ಸಿಂಗನಾಳ ಗ್ರಾಮಕ್ಕೆ ಕೊಪ್ಪಳ ಜಿಲ್ಲಾಧಿಕಾರಿಗಳ ಭೇಟಿ. ಕ್ರಮ ಕೈಗೊಳ್ಳದಿದ್ದರೆ ರಾಜ್ಯ ವ್ಯಾಪ್ತಿ ಹೋರಾಟ ಕರಿಯಪ್ಪ ಗುಡಿಮನಿ ಎಚ್ಚರಿಕೆ.

ವರದಿ:ಸುಂದರರಾಕಾರಟಗಿ

GBnewskannada :ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ದಲಿತರ ಮೇಲೆ ಸವರ್ಣಿಯರು ನಡೆಸಿರುವ ಹಲ್ಲೆ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಿಂಗನಾಳ ಗ್ರಾಮಕ್ಕೆ ಬಂದು ವಸ್ತುಸ್ಥಿತಿಯನ್ನು ಅವಲೋಕನ ಮಾಡಲು ಸಿಂಗನಾಳ ಗ್ರಾಮಕ್ಕೆ ಬರ್ತಾರೆ ಎನ್ನುವ ಮಾಹಿತಿ ಪಡೆದಂತಹ ಸಿಂಗನಾಳ ಗ್ರಾಮದ ದಲಿತರು ಮಹಿಳೆಯರು ಪುರುಷರು ಪ್ರತಿಯೊಬ್ಬರು ಕೂಡ ಅವರಿಗಾಗಿ ಕಾದು ಕುಳಿತಿದ್ದರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪೊಲೀಸ್ ಇಲಾಖೆಯ ಡಿವೈಎಸ್ಪಿ ಸಿಪಿಐ ಪಿಎಸ್ಐ ಪೊಲೀಸರ ತಂಡ ಅದೇ ರೀತಿಯಾಗಿ ಕಂದಾಯ ಅಧಿಕಾರಿಗಳು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹಾಯಕ ಆಯುಕ್ತರು ಜಿಲ್ಲಾಡಳಿತವೇ ಸಿಂಗನಾಳ ಗ್ರಾಮಕ್ಕೆ ಆಗಮಿಸಿತ್ತು .

ಸಿಂಗನಾಳ ಗ್ರಾಮದ ದಲಿತಕೇರಿಗೆ ನೆರವಾಗಿ ಬಂದಂತಹ ಜಿಲ್ಲಾಧಿಕಾರಿಗಳು ಸರ್ಕಾರಿ ಹಿರಿಯ ಸರಕಾರಿ ಶಾಲೆ ಹತ್ತಿರ ಎರಡು ವರ್ಗಗಳ ಜನರಿಗೆ ಸೌಹಾರ್ದ ಹಾಗೂ ವಸ್ತುಸ್ಥಿತಿಯನ್ನು ವಿಚಾರಣೆ ಮಾಡಲು ಸ್ಥಳವನ್ನು ನಿಯೋಜಿಸಿದ್ದೇವೆ ಕೇರಿ ಜನರೆಲ್ಲ ಆ ನಿಯೋಜಿತ ಸ್ಥಳಕ್ಕೆ ಬರಲು ಸೂಚಿಸಿದರು .ಆದರೆ ಅದಕ್ಕೆ ಒಪ್ಪದ ದಲಿತಕೇರಿಗೆ ಹಾಗೂ ದಲಿತಪರ ಹೋರಾಟಗಾರ ಕರಿಯಪ್ಪ ಗುಡಿಮನಿ ಇವರ ನಡುವೆ ಹಾಗೂ ಜಿಲ್ಲಾಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.

