ಕೊಲೆ ಆರೋಪಿ ಮದುವೆಯಲ್ಲಿ ಪೊಲೀಸರು ಭಾಗಿ ಪ್ರಕರಣ; ಅಪಪ್ರಚಾರಕ್ಕೆ ಇಳಿದ ತಂಗಡಗಿಗೆ ಉದಯರವಿ ಟಾರ್ಗೆಟ್

ವರದಿ: ಗೋವಿಂದರಾಜ್ ಬೂದಗುಂಪಾ

ಕೊಲೆ ಆರೋಪಿ ಮದುವೆಯಲ್ಲಿ ಪೊಲೀಸರು ಭಾಗಿ ಪ್ರಕರಣ; ಮತ್ತಿಬ್ಬರು ಅಧಿಕಾರಿಗಳ ಫೋಟೋ ವೈರಲ್

ಗಂಗಾವತಿ ಕಾರಟಗಿ ಭಾಗದ ಮೂರುಜನ ಪೊಲೀಸ್ ಅಧಿಕಾರಿಗಳು ಕಡ್ಡಾಯ ರಜೆಯ ಮೇಲೆ ಹೋಗಲು ಕಾರಣೀಭೂತರಾದ ಪತ್ರಕರ್ತ ಚಾಮರಾಜ ಸವಡಿ ಅವರೇ.. ನಿಮಗೆ ಕೇವಲ ಆ ಮೂರು ಜನ ಅಧಿಕಾರಿಗಳು ಮಾತ್ರ ಕಾಣಿಸಿದರೆ ಅಲ್ಲಿ ಇನ್ನೊಂದಿಷ್ಟು ಜನ ಅಧಿಕಾರಿಗಳು ಕೂಡ ಇದ್ದರು. ಮತ್ತು ಜನರ ಪರವಾಗಿ ಸೇವೆ ಮಾಡುತ್ತೇವೆ ಅಂತ ಜನಪ್ರತಿನಿಧಿಗಳು ಆಗಿರುವ ರಾಜಕಾರಣಿಗಳು ಕೂಡ ಇದ್ದರು, ವಿಶೇಷವಾಗಿ ಅಹಿಂದ ನಾಯಕ ಎಂದು ಬಿಂಬಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಮತ್ತು ಸ್ಥಳೀಯ ಮಾಜಿ ಮಂತ್ರಿ ಕುತಂತ್ರ ರಾಜಕಾರಣ ಮಾಡುತ್ತಿರುವ ಶಿವರಾಜ್ ತಂಗಡಿಗಿ ಅವರೇ ಸ್ವತಃ ಇದರಲ್ಲಿ ಭಾಗವಹಿಸಿದ್ದರು ಇವರು ಸಮಾಜಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ದರು ಪತ್ರಕರ್ತರೇ ಇದು ನಿಮಗೆ ಕಾಣಲಿಲ್ಲವೇ.

ಚಾಮರಾಜ ಸವಡಿ ಅವರು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಾರೆ ಅನ್ನುವ ಸುದ್ದಿ ಕೊಪ್ಪಳದ ಜನರ ಬಾಯಲ್ಲಿ ಹರಿದಾಡುತ್ತಿದೆ

Advertising

ಕೊಪ್ಪಳ ತಾಲೂಕಿನ ಕಾರಟಗಿ  ಜಿಬಿ ನ್ಯೂಸ್ ಕನ್ನಡ ಸುದ್ದಿ: ಯಲ್ಲಾಲಿಂಗನ ಕೊಲೆ ಪ್ರಕರಣದ ಆರೋಪಿ ಮಹಾಂತೇಶ ನಾಯಕ ಮದುವೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಕೊಪ್ಪಳ ಎಸ್ಪಿ ಆದೇಶಿಸಿದ್ದಾರೆ. ಬೆನ್ನಲ್ಲೇ ಮತ್ತಿಬ್ಬರು ಪೊಲೀಸ್ ಅಧಿಕಾರಿಗಳು ಇದೇ ವೇದಿಕೆಯಲ್ಲಿ ಸ್ಮೈಲ್ ಕೊಟ್ಟು ಫೋಟೊಕ್ಕೆ ಫೋಸ್ ನೀಡಿರೋ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಾಯಚೂರು ಜಿಲ್ಲೆ ಸಿಂಧನೂರು ಡಿವೈಎಸ್ಪಿ ಹಾಗೂ ಈ ಹಿಂದೆ ಕೊಪ್ಪಳ ಡಿವೈಎಸ್ಪಿ ಆಗಿದ್ದ ವೆಂಕಟಪ್ಪ ಮತ್ತು ಕಂಪ್ಲಿ ಸಿಪಿಐ ಹಾಗೂ ಈ ಹಿಂದೆ ಗಂಗಾವತಿ ಗ್ರಾಮೀಣ ಠಾಣೆ ಸಿಪಿಐ ಆಗಿದ್ದ ಸುರೇಶ ತಳವಾರ ಅವರ ಫೋಟೊ ವೈರಲ್ ಆಗಿವೆ.

