ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಯುಕ್ತ ಮೋರ್ಚಾದಿಂದ ನರಗುಂದ ನವಲಗುಂದ ರೈತ ಬಂಡಾಯ ಸ್ಮರಣೆ

ಬೆಳಗಾವಿ ಜಿಲ್ಲೆಯ ವರದಿ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಯುಕ್ತ ಮೊರ್ಚಾ ಸಹಯೋಗದಲ್ಲಿ ನರಗುಂದ ನವಲಗುಂದ ರೈತ ಬಂಡಾಯದ ಸ್ಮರಣೆ ಮತ್ತು 41 ನೇ ರೈತ ಹುತಾತ್ಮರ ದಿನ ವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಪ್ರತಿಭಟನೆ ಯಲ್ಲಿ ಪಾಲ್ಗೊಳ್ಳುವ ರಾಜ್ಯ ರೈತರಿಗಾಗಿ ಇದೇ ವೇಳೆ ಟೆಂಟ್ ಉದ್ಘಾಟಿಸಲಾಯಿತು.

ರೈತರು ಬೆಳೆದ ಉತ್ಪನ್ನ ಗಳಿಗೆ ಘೋಷಿಸಲಾದ ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನಿನ ಚೌಕಟ್ಟಿನಡಿ ತರಬೇಕು ಎಂದು ಕರ್ನಾಟಕ ರಾಜ್ಯ ಸಂಘದ ಪ್ರಮುಖ ರಾದ ಚುಕ್ಕಿ. ನಂಜುಂಡ ಸ್ವಾಮಿ ಆಗ್ರಹಿಸಿದರು.

ರೈತರ ಉತ್ಪನ್ನಗಳಿಗೆ ಮುಕ್ತ ಮಾರು ಕಟ್ಟೆ ಯಲ್ಲಿ ಕನಿಷ್ಠ ಬೆಂಬಲ ಬೆಲೆ ಅಥವಾ ಅದಕ್ಕಿಂತ ಅಧಿಕ ಬೆಲೆ ಸಿಗುವಂತಾಗ ಬೇಕು ಎಂದ ಅವರು 4 ದಶಕಗಳಿಂದ ದೇಶದಾದ್ಯಂತ 3 ಲಕ್ಷ ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅದರೂ ಸರ್ಕಾರ ಗಳು ಸೂಕ್ತ ಪರಿಹಾರ ಕ್ರಮ ಕೈಗೊಂಡಿಲ್ಲಾ ಎಂದು ಆರೋಪಿಸಿದರು.

ರೈತರು ಬಳಸುವ ವಿದ್ಯುತ್,ಗೊಬ್ಬರ, ಬಿತ್ತನೆ ಬಿಜ ಗಳಿಗೆ ಮೊದಲೇ ದರ ನಿಗದಿ ಪಡಿಸುವಂತೆ ಕ್ರಷಿ ಉತ್ಪನ್ನ ಗಳಿಗೆ ಮುಂಗಡವಾಗಿ ಯೇ ಸೂಕ್ತ ಬೆಲೆ ಯನ್ನು ನಿಗದಿ ಪಡಿಸಬೇಕು ಎಂದು ಸಂಯುಕ್ತ ಕಿಸಾನ ಮೊರ್ಚಾದ ರಾಕೇಶ್. ಟಕಾಯತ.ಹಾಗೂ ಯುದ್ದ ವೀರ ಸಿಂಗ ಹೇಳಿದರು.

ಇದೇ ಸಮಯದಲ್ಲಿ ರೈತ ಮುಖಂಡ ಕೆ.ಟಿ.ಗಂಗಾಧರ,ವಿದ್ಯಾಸಾಗರ,ಮಂಜು,ಕಿರಣ,ರುಪೇಶ. ರೈ,ಲೋಕೆಶ.ಗೌಡ, ಯಲ್ಲಪ್ಪ,ನಳಿನಿ,ಸುರೇಶ್, ಮತ್ತಿತರರು ಪಾಲ್ಗೊಂಡಿದ್ದರು.
ಬೆಳಗಾವಿ ಜಿಲ್ಲೆಯ ಯರಗಟ್ಟಿ ಯಲ್ಲಿ
ಹುತಾತ್ಮರ ದಿನಾಚರಣೆ ಹಸಿರೇ ಉಸಿರು ರೈತನ ಉಸಿರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿದ್ಯುತ್ ಖಾಸಗೀಕರಣ ರದ್ದಾಗಬೇಕು ನಮ್ಮ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಖಾತ್ರಿಯಾಗುವವರೆಗೂ ಕೃಷಿಗೆ ಬಳಸುವ ವಿದ್ಯುತ್‌ಚ್ಛಕ್ತಿಗೆ ಬಿಲ್ ಪಾವತಿಸುವುದಿಲ್ಲ . ಖಾಸಗಿ ಕಂಪೆನಿಗಳಿಗೆ ವಿದ್ಯುತ್ ಕ್ಷೇತ್ರವನ್ನು ಹಸ್ತಾಂತರಿಸುವ ಹುನ್ನಾರ ನಡೆಸಿರುವ ಕೇಂದ್ರ ಸರ್ಕಾರ ವಿದ್ಯುತ್ಚ್ಛಕ್ತಿ ಮಸೂದೆಯನ್ನು ಹಿಂಪಡೆಯಬೇಕು . ದಿನಾಂಕ 21 ಜುಲೈ 1980 ರಂದು ನರಗುಂದದಲ್ಲಿ ನಡೆದ ರೈತ ಬಂಡಾಯದಲ್ಲಿ ಹುತಾತ್ಮರಾದ ಶ್ರೀ ಈರಪ್ಪ ಕೊಡ್ಲಿಕೊಪ್ಪ ಮತ್ತು ಬಸಪ್ಪ ಲಕ್ಕುಂಡಿ ಮತ್ತು ಹಲವೆಡೆ ಪೊಲೀಸ್ ಗುಂಡೇಟಿಗೆ ಹುತಾತ್ಮಾರಾಗಿರುವ 139 ರೈತ ಬಾಂಧವರ ಬಲಿದಾನವನ್ನು ನೆನೆಯುತ್ತಾ …. ನಿಮ್ಮ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ … ಕೃಷಿ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಲು ಸಂಕಲ್ಪ ದಿನ ಶಿರೋಳ ರೈತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ರೈತ ಮುಖಂಡರು ರೈತ ನಾಯಕರು ಪ್ರಗತಿಪರ ರೈತರು ಉಪಸ್ಥಿತಿ ಇದ್ದರು

ವರದಿಗಾರ:ಕೆ.ಎಸ.ಬಾಂಗಿ.GB NEWS ಕನ್ನಡ. ಜಮಖಂಡಿ ಸುದ್ದಿಗಳಿಗಾಗಿ  GBnewskannada.com. ವೀಕ್ಷಿಸಿ ನರಗುಂದ ನವಲಗುಂದ

=5

follow me

Leave a Reply

Your email address will not be published.

error: Content is protected !!
×