ಜಿಲ್ಲಾಧಿಕಾರಿಗಳು:👉 ಯಾರಿಗೆ ಯಾರಿಗೆ ಪೆಟ್ಟಾಗಿದೆ ಅಂತಹಕುಟುಂಬದವರನ್ನು ಇಂಡಿವಿಜುವಲ್ಆಗಿ ಮಾತನಾಡಿಸುತ್ತೇನೆ. ಎರಡನೆಯದು ಇವತ್ತೇನು ಸಮಸ್ಯೆಯಾಗಿದೆ ಅಥವಾ ಮೊನ್ನೆ ಏನೋ ಸಮಸ್ಯೆಯಾಗಿದೆ ಎಲ್ಲರನ್ನೂ, ಕಂಬೈನ್ಡ್ ಆಗಿ ಸೇರಿಸಿ ಮಾತನಾಡುತ್ತೇನೆ,
ಕರಿಯಪ್ಪ ಗುಡಿಮನಿ: 👉 ಶಾಂತಿಸಭೆ ಅಂತ ಹೇಳ್ತಾ ಇದ್ದೀರಾ ಇಂಡಿವಿಜುವಲ್ ಕೇಳುವುದಾದರೆ ನಮ್ಮ ಸಮಸ್ಯೆಯನ್ನು ಕೇಳಿರಿ, ಅವರ ಸಮಸ್ಯೆಯನ್ನು ಕೇಳಿರಿ ಆದರೆ  ಇಂಡಿವಿಜುವಲ್ ಅಂದರೆ ಒಬ್ಬ ವ್ಯಕ್ತಿ, ಒಂದು ಮನೆ  ಒಂದು ಅದು ಅಂತ ಅಲ್ಲ ಇದು ಇಡೀ ಕೇರಿ ಜನಗಳ ಸಮಸ್ಯೆ 150 ಕುಟುಂಬಗಳ ಸಮಸ್ಯೆ ಇಡೀ ಜನಗಳಿಗೆ ಸಮಸ್ಯೆ ಆಗಿದೆ ಪರಿಹಾರ ಸಿಗಬೇಕು ನಮ್ಮ ಡಿಸಿ ಬರ್ತಾರೆ ನಮ್ಮ ಎಸ್ಪಿ ಬರ್ತಾರಂತೆ ನಿಮಗಾಗಿ ಕಾದು ಕುಳಿತಿದ್ದಾರೆ. 5 ನಿಮಿಷ ಆದರೂ ಕುಳಿತುಕೊಂಡು ನಮ್ಮ ಸಮಸ್ಯೆಗಳನ್ನು ಆಲಿಸಿರಿ ನಮ್ಮ ಕಷ್ಟಗಳನ್ನು ಕೇಳಿರಿ.

ಜಿಲ್ಲಾಧಿಕಾರಿ: 👉 ಇಬ್ಬರ ಸಮಸ್ಯೆ ಯಟ್ಎ ಟೈಮ್ ಕೇಳುತ್ತೇನೆ

ಕರಿಯಪ್ಪ ಗುಡಿಮನಿ: 👉ಕೇಳಬಹುದು ಆದರೆ ಶಿಸ್ತುಬದ್ಧವಾಗಿ ಶಾಂತವಾಗಿ ನಮ್ಮ ಜನ ನಿಮ್ಮ ಜೊತೆ ಮಾತನಾಡಲು ನಿಮಗೆ ಸಮಸ್ಯೆಗಳನ್ನು ತಿಳಿಸಲು ಕುಳಿತುಕೊಂಡಿದ್ದಾರೆ ಸಮಸ್ಯೆಗಳನ್ನು ಕೇಳಿರಿ.