ಗಂಗಾವತಿ ಗ್ರಾಮೀಣ ಸಿಪಿಐ ಉದಯರವಿ ಅವರ ಮೇಲಿನ ಸಿಟ್ಟಿಗೆ ನೈತಿಕತೆ ಪ್ರಶ್ನೆ ಮುಂದಿಟ್ಟು, ಇತರೇ ಅಧಿಕಾರಿಗಳು ಭಾಗವಹಿಸಿದ್ದರ ಬಗ್ಗೆ ಜಾಣ ಕುರುಡು ಪ್ರದರ್ಶನ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗ್ತಿದೆ.
ಈ ಇಬ್ಬರು‌ ಅಧಿಕಾರಿಗಳು ಸಮವಸ್ತ್ರ ಇಲ್ಲದೇ ಮದುವೆಗೆ ಹಾಜರಾಗಿದ್ದಾರೆ ಎಂಬ ಸಮರ್ಥನೆ ಹೊರತಾಗಿ, ರಜೆ ಹಾಕದೇ ಮದುವೆಗೆ ಹಾಜರಾಗಿರೋ ಈ ಇಬ್ಬರೂ ಅಧಿಕಾರಿಗಳ ವಿರುದ್ಧವೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಈ ಇಬ್ಬರೂ ಅಧಿಕಾರಿಗಳ ಪೈಕಿ ಸಿಪಿಐ ಸುರೇಶ ತಳವಾರ ಅವರು ಹುಲಿಹೈದರ ಗ್ರಾಮ ಒಳಪಡುವ ಗಂಗಾವತಿ ಗ್ರಾಮೀಣ ಠಾಣೆ ಮತ್ತು ನೆರೆಯ ಕುಷ್ಟಗಿ ಸಿಪಿಐ ಆಗಿ ಕೆಲಸ ಮಾಡಿದ್ದಾರೆ. ಡಿವೈಎಸ್ಪಿ ವೆಂಕಟಪ್ಪ ಅವರು ಹಿಂದಷ್ಟೇ ಕೊಪ್ಪಳ ಡಿವೈಎಸ್ಪಿ ಆಗಿದ್ದರು. ಈಗ ಮದುವೆ ಆಗಿರೋ ಯಲ್ಲಾಲಿಂಗ ಕೊಲೆ ಆರೋಪಿಗಳಾದ ಮಹಾಂತೇಶ ಮತ್ತು ಹನುಮೇಶ ಬಗ್ಗೆ ಈ ಅಧಿಕಾರಿಗಳಿಗೂ ಎಲ್ಲ ಮಾಹಿತಿ ಇದ್ದಾಗಿಯೂ ಮದುವೆಗೆ ಹಾಜರಾಗಿರುವುದು ಯಾವ ನೈತಿಕತೆ ಎಂಬ ಪ್ರಶ್ನೆ ಎದ್ದಿದೆ.

ಟಾರ್ಗೆಟ್ ಉದಯ ರವಿ:

ಸದ್ಯ ಶಿಕ್ಷೆಗೆ ಗುರಿಯಾಗಿರೋ ಸಿಪಿಐ ಉದಯ ರವಿ ರಾಜೀನಾಮೆ ನೀಡಿ, ರಾಜಕೀಯಕ್ಕೆ ಬರಬಹುದು. ಕನಕಗಿರಿ ವಿಧಾನಸಭೆ ಕ್ಷೇತ್ರದಲ್ಲೇ ಸ್ಪರ್ಧೆ ಮಾಡಬಹುದು ಎಂಬ ಚರ್ಚೆ ಕನಕಗಿರಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಕೇಳಿ ಬಂದಿತ್ತು. ಈ ಚರ್ಚೆ ಶುರುವಾದಾಗಿನಿಂದ ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಸಿಪಿಐ ಉದಯ ರವಿ ಅವರ ಮೇಲೆ ದಾಖಲೆ ಇಲ್ಲದೇ ಇಲ್ಲಸಲ್ಲದ ಆರೋಪ ಮಾಡುತ್ತಲೇ ಬಂದಿದ್ದರು. ಆಡಿಯೋ ಕ್ಲಿಪ್ ಇದೆ ಎಂದು ಬಟ್ಟೆ ಹಾವು ಬಿಟ್ಟು ಬೆದರಿಕೆ ಹಾಕಿದ್ದಲ್ಲದೇ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಕೊಪ್ಪಳ ಎಸ್ಪಿ ಅವರಿಗೆ ಪತ್ರ ಬರೆಯಿಸಿ,ಪೊಲೀಸ್ ಅಧಿಕಾರಿಯ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದ್ದರು. ಒಂದೊಮ್ಮೆ ಉದಯ ರವಿ ಅವರು ಸ್ಪರ್ಧಿಸಿದರೆ ಸೋಲುಣ್ಣುವ‌ ಭಯದಿಂದ ಅಪಪ್ರಚಾರ ಆರಂಭಿಸಿದ್ದ ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಈ ಪ್ರಕರಣ ದಾಳವಾಗಿ ಬಳಸಿಕೊಂಡು, ಕೆಲ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಫೋಟೊ ವೈರಲ್ ಮಾಡಿ, ಮಾಧ್ಯಮದಲ್ಲಿ ಸುದ್ದಿ ಆಗುವಂತೆ. ಈ ಮೂಲಕ ಅಮಾನತು ಮಾಡಿಸಲು ಮುಂದಾಗಿದ್ದಾರೆ. ಉದಯ ರವಿ ಅವರ ಮೇಲಿನ ಸಿಟ್ಟಿಗೆ ಸ್ವತಃ ತಮ್ಮ ಬೆಂಬಲಿಗ ಹನುಮೇಶ ನಾಯಕನಿಗೂ ಮಾನಸಿಕ ಹಿಂಸೆ ನೀಡಿದ್ದಾರೆ.

ಕೀಳು ಮಟ್ಟದ ಅಪಪ್ರಚಾರಕ್ಕೆ ಇಳಿದ ತಂಗಡಗಿ

ಉದಯರವಿ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಭಯದಲ್ಲಿ ತಂಗಡಗಿ:

ಆದರೆ, ವಾಸ್ತವದಲ್ಲಿ ಸಿಪಿಐ ಉದಯ‌ರವಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವ ಯೋಚನೆ ಮತ್ತು ಉದ್ದೇಶ ಇಲ್ಲವಂತೆ. ಶಿವರಾಜ ತಂಗಡಗಿ ಅವರ ಈ ನಡೆಯಿಂದ ಈ ಬಗ್ಗೆ ಅನೇಕ ಬಾರಿ, ಸ್ವತಃ ಶಿವರಾಜ ತಂಗಡಗಿ ಆಪ್ತರ ಮುಂದೆಯೇ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಬಹಿರಂಗವಾಗಿಯೇ ಹೇಳಿದ್ದಾರೆ.‌ ಆದಾಗ್ಯೂ ಅವಸರಕ್ಕೆ ಬಿದ್ದ ತಂಗಡಗಿ ಸಾಹೇಬರು ಅಧಿಕಾರಿಗಳ ಬಗ್ಗೆ ಸತತವಾಗಿ ಅಪಪ್ರಚಾರ ಮಾಡುತ್ತಲೇ ಬಂದಿದ್ದು‌ ನಾಚಿಕೆಗೇಡಿನ ಸಂಗತಿ.

ಜನಸ್ನೇಹಿ ಪೊಲೀಸ್:

ವಾಸ್ತವದಲ್ಲಿ ಸಿಪಿಐ ಉದಯ‌ ರವಿ ಅವರು ಎಲ್ಲ ಕೇಸ್ ಎಫ್ ಐ ಆರ್ ಮಾಡದೇ, ರಾಜೀಸಂದಾನ ಮಾಡುವ ಮೂಲಕ ಜನರಲ್ಲಿ ದ್ವೇಷ- ಅಸೂಯೆ ಹೆಚ್ಚದಂತೆ ನೋಡಿಕೊಂಡಿದ್ದರು. ಇದು ಜನಸ್ನೇಹಿ ಪೊಲೀಸ್ ನ ಒಂದು ಭಾಗವೂ ಹೌದು. ಇದನ್ನೆ ತಂಗಡಗಿ ಅವರು ತಪ್ಪಾಗಿ ಅರ್ಥ ಮಾಡಿಕೊಂಡು, ಇವರು ರಾಜಕಾರಣಕ್ಕೆ ಬರಲು ಹೀಗೆ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡಿದ್ದಾರೆ ಎಂಬ ಮಾತುಗಳು ಶಿವರಾಜ್ ‌ತಂಗಡಗಿ ಆಪ್ತ ‌ವಲಯದಲ್ಲೇ ಕೇಳಿ ಬಂದಿವೆ.

