನಕಗಿರಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎಂ ತಿರುಮಲ ಅಮಾನತ್ತು ಹಲವು ಅನುಮಾನಗಳ ಆದೇಶ ಎಂದುGB ನ್ಯೂಸ್ ಕನ್ನಡ ವಾಹಿನಿಯಲ್ಲಿ ಸುದ್ದಿ ಮಾಡಿತ್ತು ಅದೇ ರೀತಿಯಾಗಿ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರು ಬೆಂಗಳೂರು ಹೊರಡಿಸಿದ ಅಮಾನತ್ತು ಆದೇಶದ ನಡಾವಳಿಗಳ ಸತ್ಯ ಶೋಧನೆಗೆ ಮುಂದಾದ ಜಿಬಿ ನ್ಯೂಸ್ ಕನ್ನಡ ವಾಹಿನಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ ತಿರುಮಲ ಅವರ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಕೆಲವು ಮುಖ್ಯ ದಾಖಲೆಗಳು ಜಿಬಿ ನ್ಯೂಸ್ ಕನ್ನಡ ವಾಹಿನಿಯ ಲಭ್ಯವಾಗಿದ್ದು ಅವುಗಳನ್ನು ದಾಖಲೆಗಳ ಸಮೇತ ಜನಗಳ ಮುಂದಿಡುತ್ತಿದ್ದೇವೆ. ಇದು ಪ್ರಜಾಪ್ರಭುತ್ವ ವಾಗಿದ್ದು ಪ್ರಜಾಪ್ರಭುತ್ವದ ತತ್ವ ಸಿದ್ಧಾಂತದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅದರಂತೆ ಅಲ್ಲಿ ನಡೆಯುವ ಆಗುಹೋಗುಗಳು ಪ್ರತಿಯೊಂದನ್ನು ಸಾರ್ವಜನಿಕರಿಗೆ ತಿಳಿಯಬೇಕಾಗುತ್ತದೆ.

ಆರೋಪ:ಮಾನ್ಯ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರು ಹೊರಡಿಸಿದ ಅಮಾನತ್ತಿನ ಆದೇಶದ ಪ್ರಸ್ತಾವನೆಯಲ್ಲಿ ಸರ್ವೆ ನಂಬರ್ 157/8/7 ರಲ್ಲಿ 1.25 ಗುಂಟೆ ಪ್ರದೇಶದಲ್ಲಿ ಯೋಜನಾ ಪ್ರಾಧಿಕಾರದ ಅನುಮತಿ ಪಡೆಯದೆ 02 ಮನೆಗಳ ಕಟ್ಟಡ ನಿರ್ಮಾಣಕ್ಕೆ ಫಾರಂ ನಂಬರ್ 03 ನೀಡಿದ್ದಾರೆ ಸರ್ಕಾರದ ಸುತ್ತೋಲೆ ಉಲ್ಲಂಘಿಸಿದ್ದಾರೆ ಎಂದು ತೀರ್ಮಾನಿಸಿ ಆದೇಶ ಹೊರಡಿಸಿರುತ್ತಾರೆ

