ಕೊಪ್ಪಳ ಬಿಜೆಪಿಯವರೇ ಮಾಧ್ಯಮ ಪಟ್ಟಿಯಲ್ಲಿ ಇರುವವರು ಮಾತ್ರ ಪತ್ರಕರ್ತರಲ್ಲ ಗಮನವಿರಲಿ!?

ಪ್ರತೀ ಬಾರಿ ಜಾಹಿರಾತು ಕೊಡುವಲ್ಲಿ ತಾರತಮ್ಯ ಹಲವು ಬಡ ಪತ್ರಕರ್ತರನ್ನು ಕಡೆಗಣಿಸುತ್ತಿದ್ದಾರೆ ಮುಖಂಡರು …ನೂತನ ಸಚಿವರೇ ಉತ್ತರ ಕೊಡಿ….!!! ನಿಮ್ಮ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಕರ್ತರು ನಿಮ್ಮನ್ನ ಎಷ್ಟರಮಟ್ಟಿಗೆ ಗೌರವಿಸುತ್ತಾರೆ ಅನ್ನುವುದನ್ನ ಮುಂದೆ ಕಾದು ನೋಡಿ ತಾರತಮ್ಯವನ್ನು ಮೊದಲು ಬಿಡಿ

ಕೊಪ್ಪಳ: ಜಿಲ್ಲೆಯ ಮಾಧ್ಯಮ ಪಟ್ಟಿಯಲ್ಲಿ ಇದ್ರೆ ಮಾತ್ರ ಜಾಹೀರಾತು ಅಂತೆ..! ಹೌದು ನೂತನ ಸಚಿವರ ಆಗಮನಕ್ಕೆಂದು ಕೊಪ್ಪಳ ಜಿಲ್ಲೆಯಲ್ಲಿ ಮಾಧ್ಯಮ ಪಟ್ಟಿಯಲ್ಲಿ ಸೇರಿರುವವರಿವೆ ಮಾತ್ರ ಜಾಹಿರಾತು ಕೊಟ್ಟು, ಉಳಿದ ಪತ್ರಕರ್ತರಿಗೆ  ಖಾಲಿ ಕೈಯಲ್ಲಿ ಕಳಿಸಿ  ಅನ್ಯಾಯ ಮಾಡುತ್ತಿವೆ.  ಉಳಿದ ಪತ್ರಿಕೆ ಪತ್ರಕರ್ತರನ್ನು ಬಿಜೆಪಿ ಪಕ್ಷ ಕಡೆಗಣಿಸಿದೆ.

“ಹಲವು ಪತ್ರಕರ್ತರ  ಪ್ರಶ್ನೆ..?  

ಪತ್ರಿಕೆಗಳು ಹಾಗೂ ಮಾಧ್ಯಮ ಪಟ್ಟಿಯಲ್ಲಿ ಇಲ್ಲದ ಪತ್ರಿಕೆಗಳ ಪತ್ರಕರ್ತರು ಅಲ್ಲವೇ..? ಮಾಧ್ಯಮ ಪಟ್ಟಿಯಲ್ಲಿ ಇದ್ದವರು ಮಾತ್ರ ಪತ್ರಕರ್ತರೆ..? ಪತ್ರಿಕೆಗಳ ಮಾಧ್ಯಮ ಪಟ್ಟಿ ರಾಜಕೀಯ ಪಕ್ಷಗಳಿಗೇಕೆ..? ಹಲವುಬಾರಿ ಪಕ್ಷಗಳು ಅಧಿಕಾರಕ್ಕೆ ಬರಲು ಮಾದ್ಯಮೇತರ ಪತ್ರಿಕೆಗಳಲ್ಲಿ ಸಾಮಾಜಿಕ,ಭ್ರಷ್ಟಾಚಾರ, ಜನಜಾಗೃತಿ ಮೂಡಿಸುವಲ್ಲಿ ಹಿಂದೇಬಿದ್ದಿಲ್ಲ. ಅದು ಯಾವುದು ಇವರು ಗಮನಿಸುವದಿಲ್ಲವೇ..ಎಲೆಕ್ಷನ್ ಬಂತೆಂದರೆ ಆವಾಗ ನೆನಪಾಗುವ ಹಲವು ಪತ್ರಕರ್ತರು ಈಗ ನೆನಪಗೋದಿಲ್ಲವೇ..?! ಆದರೆ ಬೇಕಾದವರಿಗೆ ಮಾಧ್ಯಮದ ಪಟ್ಟಿಯಲ್ಲಿ ಇಲ್ಲದಿದ್ದರೂ ಜಾಹಿರಾತು ಕೊಟ್ಟ ಉದಾ.. ನಮ್ಮ ಕಣ್ಣಮುಂದೆ ಇದೆ ಎಲ್ಲ ಪತ್ರಕರ್ತರು ಬಿಜೆಪಿ ಪಕ್ಷಕ್ಕೆ ಒಂದೇ ಅಲ್ಲವೇ…? ಪಕ್ಷಗಳ ತಾರತಮ್ಯ ಬಡ ಪತ್ರಕರ್ತರ ಮೇಲೆ ಪರಿಣಾಮ ಬೀರುತ್ತದೆ.  ಜಾಹೀರಾತಿನಿಂದ ಬರುವ ಕಮಿಷನ್ ನಿಂದ ಪತ್ರಕರ್ತರು ಜೀವನ ಕಟ್ಟಿಕೊಂಡಿರುತ್ತಾರೆ ದಿನಾಲೂ ನಿಮ್ಮನ್ನು ಕೇಳುತ್ತಾರೆಯೇ..! ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಪಕ್ಷಗಳು ಜಾಹಿರಾತು ಕೊಡುತ್ತವೆ ಅವುಗಳಲ್ಲಿ ಕೂಡ ತಾರತಮ್ಯ  ಎಷ್ಟು ಸರಿ ನೀವೆ ಹೇಳಿ.