ಜಿಲ್ಲಾಧಿಕಾರಿಗಳು: 👉 ಅಲ್ಲಿ ನಿಮಗೆ ಸಮಯ ಕೊಡ್ತೀನಿ ಅವಕಾಶ ಕೊಡುತ್ತೇನೆ ನಿಮ್ಮ ಪರವಾಗಿ ಅಥವಾ ನೀವುಗಳು ಬಂದರೆ ನಿಮಗೂ ಕೂಡ ಸಮಯ ಕೊಡುತ್ತೇನೆ ಅಲ್ಲಿ ನಿಮ್ಮ ಸಮಸ್ಯೆ ಕೇಳಲಾರದೇ ನಂದೇ ಹೇಳಿ ಹೋಗೋಕೆ ಬಂದಿಲ್ಲ. ಅರ್ಥ ಆಗ್ತಾ ಇದೆಯಾ ನಿಮಗೆ ಸೆಪರೇಟಾಗಿ ನಿಮ್ಮ ಜನಗಳನ್ನು ಬೇರೆ ಕೇಳಿ ಅವರ ಜನಗಳನ್ನು ಬೇರೆ ಕೇಳಿ ಹೋಗೋಕೆ ನಾನು ಬಂದಿಲ್ಲ.

ಕರಿಯಪ್ಪ ಗುಡಿಮನಿ :👉 ಸೆಪರೇಟ್ ಅಲ್ಲ ಸರ್ ನಮ್ಮ ಜನಗಳು ನಿಮ್ಮ ಮುಂದೆ ಕಷ್ಟಗಳನ್ನು ಹೇಳಿಕೊಳ್ಳೋಕೆ ಕಾದುಕುಳಿತಿದ್ದಾರೆ ನೋಡಿ
ಎಸ್ಪಿ : 👉ಸಪರೇಟ್ ಎಂದರೆ ಯಾರಿಗೆ ತೊಂದರೆಯಾಗಿದೆಯೋಅವರಿಗೆ ವಿಚಾರಣೆ ಮಾಡ್ತೀವಿ,