GB ನ್ಯೂಸ್ ಕನ್ನಡ ಸತ್ಯಶೋಧನೆ: ಆದರೆ ಮಾನ್ಯ ಜಿಲ್ಲಾಧಿಕಾರಿಗಳು ಅಧಿಕೃತ ಜ್ಞಾಪನ ಪತ್ರದಲ್ಲಿ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಕೊಪ್ಪಳ, ಗಂಗಾವತಿ, ಕುಷ್ಟಗಿ, ಕಾರಟಗಿ ,ಯಲಬುರ್ಗಾ, ಕುಕನೂರು ,ಕನಕಗಿರಿ, ಭಾಗ್ಯನಗರ, ಪುರಸಭೆ, ಪಟ್ಟಣ ಪಂಚಾಯಿತಿ ಗಳನ್ನೊಳಗೊಂಡ ಮುಖ್ಯ ಅಧಿಕಾರಿಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು 11.8.2021ರ ಅಧಿಕೃತ ಜ್ಞಾಪನ ಪತ್ರದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಬಡಾವಣೆಗಳಿಗೆ ಫಾರ್ಮ್ ನಂಬರ್ 03 ನೀಡಿರುವುದು ವಿಷಾಧನೀಯ ಕೆಲವು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳಿಗೆ ಫಾರಂ ನಂಬರ್03 ನೀಡಿರುವುದು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದ್ದು ಇನ್ನು ಮುಂದೆ ಈ ರೀತಿಯಾಗಿ ಫಾರಂ ನಂಬರ್ ನೀಡಬಾರದೆಂದು ಕಟ್ಟುನಿಟ್ಟಾಗಿ ಸೂಚಿಸಿದ ಜಿಲ್ಲಾಧಿಕಾರಿಗಳು ಅಂದರೆ 26.08 2021 ರಂದು ಪೌರಾಡಳಿತ ನಿರ್ದೇಶಕರು ನಿರ್ದೇಶನಾಲಯ ನಿರ್ದೇಶಕರಿಗೆ ಎಂ. ತಿರುಮಲ ಇವರ ಅಮಾನತುಗೊಳಿಸಲು ಪ್ರಸ್ತಾವನೆ ಸಲ್ಲಿಸಿದ್ದಾದರು ಯಾಕೆ…..? ಮಾನ್ಯ ಜಿಲ್ಲಾಧಿಕಾರಿಗಳವರ ಅಧಿಕೃತ ಜ್ಞಾಪನ ಪತ್ರದಲ್ಲಿ ತಿಳಿಸಿರುವಂತೆ ಸರ್ಕಾರದ ಸುತ್ತೋಲೆ ಉಲ್ಲಂಘಿಸಿದ ಇನ್ನುಳಿದ ಕೆಲವು ಸಂಸ್ಥೆಗಳ ಅಧಿಕಾರಿಗಳ ವಿರುದ್ಧ ಅಮಾನತ್ತು ಗಾಗಿ ಪ್ರಸ್ತಾವನೆಸಲ್ಲಿಸಿದ್ದಾರೆಯೆ…..? ಇಲ್ಲವೋ…..? ಕೇವಲ ಎಂ ತಿರುಮಲ ಇವರ ಅಮಾನತು ಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆಯೆ…..?ಎನ್ನುವ ಅನುಮಾನ ಸಹಜವಾಗಿ ಮೂಡುವಂತಾಗಿದೆ. ಅನಧಿಕೃತ ಬಡಾವಣೆಗಳಿಗೆ ಫಾರಂ ನಂಬರ್ 03 ನೀಡಿ ಸರ್ಕಾರದ ಸುತ್ತೋಲೆ ಉಲ್ಲಂಘನೆ ಮಾಡಿದ ಎಲ್ಲರ ಮೇಲೂ ಮಾನ್ಯ ಜಿಲ್ಲಾಧಿಕಾರಿಗಳು ಮಾನ್ಯ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಇವರಿಗೆ ಪ್ರಸ್ತಾವನೆ ಸಲ್ಲಿಸಬಹುದಾಗಿತ್ತಲ್ಲವೇ.? ಈ ಅಧಿಕೃತ ಜ್ಞಾಪನ ಪತ್ರದ ವಿವರಣೆ ಮಾನ್ಯ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಇವರಿಗೆ ಉಲ್ಲೇಖಿಸಿದ ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸ ಬಹುದಾಗಿತ್ತಲ್ಲವೆ…..?

ಆರೋಪ:  ಕನಕಗಿರಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾರ್ಡ್ ನಂಬರ್ 07 ವಾರ್ಡ್ ನಂಬರ್ 8ರಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 2016 -17 ಹಾಗೂ 2017 -18ನೇ ಸಾಲಿನಲ್ಲಿ ಎಸ್.ಸಿ.ಪಿ.ಟಿ.ಎಸ್.ಪಿ ಅನುದಾನದಡಿ ಕೆ.ಆರ್.ಡಿ. ಎಲ್. ಸಂಸ್ಥೆ ಕೊಪ್ಪಳ ಇವರ ಮೂಲಕ ಸಮುದಾಯ ಶೌಚಾಲಯ ಹಾಗೂ ಸ್ನಾನಗೃಹ ಸಂಕಿರಣಗಳನ್ನು ಅಂದಾಜು 60 ಲಕ್ಷ ಅನುದಾನ ಕಾಮಗಾರಿ ಪ್ರಗತಿಯಲ್ಲಿದ್ದು ಜಿಲ್ಲಾ ಪಂಚಾಯಿತಿ ಅವರು ವರದಿ ಸಲ್ಲಿಸಿರುತ್ತಾರೆ ಸದರಿ ತನಿಖಾ ತಂಡ ಪರಿಶೀಲನೆ ವರದಿಯಂತೆ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೆ. ಆರ್. ಡಿ.ಎಲ್. ಸಂಸ್ಥೆಗೆ ಹಸ್ತಾಂತರ ಪತ್ರಕ್ಕೆ ಸಹಿ ಮಾಡಿ ಕರ್ತವ್ಯಲೋಪ ಎಸಗಿದ್ದಾರೆ ಎಂದು, ಮಾನ್ಯ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರ ಅಮಾನತು ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.

