ಕೊಪ್ಪಳ ಗ್ರಾಮೀಣ ಭಾಗದಲ್ಲಿ 35 ಅಕ್ರಮ ಮದ್ಯ ಮಾರಾಟದ ಪ್ರಕರಣಗಳು ದಾಖಲು

ಜಿಬಿ ನ್ಯೂಸ್ ಕನ್ನಡ ಸುದ್ದಿ ಕೊಪ್ಪಳ : ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟಮಾಡುತ್ತಿದ್ದ 33 ಸ್ಥಳಗಳ ಮೇಲೆ ದಾಳಿ ಮಾಡಿದ ಪೊಲೀಸರು 35 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ..!

ವಿವಿಧ ಕಡೆಗಳಲ್ಲಿನ ಪಾನ್ ಶಾಪ ಸೇರಿದಂತೆ ಅಕ್ರಮ ಮದ್ಯ ಮಾರಾಟ ಅಂಗಡಿಗಳ ಮೇಲೆ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಅವರ ನಿರ್ದೇಶನದ ಮೇಲೆ ಪೊಲೀಸರು ದಾಳಿ ಕೈಗೊಂಡಿದ್ದರು.

ಕೊಪ್ಪಳ ಎಸ್ಪಿ ಟಿ ಶ್ರೀಧರ್

ಕೊಪ್ಪಳ ಗ್ರಾಮೀಣ ಹಾಗೂ ನಗರ ಠಾಣೆಗಳಲ್ಲಿ ತಲಾ ಎರಡು ಕಡೆಗಳಲ್ಲಿ , ಮುನಿರಬಾದ್ ಠಾಣೆಯ ಮೂರು ಕಡೆ, ಅಳವಂಡಿ ಠಾಣೆಯಲ್ಲಿ ನಾಲ್ಕು , ಯಲಬುರ್ಗಾ ಠಾಣೆಯಲ್ಲಿ ಎರಡು, ಕೂಕನೂರು ಠಾಣೆಯಲ್ಲಿ ಎರಡು ಕಡೆ, ಬೇವೂರು ಠಾಣೆಯಲ್ಲಿ ಒಂದು ಕಡೆ, ಗಂಗಾವತಿ ಗ್ರಾಮೀಣ ಭಾಗದಲ್ಲಿ ನಾಲ್ಕು ಕಡೆ, ಹನುಮಸಾಗರ ಠಾಣೆಯಲ್ಲಿ ಎರಡು ಕಡೆ, ತಾವರಗೇರಾ ಠಾಣೆಯಲ್ಲಿ ನಾಲ್ಕು ಕಡೆಗಳಲ್ಲಿ , ಕುಷ್ಟಗಿ ಠಾಣೆಯಲ್ಲಿ ನಾಲ್ಕು ಕಡೆಗಳಲ್ಲಿ ಹಾಗೂ ಕಾರಟಗಿ ಠಾಣೆಯಲ್ಲಿ ಎರಡು ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟಮಾಡುತ್ತಿದ್ದ 35 ಜನರ ಮೇಲೆ ಪ್ರಕರಣ ದಾಖಲಾಗಿದೆ. ಅಲ್ಲದೆ, ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ..!

=4

follow me

Leave a Reply

Your email address will not be published.

error: Content is protected !!
×