ಅಧಿಕಾರಿಗಳು ಹೋಗಿದ್ದೇಕೆ?:‌‌

ಸದ್ಯ ಮಹಾ ಅಪರಾಧಿಗಳಂತೆ ಬಿಂಬಿತವಾಗಿರೋ ಮೂವರು ಅಧಿಕಾರಿಗಳು ಹುಲಿಹೈದರ ಗ್ರಾಮಕ್ಕೆ ಸಮವಸ್ತ್ರದಲ್ಲೇ ಭೇಟಿ ನೀಡಿದ್ದು ಏಕೆ? ಅಧಿಕಾರಿಗಳು ನೀಡುವ ಕಾರಣಕ್ಕೆ ಸೂಕ್ತ ದಾಖಲೆ‌ ಇವೆಯಾ ಎಂಬುದು ಚರ್ಚೆ ಆಗಬೇಕಿದೆ. ವಾಸ್ತವದಲ್ಲಿ ಈ ಮೂವರು ಅಧಿಕಾರಿಗಳು ಜುಲೈ 18 ರಂದು ಹುಲಿಹೈದರ ಗ್ರಾಮಕ್ಕೆ ಭೇಟಿ‌ ನೀಡಿದ್ದು, ಕಳ್ಳತನ ಪ್ರಕರಣವೊಂದರ ಸ್ಥಳ ಪಂಚನಾಮೆ ಮಾಡಲು. ಪೊಲೀಸರು ದಸ್ತಗಿರಿ ಮಾಡಿದ ಕಳ್ಳತನದ ಆರೋಪಿ ರಾಜಾಸಾಬ್ ಹುಲಿಹೈದರ ಗ್ರಾಮದವ. ಈತನಿಂದ ಒಟ್ಟೂ 23 ತೊಲೆ ಚಿನ್ನ ರಿಕವರಿ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಅದೇ ಗ್ರಾಮದಲ್ಲೇ ಆತ‌ 3 ಮನೆ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅದೇ ದಿನ ಅಧಿಕಾರಿಗಳು ಕಳ್ಳತನ ಆಗಿರೋ ಹುಲಿಹೈದರ ಗ್ರಾಮದ ನಾಗರತ್ನ ಶೆಟ್ಟರ, ರಾಜಾಸಾಬ್,‌ ಬುಡನ್ ಸಾಬ್ ಎಂಬುವರ ಮನೆಯಲ್ಲಿ ಪಂಚನಾಮೆ ಮಾಡಿದ್ದಾರೆ. ಈ ಪ್ರಕರಣದ ಸ್ಥಳ ಪಂಚನಾಮೆಗೆ ಹೋಗಿದ್ದ ಈ ಅಧಿಕಾರಿಗಳು ಕನಕಗಿರಿಗೆ ವಾಪಾಸ್ ಬರುವಾಗ, ರಾಜ್ಯ ಹೆದ್ದಾಗಿ ಪಕ್ಕದಲ್ಲೇ ಮದುವೆ ವೇದಿಕೆ ಇದ್ದು, ಟ್ರಾಫಿಕ್ ಜಾಮ್ ಆಗಿದೆ. ರಸ್ತೆಯಲ್ಲಿದ್ದ ನೂರಾರು ಜನ ವಧುವರರಿಗೆ ಹಾರೈಸುವಂತೆ ಮನವಿ ಮಾಡಿದ್ದರಿಂದ ವೇದಿಕೆಗೆ ಹೋಗಿದ್ದಾರೆ. ಅಲ್ಲೇ ಇದ್ದ ಗ್ರಾಮದ ಮುಖಂಡರು, ಹಾರ ಹಾಕಿ ಅಭಿನಂದಿಸಿದ್ದರಿಂದ ಅನಿವಾರ್ಯವಾಗಿ ಫೋಟೊ ತೆಗೆಸಿಕೊಂಡಿದ್ದಾರೆ.‌ ಇದನ್ನು ಸಿಪಿಐ ಉದಯ ರವಿ ಅವರನ್ನು ತಪ್ಪಿನಲ್ಲಿ ಸಿಕ್ಕಿಸಲೇ‌ ಬೇಕು ಎಂದು ಕಾದು ಕುಳಿತಿದ್ದ ಕೆಲವರು ಮಹಾ ಅಪರಾಧ ಎನ್ನುವಂತೆ ‌ಬಿಂಬಿಸಿದ್ದಾರೆ.