GBನ್ಯೂಸ್ ಸತ್ಯಶೋಧನೆ: ಆದರೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಕೊಪ್ಪಳ 2020 21ರ ನೋಟಿಸ್ ಗೆ ಮಾನ್ಯ ಕಾರ್ಯಪಾಲಕ ಅಭಿಯಂತರರು ಕೆಆರ್ ಡಿಎಲ್ ಕೊಪ್ಪಳ ರವರು ಸ್ನಾನಗೃಹ ಸಂಕೀರ್ಣ ಪೂರ್ಣಗೊಳಿಸಲಾಗಿರುತ್ತದೆ ಕಾಮಗಾರಿಗಳು ನಿರ್ವಹಿಸುವಾಗ ಯಾವುದೇ ಕರ್ತವ್ಯಲೋಪ ವಾಗಿರುವುದಿಲ್ಲ ಎಂದು ಛಾಯಾಚಿತ್ರ ಪ್ರತಿಗಳ ಜೊತೆಗೆ ದಿನಾಂಕ 23.2.2021 ರಂದು ಸ್ಪಷ್ಟವಾಗಿ ಬರವಣಿಗೆಯಲ್ಲಿ ನೀಡಿರುತ್ತಾರೆ.
ಆದರೆ ಮಾನ್ಯ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಇವರ ಅಮಾನತು ಆದೇಶದಲ್ಲಿ ಪ್ರಸ್ತಾಪಿಸಿರುವಂತೆ ಜಿಲ್ಲಾ ಪಂಚಾಯತಿ ತನಿಖಾತಂಡದ ವರದಿಯಂತೆ ಪ್ರಗತಿ ಅಂತದ ಕಟ್ಟಡಗಳೆಂದು ಪ್ರಸ್ತಾಪಿಸಿದ್ದಾರೆ. ಆದರೆ ಕೆ.ಆರ್.ಡಿ.ಎಲ್ ರವರು ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಬರವಣಿಗೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ ಜಿಲ್ಲಾ ಪಂಚಾಯತಿ ತನಿಖಾತಂಡದ ಅವರು ವರದಿ ಸಲ್ಲಿಸಿದ ಪ್ರಗತಿ ಹಂತದ ಕಟ್ಟಡಗಳು ಮೇಲ್ನೋಟಕ್ಕೆ ಭಾಗಶಃ ಕಾಮಗಾರಿ ಪೂರ್ಣಗೊಂಡಿದ್ದು ಕಂಡುಬರುತ್ತಿದೆ ಅದರ ಒಳ ಹಾಗೂ ಹೊರಗಿನ ಛಾಯಾಚಿತ್ರಗಳನ್ನು ಇಲ್ಲಿ ನಾವು ಕಾಣಬಹುದಾಗಿದೆ.

