ಇಂಡಿ ಪಟ್ಟಣದಲ್ಲಿ 24×7 ಕುಡಿಯುವ ನೀರಿನ ದರ ಸರಕಾರದ ಆದೇಶಕ್ಕಿಂತ ಹೆಚ್ಚಾಗಿ150ರೂ.ಪಡೆಯುತ್ತಿದ್ದು ದರವನ್ನು ಮರು ಪರಿಷ್ಕರಣೆ ಇಲ್ಲವಾದರೆ ಕರ್ನಾಟಕ ಪ್ರದೇಶ ಮಾದಿಗರ ಸಂಘದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ

ವಿಜಯಪೂರ ನ್ಯೂಸ್.

ಕುಡಿಯುವ ನೀರಿನ ದರ ಮರು ಪರಿಷ್ಕರಿಸಲು ವರದಿ:ಬಿ.ಎಸ್.ಹೂಸೂರ್

GBnewskannada:ವಿಜಯಪೂರ.ಇಂಡಿ ಪಟ್ಟಣದಲ್ಲಿ 24×7 ಕುಡಿಯುವ ನೀರಿನ ದರ ಸರಕಾರದ ಆದೇಶಕ್ಕಿಂತ ಹೆಚ್ಚಾಗಿ ಪಡೆಯುತ್ತಿದ್ದು ದರವನ್ನು ಮರು ಪರಿಷ್ಕರಣೆ ಮಾಡಬೇಕೆಂದು ಕರ್ನಾಟಕ ಪ್ರದೇಶ ಮಾದಿಗರ ಸಂಘ ತಾಲೂಕ ಸಮಿತಿ ಇಂಡಿ ವತಿಯಿಂದ ಉಪವಿಭಾಗಧಿಕಾರಿಗಳಾದ ರಾಹುಲ್ ಶಿಂದೆ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.ನಂತರ ಕರ್ನಾಟಕ ಪ್ರದೇಶ ಮಾದಿಗರ ಸಂಘದ ತಾಲೂಕ ಸಮಿತಿ ಅಧ್ಯಕ್ಷ ಚಂದ್ರಶೇಖರ ಹೊಸಮನಿ ಮಾತನಾಡಿ ಸರಕಾರದ ಆದೇಶದಲ್ಲಿ ಒಂದು ಕನೆಕ್ಷನ್ ಗೆ 56 ರೂ ದರ ನಿಗದಿ ಇದ್ದು ಇಂಡಿ ಪಟ್ಟಣದ ಪುರಸಭೆ ವತಿಯಿಂದ 150 ರೂಪಾಯಿ ವಸೂಲಿ ಮಾಡಲಾಗುತ್ತಿದೆ.ಕೂಡಲೆ ದರ ಪರಿಷ್ಕರಣೆ ಮಾಡಿ ಸರಕಾರದ ಆದೇಶದಂತೆ ಹಣ ಜಮಾ ಮಾಡಿಕೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ ಒಂದು ವೇಳೆ ದರ ಬದಲಾವಣೆ ಮಾಡದಿದ್ದರೆ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜಕುಮಾರ ಪಡಗಾನೂರ.ದಯಾನಂದ ಹೊಸಮನಿ.ಸಂತೋಷ ಕಾಳೆ.ಫಯಾಜ ಬಾಗವಾನ.ಚಂದ್ರಶೇಖರ ಹೊಸಮನಿ.ಅವಿನಾಶ ಸಿಂದೆ.ಪ್ರದೀಪ ಡೊಳ್ಳಿನ.ಅಂಬಣ್ಣ ಮಾದರ.ಭಾಗಪ್ಪ ವಾಲಿಕಾರ.ಅಸ್ಲಂ ಬಾಗವಾನ.ಹುಸೇನಿ ಮಾದರ.ಕಿರಣ ಕಟ್ಟಿಮನಿ.ಅವಿನಾಶ ಹಚ್ಯಾಳ. ಇತರರು ಇದ್ದರು.

=4

follow me

Leave a Reply

Your email address will not be published.

error: Content is protected !!
×