ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಬಾಳ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ.

ಬಾಗಲಕೋಟೆ ಜಿಲ್ಲೆಯ ವರದಿ.

GBnewskannada : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಬಾಳ ಗ್ರಾಮದ ಪರೀಕ್ಷೆ ಕೇಂದ್ರದ ಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಕೋವಿಡ ನಿಯಮಾನುಸಾರ ವಾಗಿ ನಡೆಯುತ್ತಿದೆ. ಜಮಖಂಡಿ ತಾಲ್ಲೂಕಿನ ಆಲಬಾಳ ಪರೀಕ್ಷೆ ಕೇಂದ್ರದ ಲ್ಲಿ 120 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಕರೋನಾ ದಿಂದ ರದ್ದಾಗಿದ್ದ S.S.L.C ಪರೀಕ್ಷೆ ಇಂದು ಬಾಗಲಕೋಟೆ ಜಿಲ್ಲೆಯ ಶಿಕ್ಷಣ ಇಲಾಖೆ ನೇತ್ರತ್ವದಲ್ಲಿ ಸುರಕ್ಷಿತ ವಾಗಿ ನಡೆಯುತ್ತಿದೆ.

S.S.L.C ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿ ಗಳಿಗೆ ನಮ್ಮ GB NEWS ಕನ್ನಡ. ವಾಹಿನಿ ಯಿಂದ ಶುಭ ಹಾರೈಕೆ ಗಳು.

ಕರೋನಾ ಬೀತಿ ನಡುವೆಯೇ ಇಂದಿನಿಂದ 19-7-2021 ರಂದು 2020-21 ಸಾಲಿನ ಎಸ.ಎಸ.ಎಲ.ಸಿ ಪರೀಕ್ಷೆ ಆರಂಭ ವಾಗುತ್ತಿದೆ ಕರೋನಾ ಆತಂಕ ಇರುವುದರಿಂದ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸಾಮಾನ್ಯವಾಗಿ ಆರು ದಿನ ನಡೆಯುತ್ತಿದ್ದ ಪರೀಕ್ಷೆ ಇದೇ ಮೊದಲ ಬಾರಿಗೆ ಎರಡೇ ದಿನ ದಲ್ಲಿ ಮುಗಿದು ಹೋಗಲಿದೆ.

S.S.L.C ಬೋರ್ಡ್ ಸಕಲ ರೀತಿಯಲ್ಲಿ ಸಜ್ಜಾಗಿದ್ದು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದೆ ಬೆಂಚಿಗೆ ಒಬ್ಬ ರಂತೆ ವಿದ್ಯಾರ್ಥಿ ಗಳನ್ನು ಕುರಿಸ ಲಾಗುತ್ತಿದೆ.ಇದೆ ಕಾರಣಕ್ಕೆ ಪರೀಕ್ಷೆ ಕೇಂದ್ರ ಗಳನ್ನು ಹೆಚ್ಚು ಮಾಡಲಾಗಿದೆ. ಒಂದು ಕೊಠಡಿ ಯಲ್ಲಿ 12 ಮಕ್ಕಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ.

ಪರೀಕ್ಷೆ ಮೇಲ್ವಿಚಾರಕ ರಿಗೆ ನಡೆಸಲು ನಿಯೋಜಿಸುವ ಸಿಬ್ಬಂದಿ ಗೆ ಒಂದು ಡೋಸ ಲಸಿಕೆ ನೀಡಲಾಗಿದೆ.

ಇಂದು ಗಣಿತ, ವಿಜ್ಞಾನ, ಹಾಗೂ ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 10-30 ರಿಂದ ಮದ್ಯಾನ 1-30 ರ ವರೆಗೆ ನಡೆಯಲಿದೆ. ಕೇಂದ್ರ ಗಳಲ್ಲಿ ಮಾಸ್ಕ,ಸ್ಯಾನಿ ಟೈಜರ ನೀಡಲಾಗುತ್ತದೆ. ಇದೆ ಸಂದರ್ಭದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸಿಬ್ಬಂದಿಯ ವರಾದ ಶ್ರೀ ಮತಿ ಬಿ.ಎಮ.ಸಣ್ಣಟ್ಟಿ.ಆರೋಗ್ಯ ಸಂರಕ್ಷಣಾ ಧಿಕಾರಿ ಹಾಗೂ ಬಿ.ಎ.ಕಟವಾಣಿ.ಆರೋಗ್ಯ ನಿರಿಕ್ಷಣಾದಿಕಾರಿ ಗಳಿಂದ ಕೋವಿಡ ನಿಯಮಗಳ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಹ್ಯಾಂಡ್‌ ಸ್ಯಾನಿ ಟೈಜರ ಥರ್ಮಲ್ ಸ್ಕಿನಿಂಗ ಪ್ರಥಮ ಚಿಕಿತ್ಸೆ ಮಾಡಲಾಯಿತು.

ಬಸಪ್ಪಾ.ವಾಲಿ.ಮುತ್ತೂರ ಪ್ರೌಡ ಶಾಲೆಯ ಮುಖ್ಯ ಶಿಕ್ಷಕರು GB ನ್ಯೂಸ್ ಕನ್ನಡ ವಾಹಿನಿಯೊಂದಿಗೆ ಮಾತನಾಡಿ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ಒಟ್ಟು 44 ಪರೀಕ್ಷೆ ಕೇಂದ್ರ ಗಳಿದ್ದು ಈ ನಮ್ಮ ಸರ್ಕಾರಿ ಪ್ರೌಢ ಶಾಲೆ ಆಲಬಾಳ ಪರೀಕ್ಷಾ ಕೇಂದ್ರದ ಲ್ಲಿ ಒಟ್ಟು53 ಗಂಡು ವಿದ್ಯಾರ್ಥಿಗಳು ಹಾಗೂ 47 ಹೆಣ್ಣು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಮತ್ತು ರಿಪಿಟರರಾಗಿ 20 ವಿದ್ಯಾರ್ಥಿಗಳು ಬರೆಯುತ್ತಿದ್ದಾರೆ ಹೀಗಾಗಿ ಒಟ್ಟು120 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಹೇಳಿದರು.

ವರದಿ:ಕೆ.ಎಸ.ಬಾಂಗಿ. GB NEWS ಕನ್ನಡ. ಜಮಖಂಡಿ. ಸುದ್ದಿಗಳಿಗಾಗಿ ವೀಕ್ಷಿಸಿ GBnewskannada.com

=6

follow me

Leave a Reply

Your email address will not be published.

error: Content is protected !!
×