ಆರೋಪ : ಕನಕಗಿರಿ ಪಟ್ಟಣ ಪಂಚಾಯಿತಿ ಶೇ 24.10(ಎಸ್.ಸಿ.ಪಿ.ಟಿ.ಎಸ್.ಪಿ) ಯೋಜನೆಯಡಿಯಲ್ಲಿ ಪ್ರಗತಿ ಸಾಧಿಸುವಂತೆ ಹಾಗೂ ಸದರಿ ಯೋಜನೆ ಅಡಿಯಲ್ಲಿ ಅನುದಾನವನ್ನು ಬಳಕೆ ಮಾಡಿಕೊಂಡು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದರು 2021ರ ಪ್ರಗತಿ ವರದಿಯನ್ನು ಪರಿಶೀಲಿಸಿದಾಗ ಅನುದಾನ ಸಂಪೂರ್ಣವಾಗಿ ಬಳಕೆ ಮಾಡದೆ ಶೇಕಡ 49.71 ಮಾತ್ರ ಪ್ರಗತಿ ಸಾಧಿಸಿರುವುದು 2021 22ನೇ ಸಾಲಿಗಾಗಿ ಎಸ್.ಎಫ್. ಸಿ.ಮುಕ್ತನಿಧಿ ಅನುದಾನದ ಆಯವ್ಯಯದಲ್ಲಿ ಕನಕಗಿರಿ ಪಟ್ಟಣ ಪಂಚಾಯಿತಿಗೆ ರೂ 56 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಬಿಡುಗಡೆಯಾದ ಅನುದಾನಕ್ಕೆ ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಲಾಗಿರುತ್ತದೆ. ಆದರೆ ಮುಖ್ಯಾಧಿಕಾರಿಗಳು ಈವರೆಗೆ ಕ್ರಿಯಾ ಯೋಜನೆಯನ್ನು ಸಲ್ಲಿಸದೆ ಕರ್ತವ್ಯ ನಿರ್ಲಕ್ಷತನ ತೋರಿದ್ದಾರೆ ಎಂದು ಮಾನ್ಯ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರು ಹೊರಡಿಸಿದ ಅಮಾನತು ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.

GB ನ್ಯೂಸ್ ಸತ್ಯಶೋಧನೆ : ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯ ತಿರುಮಲ ಇವರು ಕನಕಗಿರಿ ಪಟ್ಟಣ ಪಂಚಾಯಿತಿಗೆ 2021 22 ನೇ ಸಾಲಿನ ಶೇಕಡ 24 .10 ರಲ್ಲಿ ಎಸ್.ಸಿ.ಪಿ.ನ ಮೊತ್ತ ರೂ17.00 ಹಾಗೂ ಟಿ.ಎಸ್.ಪಿ.ನ ಮೊತ್ತ ರೂ.6.00 ಒಟ್ಟು ಮೊತ್ತ ರೂ23.00 ಲಕ್ಷಗಳ ಅನುದಾನಕ್ಕೆ ಮತ್ತು ಶೇಕಡಾ7.25 ಮೊತ್ತರೂ4.06 ಮತ್ತು ಶೇ 5 ಮೊತ್ತರೂ2.80 ದಿನಾಂಕ 12.7.2021 ಜರುಗಿದ ಸಾಮಾನ್ಯ ಸಭೆಯಲ್ಲಿ ಕ್ರಿಯಾಯೋಜನೆ ಮಂಡಿಸಿ ಅಂಗೀಕರಿಸಲಾಗಿದೆ ಎಂದು ಸರ್ಕಾರದ ಆದೇಶ ಪ್ರತಿ ಮತ್ತು ಠರಾವು ಪ್ರತಿ ಮತ್ತು ಕ್ರಿಯಾಯೋಜನೆಯ ಪ್ರತಿಗಳನ್ನು ಲಗತ್ತಿಸಿ ಪಟ್ಟಣ ಪಂಚಾಯತಿ ಕನಕಗಿರಿ ಮುಖ್ಯ ಅಧಿಕಾರಿ ಎಂ.ತಿರುಮಲ ಅವರು ಸದರಿ ಕ್ರಿಯಾಯೋಜನೆಗೆ ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ಅನುಮೋದನೆಗಾಗಿ ದಿನಾಂಕ 13.07 .2021ರಂದು ಸಲ್ಲಿಸಿರುವುದು ಸತ್ಯಶೋಧನೆಯಲ್ಲಿ ದಾಖಲೆ ಸಮೇತ ಕಂಡುಬಂದಿದೆ. ಪಟ್ಟಣ ಪಂಚಾಯಿತಿ ಅನುದಾನ ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಲು ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದಾರೆಯೇ…..? ಇಲ್ಲವೋ…..? ಎಂಬುದು ನಮ್ಮ ಮುಂದಿರುವ ಪ್ರಶ್ನೆ.
ವಾರ್ಡ್ ನಂಬರ್ 07 ಮತ್ತು ವಾರ್ಡ್ ನಂಬರ್ 08 ರಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗಲು ಅಸುರಕ್ಷಿತ ಮುಳ್ಳು ಪೊದೆಗಳನ್ನು ಅವಲಂಬಿಸಿದ್ದೇವೆ ಈಗಾಗಲೇ ಪ್ರಾರಂಭಕ್ಕೆ ಸಿದ್ಧವಾಗಿರುವ ಪಟ್ಟಣ ಪಂಚಾಯತಿ ಕನಗಿರಿ ವಾರ್ಡ್ ನಂಬರ್07 ವಾರ್ಡ್ ನಂಬರ್ 08 ರಲ್ಲಿ ನಿರ್ಮಿಸಲಾಗಿರುವ ಪ್ರಾರಂಭಕ್ಕೆ ಸಿದ್ಧತೆಯಲ್ಲಿರುವ ಶೌಚಾಲಯ ಮತ್ತು ಸ್ನಾನಗೃಹಗಳು ಗಳನ್ನು ಸಾರ್ವಜನಿಕರು ಈ ಕೂಡಲೇ ಪ್ರಾರಂಭಿಸಬೇಕೆಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅಧಿಕಾರಿಗಳು ಜನಪ್ರತಿನಿಧಿಗಳು ಯಾರು ಇತ್ತ ಸುಳಿಯುತ್ತಿಲ್ಲ ಎಂದು ದೂರಿದ್ದಾರೆ.