ಜಿಲ್ಲಾಧಿಕಾರಿಗಳು:👉 ಒನ್ನಿಮಿಷ ಇರಿ, ಮೊದಲು ಕೇಳಿ  ಏರಿಯಾದಲ್ಲಿ  ಯಾರ್ಯಾರ ಫ್ಯಾಮಿಲಿ ಮೆಂಬರ್ಸ್ ಗೆ ತೊಂದರೆಯಾಗಿದೆ ಅವರನ್ನು ಮಾತಾಡಿಸುತ್ತೇನೆ ಒಂದು ಮೊದಲು ಕೇಳಿಬಿಡಿ ತದನಂತರ ಏರಿಯಾ ಜನಗಳಿಗೆ ಯಾರಿಂದ ತೊಂದರೆಯಾಗುತ್ತದೆಯೇ ಅವರನ್ನು ಕೂಡ ಒಂದು ಕಡೆ ಕರೆದಿದ್ದೇನೆ ಇಬ್ಬರನ್ನು ಎಟ್ಎ ಟೈಮ್ಒಂದೇ ಸಲ ನಾನು ಮಾತನಾಡುತ್ತೇನೆ ಸಪರೇಟ್ ಆಗಿ ಕೇಳೋದಿಲ್ಲ.  ಸಿಂಗನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಬರಲು ಜಿಲ್ಲಾಧಿಕಾರಿಗಳು ಒತ್ತಾಯಿಸಿದರು. ಅಲ್ಲಿಗೆ  ಬರುವುದಿಲ್ಲ ನಮ್ಮ ಸಮಸ್ಯೆಗಳು ಏನು ಇದೆ ಕೇರಿಯಲ್ಲಿ ನೀವು ಕೇಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಯೋರ್ವ ಜಿಲ್ಲಾಧಿಕಾರಿಗಳಿಗೆ ಈ ರೀತಿಯಾಗಿ ಪ್ರಶ್ನೆ ಮಾಡಿದನು. ವಿದ್ಯಾರ್ಥಿಗಳ  ಮೇಲೆ ದೂರು ದಾಖಲಿಸಿದ್ದಾರೆ  ಮುಂದಿನ ತಿಂಗಳು ಡಿಗ್ರಿ ಎಕ್ಸಾಮ್ ಇದೆ ನಾವು  ಹೇಗೆ  ಅಭ್ಯಾಸ ಮಾಡುವುದು ಎಂದು ಅಳಲು ತೋಡಿಕೊಂಡರು ಇದಕ್ಕೆ ಉತ್ತರಿಸಿದ 👉ಜಿಲ್ಲಾಧಿಕಾರಿಗಳು: ಎಂಕ್ವೇರಿ ಇನ್ನೂ ಒಂದೆರಡು ದಿನದಲ್ಲಿ ಮುಗಿಸುತ್ತೇವೆ ಅದಕ್ಕೆ ತನಿಖಾ ತಂಡವನ್ನು ಏರ್ಪಡಿಸಲು ಎಸ್ಪಿಯವರಿಗೆ ಸೂಚಿಸಿದ್ದೇವೆ. ನಿರಪರಾಧಿಗಳು ಹೊರಗೆ ಬರುತ್ತಾರೆ ಎಂದು ಉತ್ತರಿಸಿದರು. ಜಿಲ್ಲಾಧಿಕಾರಿಗಳು ಕೇರಿಯ ದಲಿತರ ಒತ್ತಾಯಕ್ಕೆ ಮಣಿದು ಅದೇ ಸ್ಥಳದಲ್ಲಿ ನಿಂತು ಜನ ಸಮಸ್ಯೆಗಳನ್ನು ಆಲಿಸಿದರು. ಈ ಗ್ರಾಮದಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದೆ ನಮ್ಮ ದಲಿತರಿಗೆ ಗುಡಿಗುಂಡಾರಗಳಿಗೆ ಹೋಟೆಲ್ಗಳಿಗೆ ಅದೇ ರೀತಿ ಕಟಿಂಗ್ ಶಾಪ್ ಗಳಿಗೆ ಹೋಗಲು ಬಿಡುತ್ತಿಲ್ಲ ಕತ್ತಲರಾತ್ರಿ ನಡೆದಂತಹ ಜಗಳ ಹಿರಿಯರು ಸಮಕ್ಷಮ ಬಗೆಹರಿಸಬಹುದಿತ್ತು ಆದರೆ ಸವರ್ಣೀಯರ ಸೇರಿಕೊಂಡು ನಮ್ಮ ದಲಿತ ಕೇರಿಗೆ ನುಗ್ಗಿ ಚಿಕ್ಕ ಮಕ್ಕಳು ಹಿರಿಯರು ಮಹಿಳೆಯರು ಎನ್ನದೆ ಪ್ರತಿಯೊಬ್ಬರನ್ನು ಕಲ್ಲು ಕಟ್ಟಿಗೆಗಳಿಂದ ಹಲ್ಲೆ ಮಾಡಿದ್ದಾರೆ ಮನೆಗಳ ಬಾಗಿಲಿಗೆ ಒದ್ದಿದ್ದಾರೆ.  