ಇದು ಕೊಪ್ಪಳದ ಬಿಜೆಪಿ ಪಕ್ಷದಲ್ಲಿ ಮಾತ್ರ ಈ ತಾರತಮ್ಯ ಇದೆ, ಉಳಿದ ಪಕ್ಷಗಳು ಯಾವಾಗಲೂ ಈ ರೀತಿಯ ತಾರತಮ್ಯವನ್ನು ಅನುಸರಿಸಿಲ್ಲ. ಪತ್ರಕರ್ತರು ಅಂದ ಮೇಲೆ ಎಲ್ಲರೂ ಒಂದೇ ಕೇವಲ ಮಾಧ್ಯಮ ಪಟ್ಟಿಯಲ್ಲಿ ಇದ್ದರೆ ಮಾತ್ರ ಅವರು ಪತ್ರಕರ್ತರಲ್ಲ ಸಾಕಷ್ಟು ಪ್ರಿಂಟ್ ಮೀಡಿಯಾಗಳು ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಕೆಲಸವನ್ನು ನಿಭಾಯಿಸುತ್ತಿವೆ. ಸಾಮಾಜಿಕ ಅಸಮಾನತೆ, ರಾಜಕೀಯ ಸಮಾನತೆ, ಧಾರ್ಮಿಕ ಅಸಮಾನತೆ, ಸಾಂಸ್ಕೃತಿಕ ಅಸಮಾನತೆಯ, ವಿರುದ್ಧ ಪತ್ರಿಕೆಗಳು ಧ್ವನಿಯೆತ್ತಿ ಸಮಾಜವನ್ನು ಸುಧಾರಣೆಯತ್ತ ಹೊಯುವಲ್ಲಿ ಸಾಕಷ್ಟು ಪರಿಶ್ರಮ ವಹಿಸುತ್ತಿವೆ. ಇದನ್ನ ಕೇವಲ ಮಾಧ್ಯಮ ಪಟ್ಟಿಯಲ್ಲಿ ಇರುವವರು ಮಾತ್ರ ಮಾಡುತ್ತಿಲ್ಲ.ಆದರಿಂದ ಹೊರಗಡೆ ಇರುವ ಪತ್ರಕರ್ತರು ಕೂಡ ಮಾಡುತ್ತಿದ್ದಾರೆ ಮತ್ತು ಪತ್ರಿಕೆಗಳು ಕೂಡ ಅದಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿವೆ ಆದರೆ ಬಿಜೆಪಿ ಪಕ್ಷದ ಮುಖಂಡರಿಗೆ ಪಕ್ಷ ಕೊಡುವ ದುಡ್ಡು ಉಳಿಸಿಕೊಳ್ಳುವುದರಲ್ಲಿ ಲೆಕ್ಕಾಚಾರ ಹಾಕುತ್ತಾರೆ. ಆದರೆ ಹೊರಗಡೆ ಇರುವ ಪತ್ರಕರ್ತರನ್ನು ಖಾಲಿ ಕೈಯಲ್ಲಿ ಕಳಿಸುತ್ತಾರೆ. ಇದೇ ಪತ್ರಿಕೆಯವರು ಮುಂದೆ ಈ ಪಕ್ಷಕ್ಕೆ ಗೂಟ ಇಡುತ್ತಾರೆ ಅನ್ನುವುದು ಇವರಿಗೆ ಇನ್ನೂ ತಿಳಿದಿಲ್ಲ ಅಂತ ಕಾಣುತ್ತೆ. ಯಾವುದಕ್ಕೂ ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷ ಕಾದುನೋಡಬೇಕು.

Leave a Reply

Your email address will not be published.

ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ
error: Content is protected !!