ಎಂ.ತಿರುಮಲ ಅವರ ಬಗ್ಗೆ ನೋಡುವುದಾದರೆ:

ನವೆಂಬರ್ 2019 ರಲ್ಲಿ ಕನಕಗಿರಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯಾಗಿ ಕರ್ತವ್ಯಕ್ಕೆ ಸೇರಿದ ಎಂ ತಿರುಮಲ ಇವರು ಉತ್ತಮ ರೀತಿಯಲ್ಲಿ ಆಡಳಿತ ನಡೆಸಿರುತ್ತಾರೆ ಯಾವುದೇ ರೀತಿಯ ಪೊಲಿಟಿಕಲ್ ಇನ್ಫೂಲೆನ್ಸ್.ಗೆ ಬಗ್ಗದೆ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ. ಲಾಕ್ ಡೌನ್ ಕರೋನಾ ನಿರ್ವಹಣೆಯಲ್ಲಿ ಎಂ ತಿರುಮಲ ಅವರಿಗೆ ಸರ್ಕಾರದಿಂದ ಪ್ರಶಂಸೆ ಪತ್ರವೂ ಲಭಿಸಿದೆ ಯಾವುದೇ ರಾಜಿ ಮುಲಾಜಿಗೆ ಒಳಗಾಗದೆ ಕರ್ತವ್ಯನಿರ್ವಹಿಸಿರುವುದರಿಂದ ಬಹುಶಃ 26.07.2021 ರಂದು ವರ್ಗಾವಣೆ ಯಾಗಿರುತ್ತಾರೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ವರ್ಗಾವಣೆ ಆದ ನಂತರ ಎಂ ತಿರುಮಲ ಅವರು 3.08.2021ರಂದು ಸ್ಟೇ ತಂದು ಕರ್ತವ್ಯದಲ್ಲಿ ಹಾಜರಾಗಿ ದಿನಾಂಕ 10.08.2021 ವರೆಗೆ ಕರ್ತವ್ಯ ನಿರ್ವಹಿಸಿರುತ್ತಾರೆ. ದಿನಾಂಕ 11.08.2021 ರಿಂದ 25.08.2021 ರವರಿಗೆ ಮೆಡಿಕಲ್ ತಾತ್ಕಾಲಿಕ ರಜೆ ಪಡೆಯುತ್ತಾರೆ ಇದೇ ಸಂದರ್ಭದಲ್ಲಿ ಕಾರಟಿಗಿ ಪುರಸಭೆಯ ಮುಖ್ಯ ಅಧಿಕಾರಿಯಾದ ರೆಡ್ಡಿ ರಾಯನಗೌಡ ಇವರು ಕನಕಗಿರಿ ಪಟ್ಟಣ ಪಂಚಾಯಿತಿ ಪ್ರಭಾರ ಅಧಿಕಾರಿಯಾಗಿ ನೇಮಕಗೊಳ್ಳುತ್ತಾರೆ. ದಿನಾಂಕ 26.08.2021 ರಂದು ಎಂ ತಿರುಮಲ ಇವರು ಮರಳಿ ಕರ್ತವ್ಯದಲ್ಲಿ ಸೇರಲು ಅಪ್ಲಿಕೇಶನ್ ಕೊಟ್ಟಾಗ ದಿನಾಂಕ 2.09.2021 ರವರೆಗೆ ಸುಮಾರು ಏಳು ದಿನಗಳವರೆಗೆ ಜೋಯಿನಿಂಗ್ ಆರ್ಡರ್ ಸಿಗದೆ ಪರದಾಡಿದ್ದಾರೆ. ಅಧಿಕಾರಿಗಳು 07ದಿನಗಳವರೆಗೆ ಜಾಯಿನಿಂಗ್  ಆರ್ಡರ್ ಕೊಡದೆ ಇರುವುದಾದರೂ ಯಾತಕ್ಕಾಗಿ ಎಂಬುದು ಅನುಮಾನ ಮೂಡುವಂತಾಗಿದೆ.ದಿನಾಂಕ 2.09. 2021 ರಂದು ಸಾಯಂಕಾಲ ಡ್ಯೂಟಿಗೆ ಜೋಯಿನಿಂಗ್ ಆರ್ಡರ್ ಸಿಗುತ್ತದೆ. ಮರುದಿನ 3.8.2021ರಂದು ಡ್ಯೂಟಿಗೆ ಸೇರಿದ ಕೇವಲ 02 ಗಂಟೆಯಲ್ಲಿ ಅಮಾನತು ಆದೇಶ ರವಾನೆಯಾಗುತ್ತದೆ.

ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರ ಅಭಿಪ್ರಾಯ👇👇

ಈ ಹಿಂದೆ ಕನಕಗಿರಿಯಲ್ಲಿ ಪಂಚಾಯತಿ ಆಡಳಿತ ಇರುವಾಗ 2010ರಿಂದ ಕನಕಗಿರಿ ತಾಲೂಕು ಘೋಷಣೆ ಆಗೋವರೆಗೂ ಕನಕಗಿರಿಯ ವ್ಯಾಪ್ತಿಯಲ್ಲಿ NAಆಗಿರುವ ಪ್ರತಿಯೊಂದು ಫ್ಲಾಟ್ ಅನ್ನು ಡಿಮ್ಯಾಂಡ್ ರಿಜಿಸ್ಟರ್ ನಲ್ಲಿ ನಮೂದಿಸಿ ಅಂದಿನ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ.  ಎಂದು ಹೀಗಾಗಿ ಸುಮಾರು 28 ಲೇ ಔಟುಗಳ 2072 ಪ್ಲಾಟ್ ಗಳು ಅನಧಿಕೃತ ಬಡಾವಣೆ ಗಳೆಂದು ಪಟ್ಟಣ ಪಂಚಾಯಿತಿಯ ಅಂದಿನ ಮುಖ್ಯ ಅಧಿಕಾರಿ ಮಹೇಶ್ ನಿಡಶೇಷಿ ಘೋಷಣೆ ಮಾಡಿರುತ್ತಾರೆ.
ಇದರಿಂದಾಗಿ ಕೂಲಿನಾಲಿಮಾಡಿ ಹಣ ಜಮಾ ಮಾಡಿ ಬದುಕುಕಟ್ಟಿಕೊಳ್ಳಬೇಕೆಂದು ಫ್ಲಾಟ್ ಗಳನ್ನು ಖರೀದಿ ಮಾಡಿದ ಸುಮಾರು 2071 ಕುಟುಂಬಗಳು ಗೊಂದಲದಲ್ಲಿ ಸಿಲುಕಿವೆ.
ಈ ಕೂಡಲೇ ಸರ್ಕಾರ ಈ ಎಲ್ಲಾ ಲೇಔಟ್ ಗಳ ಸಮಸ್ಯೆ ಬಗೆಹರಿಸಬೇಕು ಎಂಬುದು ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ  ವಿಶ್ವಾಸನೀಯ ಯ ಸುದ್ದಿಗಳಿಗಾಗಿ ನಿತ್ಯವೂ ಓದಿ  ಹಾಗೂ ವೀಕ್ಷಿಸಿರಿGBnewskannada.com

=4

follow me

Leave a Reply

Your email address will not be published.

error: Content is protected !!
×