ಮಹಿಳೆಯರು ಕಾಲು ಮುಗಿದರೂ ಬಿಡಲಿಲ್ಲ ಪ್ರತಿಯೊಬ್ಬರನ್ನು ಜಾತಿನಿಂದನೆ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅಟ್ಟಹಾಸ ಮೆರೆದು ದಲಿತರ ಮೇಲೆ ದೌರ್ಜನ್ಯ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಎಂದು ಕಣ್ಣೀರು ಸುರಿಸಿದರು, ಜೈಲಿನಿಂದ ಬಿಡುಗಡೆಯಾದ ನಂತರ ಸವರ್ಣಿಯರು ಮತ್ತೆ ಮನೆಗಳಿಗೆ ನುಗ್ಗಿ ನಿಮ್ಮನ್ನು ಕಡಿಯುವವರಿಗೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಇಂತಹ , ಸ್ಥಿತಿಯಲ್ಲಿ ನಾವುಗಳು ಗ್ರಾಮದಲ್ಲಿ ಬದುಕುವುದಾದರೂ ಹೇಗೆ ಮಕ್ಕಳು, ಮರಿಗಳನ್ನು ಕಟ್ಟಿಕೊಂಡು ಜೀವನ ನಡೆಸುವುದಾದರೂ ಹೇಗೆ ನಿಮ್ಮ ಜಿಲ್ಲಾಡಳಿತವೇ ನಮಗೆ , ತೊಟ್ಟು ವಿಷವನ್ನು ಕೊಟ್ಟುಬಿಡಿ ನಮಗೆ ರಕ್ಷಣೆ ಇಲ್ಲದೆ ಈ ಜಿಲ್ಲೆಯಲ್ಲಿ ಈ ಗ್ರಾಮದಲ್ಲಿ ಈ ರೀತಿ ಬದುಕಬೇಕೆ……?  ಸರ್ಕಾರವೇ ನೀವೇ ಹೇಳಿ ನಮಗೆ ನಾಯ ದೊರಕಿಸಿಕೊಡಿ ಸ್ವಾಮಿ…..! ಮತ್ತೊಮ್ಮೆ ನಾವುಗಳು ಕಳಕಳಿಯಿಂದಬೇಡಿ ಕೊಳ್ಳುವುದೆನೆಂದರೆ ಗ್ರಾಮದಲ್ಲಿ ಸೌಹಾರ್ದ, ಮೂಡಬೇಕು ಗ್ರಾಮದಲ್ಲಿ ಜನರಿಗೆ ಶಾಂತಿ ಸಿಗಬೇಕು, ನೊಂದವರ ಬೆಂದವರ ಕುಟುಂಬಗಳಿಗೆ ನ್ಯಾಯ ಸಿಗಬೇಕು, ದೌರ್ಜನ್ಯವೆಸಗಿದ ಅವರ ಮೇಲೆ ಜಿಲ್ಲಾ ಆಡಳಿತ ಕಠಿಣ ಕಾನೂನು ಕ್ರಮ ಜರುಗಿಸಬೇಕು, ದೌರ್ಜನ್ಯಕ್ಕೊಳಗಾದ 150 ಕುಟುಂಬಗಳಿಗೆ ರಕ್ಷಣೆ ಪರಿಹಾರ, ಆರ್ಥಿಕ ಭದ್ರತೆ, ಆಹಾರ ಭೂ ಸಮಸ್ಯೆಗಳನ್ನು ಇತ್ಯಾರ್ಥಗೊಳಿಸಿ ಅತಿ ಜರೂರಾಗಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ಹೋರಾಟಗಾರ ಕರಿಯಪ್ಪ ಗುಡಿಮನಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಓದಿ ತಿಳಿಸಿದರು ನಂತರ ಜಿಲ್ಲಾಧಿಕಾರಿಗಳು ಮನವಿ ಪತ್ರವನ್ನು ಸ್ವೀಕರಿಸಿದರು ಈ ಸಂದರ್ಭದಲ್ಲಿ ದಲಿತ ಮಹಿಳೆಯರು ಎಂದು ಕಣ್ಣೀರಿಟ್ಟರು ಅಕ್ಷರಸಹ ಸಿಂಗನಾಳ ದಲಿತ ಕೇರಿ ಆರ್ತನಾದ ಗಳು ಪ್ರತಿಧ್ವನಿಸುತ್ತಿದ್ದವು ದಲಿತ ಮಹಿಳೆಯರು ಜಿಲ್ಲಾಧಿಕಾರಿಗಳ ಕಾಲಿಗೆ ಬಿದ್ದು ಕಣ್ಣೀರು ಸುರಿಸಿದರು ಈ ಸನ್ನಿವೇಶವನ್ನು ನೋಡಿದರೆ ಎಂಥವರಾದರೂ ಕೂಡ ಭಾವುಕರಾಗಿ ಕಣ್ಣೀರು ಸುರಿಸುವಂತಿತ್ತು. ನಂತರ ಜಿಲ್ಲಾಧಿಕಾರಿಗಳು ದಲಿತರ ಕೇರಿ ಕುಟುಂಬಗಳಿಗೆ ಭೇಟಿಕೊಟ್ಟು ಆಗಿರುವ ಘಟನೆಯನ್ನು  ವಿಚಾರಿಸಿದರು ತಿಳಿದುಕೊಂಡರು ಭೇಟಿ ಕೊಟ್ಟ ಪ್ರತಿ  ಮನೆಯವರಿಗೂ ಕೂಡ ಸವರ್ಣಿಯರು ಬಂದು ಹಲ್ಲೆ ಮಾಡಿರುವುದು ಎಲ್ಲಿ ಎಂಬುದನ್ನು ಕೇಳುತ್ತಲೇ ಇದ್ದರು ಇದಕ್ಕೆ ಪ್ರತಿಯಾಗಿ ಮನೆಗಳಿಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂದು ಪ್ರತಿಯೊಬ್ಬರು ಹೇಳುತ್ತಲೇ ಇದ್ದರು ನಂತರ ಸಿಂಗನಾಳ ಸರ್ಕಾರಿ ಶಾಲೆಯ ಆವರಣದಲ್ಲಿ ಏರ್ಪಡಿಸಿರುವ ಕಾರ್ಯಕ್ರಮಕ್ಕೆ ಮುನ್ನಡೆದರು ಸರಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸವರ್ಣಿಯರು ಬೆರಳೆಣಿಕೆಯಷ್ಟು ಮಾತ್ರ ಬಂದಿದ್ದರು ಅದರಲ್ಲಿ ಒಬ್ಬ ವ್ಯಕ್ತಿ ಮಾತ್ರ ಇದು ಸುಳ್ಳು ನಾವು ಯಾರ ಮೇಲೆ ಅಲ್ಲೇ ಮಾಡಿಲ್ಲ ಜಾತಿನಿಂದನೆ ಮಾಡಿಲ್ಲ ಎಂದು ಹೇಳಿದ್ದಾನೆ ನಂತರ ಜಿಲ್ಲಾಧಿಕಾರಿಗಳು, ಇನ್ನೂ ಮಾತನಾಡುವ ವ್ಯಕ್ತಿಗಳ ಯಾರಾದರೂ ಇದ್ದಾರೆ ಮಾತನಾಡಿ ಎಂದು ವಿನಂತಿಸಿಕೊಂಡಿದ್ದಾರೆ. ಆದರೆ ಯಾರೂ ಕೂಡ ಯಾವುದೇ ವಿಚಾರಗಳನ್ನು ಜಿಲ್ಲಾಧಿಕಾರಿಗಳ ಜೊತೆ ಹಂಚಿಕೊಂಡಿಲ್ಲ ಆ ಕಾರಣದಿಂದಾಗಿ ಜಿಲ್ಲಾಧಿಕಾರಿಗಳ ಕಾರ್ಯಕ್ರಮದಿಂದ ನಿರ್ಗಮಿಸಿದರು. ನಂತರ GB ನ್ಯೂಸ್ ಕನ್ನಡ ವಾಹಿನಿಯೊಂದಿಗೆ ಮಾತನಾಡಿದ ದಲಿತಪರ ಹಿರಿಯ ಹೋರಾಟಗಾರ ಕರಿಯಪ್ಪ ಗುಡಿಮನಿ ಮಾತನಾಡಿ ಜಿಲ್ಲಾ ಆಡಳಿತ ಸಿಂಗನಾಳ ಗ್ರಾಮದ ದಲಿತರ ಮೇಲೆ ಆಗಿರುವ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಅಪರಾಧಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ದಲಿತರ ರಕ್ಷಣೆ ನೀಡಬೇಕು ಇಲ್ಲವಾದಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಬಿ ನ್ಯೂಸ್ ಕನ್ನಡ ವಾಹಿನಿ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

=9

follow me

Leave a Reply

Your email address will not be published.

error: Content is protected !!
×