ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್

ವರದಿ:ಸುಂದರರಾಕಾರಟಗಿ

GBnewskannada :ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಕಲಬುರ್ಗಿ ತಾಲೂಕ ಘಟಕ ಕಾರಟಗಿ ಹಾಗೂ ಕಸ್ತೂರಿ ಬಾ ಮಹಿಳಾ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಸಂಘದ ಶಿಕ್ಷಣ ವಿಭಾಗದ ತಾಲೂಕ ಸಂಯೋಜಕರಾದ ಶ್ರೀ ಬಸವರಾಜ್ ಹೊಸಮನಿ ಮಾತನಾಡುತ್ತಾ ಗ್ರೆನಡಿಯರ್ ಯೋಗೆಂದ್ರ ಸಿಂಗ್ ಯಾದವ್ ಮತ್ತು ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಇನ್ನಿತರ ಕಾರ್ಗಿಲ್ ವೀರಯೋಧರ ಹೋರಾಟದ ಬಗ್ಗೆ ಮಾತನಾಡುತ್ತಾ ಈ ಯುದ್ಧದಲ್ಲಿ ಭಾರತದ 527 ಸೈನಿಕರು ವೀರ ಮರಣವನ್ನು ಹೊಂದಿದರು ಎಂದು ತಿಳಿಸಿದರು. ಜೊತೆಗೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ತಾಲೂಕಿನಲ್ಲಿ ನಡೆದಿರುವ ಅಭಿವೃದ್ಧಿ ಯೋಜನೆಗಳ ಮತ್ತು ಕಾರ್ಯಗಳ ಬಗ್ಗೆ ವಿಶ್ಲೇಷಣೆ ನೀಡಿದರು ಕಾರ್ಯಕ್ರಮದ ವೇದಿಕೆ ಮೇಲೆ ಜಿಲ್ಲಾ ಸಂಯೋಜಕರುಗಳಾದ ಶ್ರೀ ಮಂಜುನಾಥ ಮಸ್ಕಿ ಶ್ರೀ ಮಂಜುನಾಥ ಹೊಸಕೆರೆ ಶ್ರೀ ರವಿ ದ್ಯಾಮನಗೌಡ ವಿಕಾಸ ಅಕಾಡೆಮಿಯ ಜಿಲ್ಲಾ ಸಂಯೋಜಕರಾದ ಶ್ರೀ ವೀರೇಶ್ ಮ್ಯಾಗೇರಿ ಶ್ರೀ ರಮೇಶ್ ಕುಲಕರ್ಣಿ ಕಾಲೇಜಿನ ಉಪಾಧ್ಯಕ್ಷರಾದ ಶ್ರೀ ರುದ್ರಪ್ಪ ಕಾರ್ಯದರ್ಶಿಗಳಾದ ಶ್ರೀ ಅಂಬರೀಶ್ ಗೌಡ ಯರಡೋಣ ಶಕ್ತಿಕೇಂದ್ರದ ಅಧ್ಯಕ್ಷರಾದ ಶ್ರೀ ವೀರಭದ್ರಪ್ಪ ಕೂಡ್ಲೂರ್ ಸಿದ್ದಾಪುರ ಶಕ್ತಿಕೇಂದ್ರದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಮಾಲಿಪಾಟೀಲ್ ಮತ್ತು ತಾಲೂಕ ಸಂಯೋಜಕರ ಗಳು ಉಪನ್ಯಾಸಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು……….

=4

follow me

Leave a Reply

Your email address will not be published.

error: Content is protected !!
×