ಕೀಳು ಮಟ್ಟದ ಅಪಪ್ರಚಾರ:

ಸಿಪಿಐ ಉದಯ ರವಿ ಅವರ ಬಗ್ಗೆ ಇಡೀ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಪ್ರಚಾರ ಮಾಡಿದ್ದು ಇದೇ ಮೊದಲಲ್ಲ. ಕಳೆದ ಒಂದು ವಾರದ ಹಿಂದಷ್ಟೇ ಉದಯ ರವಿ ಅವರ ಬಗ್ಗೆ ತೀರಾ ಕೀಳು ಮಟ್ಟದ ಸುದ್ದಿ ಹರಡಿಸಿದ್ದರು.

ಕೊಪ್ಪಳ ಎಸ್ಪಿ ಟಿ ಶ್ರೀಧರ್

ಜೊತೆಗೆ ಇದನ್ನು ಕೊಪ್ಪಳ ಎಸ್ಪಿ ಅವರಿಗೆ ಸತ್ಯ ಎನ್ನುವಂತೆ ಹೇಳಿ, ಪೊಲೀಸ್ ‌ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುವಂತಹ ವಾತಾವರಣ ನಿರ್ಮಾಣ ಮಾಡಿದ ಕಳ್ಳರು ಮತ್ತವರ ಬೆಂಬಲಿಗರ ಬಗ್ಗೆಯೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ತನಿಖೆ ಮಾಡಬೇಕಿದೆ. ಆಗುವುದಾದರೆ ಮದುವೆಯಲ್ಲಿ ಭಾಗಿಯಾದ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಕನಕಗಿರಿ ತಹಸೀಲ್ದಾರ್ ರವಿ ಅಂಗಡಿ ಅವರಿಗೂ ಶಿಕ್ಷೆ ಆಗಬೇಕಿದೆ.

ಬದ್ಧತೆಯಿರುವ ಪತ್ರಕರ್ತ ಚಾಮರಾಜ ಸವಡಿ ಮಾಡಿದ ಅವಾಂತರ:

ಫೇಸ್ಬುಕ್ ನಲ್ಲಿ ಮೊದಲ ಬಾರಿಗೆ ಇದನ್ನು ಸುದ್ದಿ ಮಾಡಿದ ಪತ್ರಕರ್ತರಾದ ಚಾಮರಾಜ ಸವಡಿ ಅವರಿಗೆ ನಿಜವಾಗಲೂ ಅವರಿಗೆ ಬದ್ಧತೆ ಇದ್ದದ್ದೇ ಆದರೆ ಕೇವಲ ಉದಯರವಿ, ರುದ್ರೇಶ್ ಉಜ್ಜನಕೊಪ್ಪ, ಮತ್ತು ಇನ್ನೊಬ್ಬ ಪಿಎಸ್ಐ ಅವರನ್ನು ಮಾತ್ರ ಟಾರ್ಗೆಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ನೈತಿಕತೆಯ ಪ್ರಶ್ನೆ ಮಾಡುತ್ತಿರಲಲ್ಲ.

ಅಲ್ಲಿ ಕೇವಲ ಈ ಮೂರು ಜನ ಮಾತ್ರ ಇರಲಿಲ್ಲ ಇನ್ನೂ ಹಲವಾರು ಅಧಿಕಾರಿಗಳು ಇದ್ದರು ಅವರ ಹೆಸರುಗಳನ್ನು ಯಾಕೆ ಫೇಸ್ಬುಕ್ನಲ್ಲಿ ವೈರಲ್ ಮಾಡಲಿಲ್ಲ, ಸ್ವತಃ ಚಾಮರಾಜ ಸವಡಿ ಅವರೇ ತಮ್ಮ ಬದ್ಧತೆಯ ಬಗ್ಗೆ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ಯಾಕೆಂದರೆ ಕೇವಲ ಮೂರು ಜನರ ಟಾರ್ಗೆಟ್ ಮಾತ್ರ ಮಾಡಿದವರು ಜನಪರ ರಾಜಕಾರಣಿಗಳು ಮತ್ತು ಅಧಿಕಾರಿಗಳು ಎನಿಸಿಕೊಂಡವರನು ಬಿಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

=26

follow me

Leave a Reply

Your email address will not be published.

error: Content is protected !!
×